ತಪ್ಪಾಯ್ತು ನನ್ನದೂ
ಶಾಶ್ವತವಲ್ಲದ ಪ್ರೀತಿಯ
ನೆನೆದು ಇಹದ ಮೋಹ
ದಲ್ಲಿ ಬೆಸೆದು ನೊಂದನೂ
ಗುರುವೇ ದಾರಿ ತೋರೆನಗೆ
ಅವನಿಲ್ಲದ ಹಾಡು ಪಾಡು
ಇವನಿಲ್ಲದ ಕಡಲು ನಿನ್ನ
ಅಭಯ ಕಡಲ ದೋಣಿಯಲಿ
ನಾನು ದಡವ ಸೇರಿಸು
ಗುರುವೇ ದಾರಿ ಕಾಣಿಸೂ
ಅವನೊಂದು ಬಣ್ಣದ
ಕೊಡ ಬಣ್ಣಗಳ ಸೇರಿಸಿ
ಆಸೆಗಳಂಬ ಚಿತ್ತಾರ ಬರೆದೂ
ಚಿತ್ತಾರದ ಹಕ್ಕಿ ಹಾರಿಸಿಕೊಂಡು
ಹೋಯ್ತು ಅವನ ಗುರುವೇ
ಸಂಜೆ ಮೂಡಿತು ಹಗಲು
ಬೆಳಗಿತು ದಿನದ ಮಧ್ಯೆ
ನೂರು ಸಾವಿರ ಗಣತಿ ಎಣೆಸಲಸದಳವು
ಸಹಸ್ರ ತುಡಿತಗಳ ಹಾಡು
ಮಾತು ಮಾತಾಗಿ ಕತೆ ಆಯ್ತು ಗುರುವೆ
ಕತ್ತಲು ಬೆಳಕಿನಾಟದಲಿ
ಬೆಳಕನು ಹುಡುಕುತಿರುವೆ
ಕಾಣದಾಗಿದೆ ಬೆಳಕಿನ ಕಿರಣ
ಕೈ ಹಿಡಿದೆನಗೆ ನಡೆಸು ಗುರುವೆ
ತಪ್ಪಿನ ಅರಿವ ಕ್ಷಮಿಸು ಗುರುವೆ
ದೀಪಗಳ ಸಾಲು ಭಕ್ತಿಯ
ಕುಸುಮವೂ ನಿನ್ನ ಚರಣಕಮಲ
ದಲಿ ಶಿರವ ಬಾಗಿ ನಮಿಸುವೆನು
ದಾರಿ ಕಾಣಿಸು ಗುರುವೇ
ಬೆಳಕನು ಮುಡಿಸು ಗುರುವೇ
*****