ಅನಂತ ಅನಂತವಾಗಿರು ಮನವೆ ತಾಮಸ ಬೇಡ ನಿಸ್ವಾರ್‍ಥದ ಹಣತೆಯ ಹಚ್ಚು ನೀ ಓ ಮನವೆ ಕನ್ನಡ ಕನ್ನಡ ಎಂದುಲಿಯ ನೀ ಮನವೆ ದುಡಿದ ಮನಕೆ ತಣಿವ ಜಲವೆ ತಲ್ಲಣವೇಕೆ ನಿನಗೆ ಮಣಿವೆ ಧರೆಗೆ ಎಂದೆಂದಿಗೂ ನೀನು ಮಣ್ಣಿನ ಕಣ್ಣೆ ಎಂದೊಲಿದು ನಲಿಯೆ ಮನವೆ ಕನ್ನಡ ಕನ್ನಡ...
ಧರ್‍ಮದ ಹೆಸರು ದೇಶದ ತುಂಬ ಸಾವಿರ ಸಾವಿರ ಸಾವುಗಳು ಮರೆಯುವ ಮಠಗಳ ಪೀಠದ ಕೆಳಗೆ ನರಳುವ ಅಸಂಖ್ಯ ನೋವುಗಳು. ಧರ್‍ಮದ ದಳ್ಳುರಿ ದವಡೆಗೆ ಸಿಕ್ಕಿ ಜಜ್ಜಿಹೋಗಿದೆ ಮಾನವೀಯತೆ ‘ಸರ್‍ವ ಜನರಿಗೆ ಸುಖ’ ತುತ್ತೂರಿ ಹೂತು ಹೋಗಿದೆ ಸಮಾನತೆ. ಗೊಡ್ಡು ಧರ್‍ಮಗಳ...
ಶಂಕರರಾಯನಿಗೆ ಕ್ರಮಕ್ರಮವಾಗಿ ಆರೋಗ್ಗಭಾಗ್ಯವು ಒದಗಿ ಬಂದಿತು. ಮಾಧವನನ್ನು ಬಂದ ಎರಡು ವಾರದೊಳಗಾಗಿ ಕೋ ಲೂರಿಕೊಂಡು ನಡೆಯುವಷ್ಟು ಶಕ್ತಿಯುಂಟಾಯಿತು. ಒಂದು ದಿನ ಅವನು ಮಾಧವನನ್ನು ಕುರಿತು .ಅಪ್ಪಾ! ಮಾಧವ! ವಿಶ್ವನಾಥಪಂತ ರಿಗೆ ಸುಭದ್ರೆಯನ್ನು ಕೂಡ...
ಶ್ರೀಗುರುವಿಗಾಗಿ ತನುಧಾರಿಯಾಗಿ ಬಂದಂಥ ಸದಾಶಿವಗೆ ಅನಂತಾನಂತ ನತಿಯ ಉಪಕೃತಿಯ ಒಪ್ಪಿಸುವೆವು ಇವಗೆ. ಎಷ್ಟು ದುಡಿದೆ ನೀನೆಷ್ಟು ಪಡೆದೆ ಹೇ ನಮೋನಮೋ ನಿನಗೆ. ಕಷ್ಟವೇನು, ಸಂಘರ್ಷವೇನು, ಪಾಡೇನು, ತಾಳ್ಮೆಯೇನು? ನಮಗಾಗಿ ಕಲ್ಪ, ನಮಗಾಗಿ ಶಿಲ್ಪ ಸಾಧಿಸ...
೧ ಒಳ್ಳೆ ಬೆಳೆಗಳ ತಿಂದು ಪೊಳ್ಳು – ಜೊಳ್ಳಾಗಿಸುತ ಬರಗಾಲ ತರುವುದಾ ಜಿಟ್ಟೆ ಯ ಹುಳ ! ಹಳ್ಳಿಗರ ಸಂತಸವ ಕೊಳ್ಳೆ ಹೊಡೆಯುತ್ತಿಹುದು, ಕರಿಗಾಲಗುಣದ ಬಿಳಿಬಟ್ಟೆಯ ಹುಳ ! ೨ ಇರುವನಿತೆ ಕಿರುಬೆಳಕ ಮೆರೆಯಿಸುತ ಮಿರುಗಿಸುತ ಹಾರುವುದು ಮುಗಿಲೊಳಗೆ...
ಬರುತಿಎಂದೆಯಲ್ಲೊ ಬಾರದೆಹೋದೆ ಎಲ್ಲೊ| ಮಗು ಲೋಹಿತಾಶ್ವ|| ಬಿಸಿಲ ಜಳಕೆ ನಿನಗೆ ಬಾಯಾರಿಕೆಯಾಗಿಹುದೋ| ನಿನ್ನ ಹಸಿವು ಬಾಧಿಸಿಹುದೋ? ನಿನ್ನ ಜೊತೆಗಿದ್ದವರು ನೀನು ಸಣ್ಣವನೆಂದು ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?|| ಅರಮನೆಯಲಾಡಿ ಬೆಳೆದವ ನೀನು ಅಡ...
ಎನ್ನ ಎದೆಯು ಬರಿದಾಗಿದೆ ಅಲ್ಲಿ ಭಾವಗಳಿಲ್ಲ ಮತ್ತೆ ಆಸೆಗಳ ಪ್ರತಿಬಿಂಬ ಜೀವನಾಡಿಗಳಿಲ್ಲ ಮರೆಯಲಿ ನೀನಿದ್ದು ಏನಿದೆಲ್ಲ ನಿನ್ನ ಮಾಯೆ ಕ್ಷಣ ಕ್ಷಣವು ಅಶ್ರು ಬಿಂಬ ಮೋಹ ತಾಪಗಳು ಹೇಯೆ ನಿನ್ನ ನೋಡಲು ಎನ್ನ ಕಂಗಳು ತವಕಿಸಿವೆ ನಿನ್ನ ದರುಶನಕೆ ಎನ್ನ ಮ...
ಸರಕಾರಿ ಕಛೇರಿಯಲ್ಲಿ ಪ್ರತಿ ಪಾದ ಅರ್ಥ! *****...
ಬಣ್ಣದ ಚಿಟ್ಟೆ ತೆಳ್ಳನೆ ಹೊಟ್ಟೆ ನೋಡಿದ ನಮ್ಮ ಕಿಟ್ಟ ಹೊಟ್ಟೆಕಿಚ್ಚು ಪಟ್ಟ ಸಿಹಿಯ ಬಿಟ್ಟ ತೊರೆದ ನಾಷ್ಟ ಎರಡೇ ಹೊತ್ತು ಮಾಡಿದ ಊಟ ಮಾತ್ರ ಸಂಜೆ ಹೊತ್ತು ಓಟ ಕಿತ್ತ ಪಥ್ಯದಿ ಇದ್ದ ಮಾಸ ಕಳೆದ ಪೆದ್ದ ಒಂದು ತಿಂಗಳು ನಂತರ ನೋಡಿಕೊಂಡ ಹೊಟ್ಟೆ ಆಗಿತ್...
ಮನುಜ ಕೋಟಿಯ ತಣಿಸಿ ಸವಿಯಮೃತಮನ್ನುಣಿಸಿ ಬೆಳೆಸುತಿಹ ತಾಯಾಗಿ ಬೆಳಕು ಹರಿಸಿ. ಎಲ್ಲ ದೇವತೆಗಳನು ಎಲ್ಲ ಜ್ಞಾನಂಗಳನು ಧರ್ಮದೇವತೆಯಾಗಿ ನೀನು ಧರಿಸಿ ಸಕಲ ಬೆಳೆಗಳ ಬಿತ್ತು ಸಕಲ ಜೀವದ ಮುತ್ತು ನಿನ್ನಿಂದ ಬಾಳ್ಮೊದಲು ಬದುಕು ಸರಸಿ ರಸದುಂಬಿ ಮೈಯೆಲ್ಲ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






