ಜೋಗದ ಜೋಗಿ ನೀನು
ಏಕೆ ಕಾಡುವೆ ನನ್ನನ್ನು
ನೀನು ನೀನಾಗಿರಲು ಜೋಗಿ
ನನಗಿಲ್ಲ ಚಿಂತೆ ಏನು
ಹೋಗು ಹೋಗೆಲೋ ಜೋಗಿ ಮುಂದಕೆ
ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ
ಏನೆಂದು ಹೇಳಲೋ ಜೋಗಿ
ಏನನ್ನು ಕೊಡಲೋ ಜೋಗಿ
ಜೋಗಿ- ಜೀವನ ನಿನ್ನದ ಅವ್ವ
ಭಾವನ ನಿನ್ನದು
ಹೋಗೆನ್ನಬೇಡ ಅವ್ವ
ಕಟ್ಟೆಯೇ ಆಸರೆಯಾಗಿರಲೇಕೋ
ಪಟ್ಟ ಪಡಲೇಕೋ ಕಷ್ಟ
ಹಸಿರ ನೆಲದ ಅನಂತೆ ನೀನು
ಉಷೆಯಾಗಿಹೇ ನೀನವ್ವ
ಸಸಿಯೊಂದ ನೀಡಲೇ ಅವ್ವ
ಜೀವನ ಇಹುದು ಮುಂದಕೆ
ಒಡತಿ – ಹಸಿರ ಬಾಳಿನ ಹಂದರದೆ
ಹಸಿಯಾಗಿ ಹುದುಗಿದೆ ಮನವು
ಉಷೆ ನಾನಾಗಿರಲೇನು
ಶಶಿಯು ಇಲ್ಲದೆ ಜೋಗಿ
ಬೆತ್ತಲಾಗಿದೆ ಬಯಲು
ಜೋಗಿ – ಹಸಿರ ಬಾಳಿನ ಹಂದರದ
ನಿಮ್ಮ ಮಕ್ಕಳ ಬಾಳು ಬೆಳಗಲಿ
ಪಡದಿರು ಚಿಂತೆ ಅವ್ವ
ಉಷೆ ನೀನು ಕಿರಣವಾಗಿರು ಬಾಳಿಗೆ
ಒಡತಿ – ಹೊರೆ ಹೊತ್ತಿರುವೆ ಸಂಸಾರ
ಗಗನಕ್ಕೇರುವ ಮಾಳಿಗೆ ಸವತಿ
ತಿಳಿವಿಲ್ಲದೆ ಅರಿವಿಲ್ಲದೆ
ಬೆತ್ತಲಾಗಿದೆ ಬಾಳು
ಬತ್ತಿ ಹೋದವೋ ಕಂಗಳು
ಎದೆಯಾಳದ ನೋವ ಅರಸುತ್ತಾ
ಏನೆಂದು ಹೇಳಲೋ ಜೋಗಿ
ಉಷೆ ನಾನಾದರೇನು ಶಶಿ ಇಲ್ಲದ ಮೇಲೆ
ಜೋಗಿ – ಬಾಳ ಪಯಣದ ಬಾಗಿಲು ತೆರೆದು
ಭಾಗ್ಯಲಕ್ಷಿಯಾಗಿದೆ ಏಕೆ ಕೊರಗುವೆ?
ನೀ ಅವ್ವ…
ತುಂಗೆಯು ನೀನು ಗಂಗೆಯು ನೀನು
ಸತಿಯೆ ನಿನಗೇಕೆ ದಾಹ
ಅರಿವಿಲ್ಲದ ಪರಿವೆ ಏಕೆ ತಿಳಿಯೇ
ನೀನು ನೀನಾಗಲೇನು ಚೆಂದ
ಜೀವನ ಇಹುದು ಮುಂದಕೆ ಅವ್ವ
ಒಡತಿ – ಹೊಗಳಲೇಕೊ ಜೋಗಿ
ನನ್ನದೆನ್ನುವದೇನಿದೆಯೋ
ಭೂಮಿಯು ಬರಡಾಗಿದೆ
ಎನ್ನ ಮನವು ಮಸಕಾಗಿದೆ
ಅಕ್ಷಯ ಪಾತ್ರೆಯ ಹುಡುಕುತಿದೆ
ನಿಶೆಯಲ್ಲಿ ನಾನಾಗಿರಬೇಕು
ಶಶಿಯು ಇಲ್ಲದ ಮೇಲೆ ಜೋಗಿ
ಜೋಗಿ – ನಿನ್ನ ಅಂಗಳದಲ್ಲಿಹುದೆ ಪಾತ್ರೆ
ನಿನ್ನದೇನಿದೆಯೊ ಮಾಯೆ
ಒಂದು ಅಗಳು ಸಾಕೆನಗೆ
ನಾಳೆಗಾಗಿ ಕಾಯುವೆ ಮತ್ತೆ
ತುಂಬಲಿ ಮನೆಯು ಹರಸುವೆ ನಿನ್ನ
ಜೀವನ ಇಹುದೆ ಮುಂದಕೆ ಅವ್ವ
ಒಡತಿ – ನಿನ್ನ ನುಡಿಯಲಿಹುದೆ ಆಶಾಕಿರಣ
ನನ್ನ ಬಾಳಿಗೆ ನೀಡಲಿ ಕಿರಣ
ಚಾತಕ ಪಕ್ಷಿಯಂತೆ ಕಾಯುವೆ
ಹಿಡಿಯು ಹಿಡಿಯಲೇಕೂ ಜೋಗಿ
ನನ್ನ ಅಂಗಳವು ಹಸಿರಾಗಲಿ
ಹಿಡಿಯು ಅಕ್ಷಯವಾಗಲಿ
ಉಸಿರಾಗಲಿ ಸಸಿಗಳು
ನೀ ಬರುವ ತನಕ
ಹೋಗಿ ಬಾರೆಲೋ ಜೋಗಿ
ನಾಳೆಗಿನ ನೆನಪಿಗೆ
ನೀ ಹೋಗಿ ಬಾರಲೋ ಜೋಗಿ
ಉಷನಾಗಿದೆನೋ ಶಶಿಗಾಗಿ ಕಾಯುತಿರುವೆ
ನಿನ್ನ ಮಾತೇ ದೀವಿಗೆ
ನಡೆದು ಬಾ ಮತ್ತೆ
ಶಿಶಿರ ಬಂದ ಮೇಲೆ ಜೋಗಿ
*****