ಕೆರಳಿ ಮೊರೆವ ಕಡಲಿನಲ್ಲಿ ಬಿರುಕುಪಡೆದ ಕಿರಿಯ ನಾವೆ ಬಿರಿಯುತಿಹುದು ಬಿರುಸಿನೆದೆಯ ಕಾಯೆ ತಾಯೆ ಅಭಯದಾಯಿನಿ ! ಬಂದರಗಳ ಬಂಧಮೀರಿ ಬಂದು ನೀರ ಹರಹಿನಲ್ಲಿ ಮಿಂದು ತೇಲಿ ಸ್ವಚ್ಛಂದದಿ ಮುಂದೆ ಹುಟ್ಟುಹಾಕುತಿರುವೆನು. ೧ ಕಂಗಾಣದ ಗಾಳಿಸೆಳೆಗೆ ತುಂಗಗಿರಿಯ ತೆರದ ತೆರೆಯು ನುಂಗುವಂತೆ ಏರಿಏರಿ ಬಂದು ಸುತ್ತುವರಿದು ಮ...

ಧ್ವನಿಸಿ ಬಯಲಾಗುತಿಹ ಸುರಗಾನದಂತೆ, ಕನಸಿನಲಿ ಗೈದಿರುವಮೃತ ಪಾನದಂತೆ, ವನಧಿಯಡಿಯಿಂದೆದ್ದಳಿವ ಫೇನದಂತೆ, ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ. ಮುದಿತಂದೆ ಎಲುಬುಗೂಡಿನ ಬೆನ್ನನೇರಿ, ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ, ಕುದುರೆಯಾಟವಗೈದ ನೆ...

ಎಂತು ನೋಡಿದೊಡಂ ಅಂದಿದ್ದೊಂದು ಹೊಟ್ಟೆ ಹಸಿವಡಗಿಸಲು ಬಂದಾ ರಸಗೊಬ್ಬರದವಾಂತರವು ಭೀಕರವಲಾ ಒಂದರಾ ಮೇಲೊಂದು ನೂರೊಂದು ಹಸಿವೆಗಳು ಸಾಲು ಸಾಲು ಬಂಧನದೊಳೊಂದೆಡೆಗೆ ಆಂ ಎನುವ ಸಾಕು ಪ್ರಾಣಿಗಳಳಲು ಯಂತ್ರ ತಂತ್ರ ಸಿಬ್ಬಂದಿಗಳಿನ್ನೊಂದೆಡೆಗೆ ಬೇಕು ಬೇಕೆ...

ಚಿಂಟೂ ಶಾಲೆಗೆ ಲೇಟಾಗಿ ಬಂದ. ಟೀಚರ್ ಶೀಲಾ ಕೇಳಿದ್ರು “ಚಿಂಟೂ ಯಾಕೆ ಲೇಟು..?” “ದಾರಿಯಲ್ಲಿ ಯಾರೋ ಹತ್ತು ರೂಪಾಯಿ ನಾಣ್ಯವನ್ನು ಕಳೆದು ಕೊಂಡಿದ್ರು” “ಅದಕ್ಕೆ ನೀನು ಯಾಕೆ ಲೇಟಾಗಿ ಬಂದೆ?” “ಆ ...

ನಾನು ವಸುಮತಿ ನಿನ್ನ ಶ್ರೀಮತಿ ದಿವ್ಯಾಲಂಕಾರಭೂಷಿತೆ ನಿನ್ನ ಹೃದಯ ವಿರಾಜಿತೆ ಸಸ್ಯಶ್ಯಾಮಲೆ, ನವರತ್ನ ಕೋಮಲೆ ಆಗಿದೆನಿಂದು ಅಂಗಾಂಗ ವಿಕಲೆ. ದಾನವನೊಬ್ಬನ ಕೈಯಿಂದ ಅಂದು ಉಳಿಸಿದೆ ವರಾಹರೂಪದೆ ಬಂದು ನೂರಾರು ದಾನವರಿಂದು ಎಳೆದಾಡುತಿಹರು ಬಳಿ ನಿಂದು...

ಎಮ್ಮ ನಲ್ಲನ ಕೂಡಿದ ಕೂಟ ಇದಿರಿಗೆ ಹೇಳಬಾರದವ್ವಾ ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ ಉರಿಲಿಂಗದೇವ ಬಂದು ನಿರಿಗೆಯ ಸೆರಗ ಸಡಿಲಿಸಲೊಡನೆ ನಾನೋ ತಾನೋ ಏನೆಂದರಿಯೆನು ಉರಿಲಿಂಗದೇವನ ವಚನ. ತಾನೇ ಹೆಣ್ಣಾಗಿ, ದೈವ ತನ್ನ ಪ್ರಿಯನಾಗಿ ...

-ಹದಿನಾರು ವರ್ಷ ವಯಸ್ಸಿನ ಮಗನಿದ್ದರೂ ಹೆಣ್ಣೂಬ್ಬಳ ಮೋಹದಲ್ಲಿ ಸಿಲುಕಿದ ಹಸ್ತಿನಾಪುರದರಸನಾದ ಶಂತನು ತನ್ನ ಒಲವಿನ ಮಡದಿ ಗಂಗೆಯಲ್ಲಿ ಪಡೆದ ದೇವವ್ರತನೆಂಬ ಮಗನ ಸುಂದರ ಬಾಳಿಗೆ ಮುಳ್ಳಾಗಿ ಸತ್ಯವತಿಯೆಂಬ ಬೆಸ್ತರ ಹುಡುಗಿಯನ್ನು ಪ್ರೀತಿಸಿದ. ತನ್ನ ತ...

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ ಬೆನ್ನಹತ್ತಿ ತಿರುಗುವ ನಾಯಿಗಳು. ಬಾಗಿಲಿಗೆ ಬಿದ್ದ ವರ್ತಮಾನ ಪತ್ರಿಕೆಯ ತುಂಬ ಕೆಂಪು ನೆ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...