Home / Tarini Shubadayini R

Browsing Tag: Tarini Shubadayini R

ಈಗ ಎಲ್ಲೆಲ್ಲೂ ಹಾಸ್ಯಗೋಷ್ಠಿಗಳು ನಡೆಯುತ್ತಿರುವ ಹೊತ್ತಿನಲ್ಲಿ ಹಾಸ್ಯಬರೆಹಗಳ ಅಭಿರುಚಿಯನ್ನು ಉಂಟು ಮಾಡಿದ್ದ ಹಳೆಯ ತಲೆಮಾರಿನ ಲೇಖಕರು ಮರೆಗೆ ಸರಿದು ಹೋದಂತಿದ್ದಾರೆ. ಮೊದಲಿಗೆ ವಿಶೇಷಾಂಕಗಳು, ಪತ್ರಿಕೆಗಳ ಪುರವಣಿಗಳು ಹಾಸ್ಯ ಬರಹಗಳಿಲ್ಲದಿದ್ದಲ...

ಕನ್ನಡದ ಕತೆಗಾರರೆಂದು ಮಾತ್ರ ನನಗೆ ಪರಿಚಿತವಿದ್ದ ಡಿ.ಎಸ್.ಚೌಗಲೆಯವರು ನಾಟಕಕಾರರೂ ಚಿತ್ರಕಲಾವಿದರೂ ಎಂದು ತಿಳಿದಿದ್ದು ಅವರ ನಾಟಕ ಪ್ರದರ್ಶನವನ್ನು ನೋಡುವಾಗ, ಒಂದೇ ಮನುಷ್ಯನಲ್ಲಿ ವಿಭಿನ್ನ ಕಲೆಗಳು ಸಂಗಮಿಸುವುದು ಅಪರೂಪ ಅಥವಾ ಕಲೆಗಳ ಹವ್ಯಾಸ ಹ...

ಅಡಿಗರು ಎಂದೆಂದಿಗೂ ಚಡಪಡಿಕೆಯ ಕವಿ. ಅವರು ತಮ್ಮ ಸಮಾಧಾನ, ತೃಪ್ತಿಗಳನ್ನು ಸದಾ ಪರೀಕ್ಷಿಸಿ ನೋಡುವ ಮನೋಭಾವದವರು. ಈ ಲೆಕ್ಕಕ್ಕೆ ಅವರು ಅಲ್ಲಮನ ಮಠದವರು! ಅರಿವಿನ ಅಲುಗಿನಲ್ಲಿ ಅನುಕ್ಷಣವೂ ಮಸೆದು ನೋಡಬೇಕು; ನಿಜವನ್ನೇ ಶೋಧಿಸಿ ಎದೆಗಿಟ್ಟುಕೊಳ್ಳಬ...

ಮೈಸೂರು ಮಲ್ಲಿಗೆ (೧೯೪೨) ಬಂದಿದ್ದು ಈಗ್ಗೆ ಏಳು ದಶಕಗಳ ಹಿಂದೆ. ಓದುಗರಲ್ಲಿ ಅದು ಆಗ ಹುಟ್ಟಿಸಿದ ಮಧುರ ಭಾವ ಇನ್ನೂ ಹಳತಾಗಿಲ್ಲ. ಕಾಲ ಸಂದಂತೆ ಮೈಸೂರ ಮಲ್ಲಿಗೆ ಕನ್ನಡದ ಒಂದು ಪ್ರಾತಿನಿಧಿಕ ಸಂಕಲನವಾಗಿದೆ. ನಾಡಿಗರು ಮತ್ತು ಹೊರನಾಡಿಗರೊಳಗೆ ಮತ್...

ಎಚ್.ವಿ.ಸಾವಿತ್ರಮ್ಮ ಹುಟ್ಟಿದ್ದು ೧೯೧೩ರಲ್ಲಿ. ಅಂದರೆ ಇಪ್ಪತ್ತನೆಯ ಶತಮಾನ ಆಗ ತಾನೇ ಉದಯಿಸುತ್ತಿದ್ದ ವರ್‍ಷಗಳಲ್ಲಿ. ಆದರೆ ಈ ಲೇಖಕಿ ಬರೆದದ್ದು ಆನಂತರದ ಅರ್‍ಧಶತಮಾನಕ್ಕೆ ಹೆಚ್ಚು ಸಲ್ಲುವಂತಾಯಿತು. ಕನ್ನಡದಲ್ಲಿ ಸ್ತ್ರೀವಾದ ಕಣ್ಣು ಬಿಡುತ್ತಿದ...

ಕನ್ನಡದ ಕತೆಗಾರ್‍ತಿಯರಲ್ಲಿ ಸ್ವಂತಿಕೆಯ ದನಿಯನ್ನು ಅಲ್ಪಕಾಲದಲ್ಲೇ ಮೂಡಿಸಿದ ಇಬ್ಬರು ಅಲ್ಪಾಯುಷಿಗಳೆಂದರೆ ಶ್ಯಾಮಲಾದೇವಿ ಮತ್ತು ಗೌರಮ್ಮ ತತಕ್ಷಣ ನೆನಪಾಗುತ್ತಾರೆ. ಶ್ಯಾಮಲಾ ಅವರಿಗೆ ಹೋಲಿಸಿದರೆ ಗೌರಮ್ಮ ಕನ್ನಡದ ಓದುಗರಿಗೆ ಪರಿಚಿತರು. ಕನ್ನಡದ ...

ಇದಾಗಲೇ ಹಳೆಯ ಟ್ರೆಂಡ್. ಸಮಾಜದ ವಿಧಿ ನಿಷೇಧಗಳ ಮಧ್ಯೆಯೇ ಬಿಚ್ಚಿಕೊಳ್ಳುತ್ತಿರುವ ಗುಂಪು, ವಿಭಿನ್ನವಾದ ಲೈಂಗಿಕ ವಾಂಛೆ ಹಾಗು ದೈಹಿಕ ಬದಲಾವಣೆಗಳ ಕಾರಣದಿಂದ ಬದಲಾಗುವ ಜೀವನಶೈಲಿಯು ಸಮಾಜದ ಮುಖ್ಯವಾಹಿನಿಯ ಜೀವನಶೈಲಿಯನ್ನು ನಿರಾಕರಿಸುತ್ತದೆ. ಜಗತ...

ಅಡುಗೆಕೋಣೆ, ಸಾಹಿತ್ಯ ಎನ್ನುವುದನ್ನು ರೂಢಿಗತವಾಗಿ ಮಹಿಳಾ ಸಾಹಿತ್ಯದ ಬಗ್ಗೆ ಬಳಸುತ್ತಾ ಬಂದಿರುವ ವಿಮರ್ಶಾ ಲೋಕ ಕುವೆಂಪು ಚಿತ್ರಿಸಿದ ಅಡುಗೆ ಮನೆಯ ಚಿತ್ರಣಗಳನ್ನು ವಿಶೇಷವಾಗಿ ಗಮನಿಸುತ್ತದೆ. ಒಬ್ಬ ಲೇಖಕ ಎಷ್ಟು ಸೂಕ್ಷ್ಮವಾಗಿ ಅಡುಗೆಕೋಣೆಯನ್ನು...

ವರ್‍ಷದಲ್ಲಿ ಲೆಕ್ಕಹಾಕಿ ನೋಡಿದರೆ ಕವನ ಸಂಕಲನಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಅಂದರೆ ಕಾವ್ಯ ಕಟ್ಟುವವರ ಸಂಖ್ಯೆ ಹೆಚ್ಚಾಗಿಯೇ ಕಾಣಿಸುತ್ತದೆ. ಚಳವಳಿಯ ಹಿನ್ನೆಲೆಯಿಂದ, ತಾತ್ವಿಕ ಹಿನ್ನೆಲೆಯಿಂದ ವಿಪುಲವಾಗಿ ಸೃಷ್ಟಿಯಾದ ಕಾವ್ಯದ ಹುಲುಸಾದ ಬೆಳೆ...

ಶ್ರೇಷ್ಠತೆಯ ಕಲ್ಪನೆ ಮನುಷ್ಯನಿಗೆ ಎಲ್ಲಿಂದ, ಯಾಕೆ ಬರುತ್ತದೆ ಎನ್ನುವುದೇ ಒಂದು ಸೋಜಿಗದ ವಿಷಯ. ಜರ್ಮನ್ ರಕ್ತವೇ ಶ್ರೇಷ್ಠವೆಂದು ಯಹೂದಿಗಳನ್ನು ಕೊಂದ ಹಿಟ್ಲರಿನಿಗಾಗಲಿ, ದಶಕಗಳ ಕಾಲ ಕಪ್ಪು ಜನರ ಮೇಲೆ ವಿಷಯವನ್ನು ಮೆರೆದ ಬಿಳಿಯರಿಗಾಗಲಿ, ಪ್ರಪಂ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...