ದಿಗಿಲು

ಮನೆಯಲ್ಲಿ ಬೆಳ್ಳಿಯ ತೊಟ್ಟಿಲು ಚಿನ್ನದ ಬಟ್ಟಲು ಬೆಣ್ಣೆ ತುಪ್ಪ ತಿಂದು ಬೆಳೆದ ಮಕ್ಕಳು ಮರಿ ಮಕ್ಕಳು ಎಲ್ಲೋ ಕಾಡಲ್ಲಿ ಬೆಳೆದ ಗೊಬ್ಬರ ನೀರೂ ಉಣಿಸದ ಬಿದಿರ ಊರುಗೋಲು ಎದುರಾದರೆ ಏನೋ ದಿಗಿಲು *****

ತಪ್ಪಾಯ್ತು ನನದೂ

ತಪ್ಪಾಯ್ತು ನನ್ನದೂ ಶಾಶ್ವತವಲ್ಲದ ಪ್ರೀತಿಯ ನೆನೆದು ಇಹದ ಮೋಹ ದಲ್ಲಿ ಬೆಸೆದು ನೊಂದನೂ ಗುರುವೇ ದಾರಿ ತೋರೆನಗೆ ಅವನಿಲ್ಲದ ಹಾಡು ಪಾಡು ಇವನಿಲ್ಲದ ಕಡಲು ನಿನ್ನ ಅಭಯ ಕಡಲ ದೋಣಿಯಲಿ ನಾನು ದಡವ ಸೇರಿಸು...

ಜೋಗದ ಜೋಗಿ ನೀನು

ಜೋಗದ ಜೋಗಿ ನೀನು ಏಕೆ ಕಾಡುವೆ ನನ್ನನ್ನು ನೀನು ನೀನಾಗಿರಲು ಜೋಗಿ ನನಗಿಲ್ಲ ಚಿಂತೆ ಏನು ಹೋಗು ಹೋಗೆಲೋ ಜೋಗಿ ಮುಂದಕೆ ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ ಏನೆಂದು ಹೇಳಲೋ ಜೋಗಿ ಏನನ್ನು ಕೊಡಲೋ...

ನೆರಳು

ಒಬ್ಬರು ಬೆಳೆಯಲು ಅರಮನೆ ಕೋಟೆ ಕೊತ್ತಲು ಮತ್ತೊಬ್ಬರು ಬೆಳೆಯಲು ಗುಡಿ ಗುಡಾರ ಗುಡಿಸಲು ಕೊನೆಗೆ ಯಾರೋ ತೋಡಿದ ನೆಲದ ಮನೆಯ ಮಡಿಲು ಅದಕ್ಕೆ ಮಣ್ಣಿನ ಬಾಗಿಲು ಮುಚ್ಚಿದರೆ ಶಾಶ್ವತ ನೆರಳು *****

ಕತ್ತಲು ಕಳೆಯಲು

ಕತ್ತಲು ಕಳೆಯಲು ಬೆಳಕು ಮೂಡಬೇಕು ಸುಂದರ ವನದಲಿ ಹೂವುಗಳು ಅರಳಿರಬೇಕು ಕಳೆಯ ಚಿಗುರಲಿ ಪ್ರೀತಿ ತುಂಬಿರಬೇಕು ಪ್ರೀತಿ ಒಲುಮೆಯಲಿ ಪ್ರೇಮ ಚುಂಬನವಿರಬೇಕು ವಿರಹದ ನೋವಲ್ಲಿ ನೆನಪುಗಳು ಮಿಡಿಯಬೇಕು ಮಿಡಿದ ಭಾವನೆಗಳಲಿ ಸ್ವಪ್ನ ಸುಂದರವಾಗಿರಬೇಕು ಸುಂದರ...

ಯಾರಿದ್ದರೇನಂತೆ

ಯಾರಿದ್ದರೇನಂತೆ ಯಾರು ಇಲ್ಲದಿರಲೇನಂತೆ ನಿನಗೆ ನೀನೇ ಸಾಟಿ ಸಖಿ ಹೂವು ಹೂವಿನಲಿ ನೀನು ದುಂಬಿ ಆಲಾಪದಲಿ ನಿನ್ನ ಹೆಸರೇ ಹೇಳುತಿದೆ ಬರೆದೆ ಎಲೆಗಳ ನರನಾಡಿಗಳಲಿ ಪ್ರಕೃತಿಯೇ ನೀನು ವಿಕೃತಿಯೇ ನೀನು ಋತುಗಾನ ವಿಲಾಸಿನಿ ಸೌಂದರ್ಯವತಿಯೇ...