Home / Kannada Poetry

Browsing Tag: Kannada Poetry

ತಾಳೆಯ ಹೂಹುಡಿ ಬಣ್ಣದ ಜೊನ್ನವು ಇರುಳೊಳು ಹರಡುತಿದೆ-ತಮ ತಿಳಿಯಿತು ಎನ್ನುತಿದೆ. ಅರಿಲಿನ ಕಿರುಕಿರು ದೋಣಿಗಳಾಗಸ- ದೆದೆಯೊಳು ತೇಲುತಿವೆ-ನಗು- ವಮರರ ತೋರುತಿವೆ. ಮುಗಿಲ ತೀರದೊಳು ರಾಜನೌಕೆಯಹ ಕರೆಯನು ಬಿಟ್ಟಿತಿಗೋ-ಮುದ- ಕೆಂದೆಯೆ ಸಾಗಿತಿಗೋ. ಕನಸ...

ಜೀವದ ಗೆಳತಿಯರೆ ಗುಟ್ಟಿನ ಮಾತೊಂದ ಕೇಳುವೆ ಪಡಿನುಡಿ ಪೇಳುವಿರಾ? ||ಪಲ್ಲ|| ಜೀವಕಾಂತನು ಯಾವ ಏಕಾಂತದೊಳಗೆ ತಾ ಪವಡಿಪನೆಂಬುದನರುಹುವಿರಾ? ಎಂದು ಬಂದೀ ಕೈಯ ಪಿಡಿವನೆಂಬುದನಾರು ಬಲ್ಲಿರಿ ದಯವಿಟ್ಟು ಉಸಿರುವಿರಾ? ||೧|| ಪತಿದೇವರಾಯನ ಜೊತೆಗೆ ಬಾಳುವ...

೧ ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ! ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ! ಚಿನ್ನದ ಮುದ್ದಿಯ ಮೂರ್ತಿಯುಟ್ಟಿ! ಎಡಬಲ ನಂದಾದೀಪಗಳಿಟ್ಟಿ! ೨ ಹಗಲಿರುಳೆನ್ನದೆ ಕಾಯುತಲಿರುವಿ! ತಾಳ ತಂತಿಗಳ ಬಾರಿಸುತಿರುವಿ! ಸವಿ ಸವಿ ತಿಂಡಿಯ ತೋರಿಸುತಿರುವಿ! ಪುಣ್ಯವಪಡೆಯಲ...

ಅರಸನಾಣತಿಯಂತೆ ಹಳುವಿನಲಿಳಿದು ಮಲೆಗಳನೇರಿ, ಹೊರಟು ನಡೆದನು, ಪ್ರತೀಹಾರಿ! ಆಜ್ಞಾಧಾರಕ; ಸಂಧ್ಯಾ ಸಮೀರಣದಿ, ತುಂಬುಬಯಲಲಿ ಹೊರಟು, ಝುರಿನೀರು ತಿಳಿಹೊಳೆಯ ದಟ್ಟಡವಿ ಪಾತ್ರದಲಿ; ನಡೆದು ಮರಳಿದ ಹಾದಿ ಪೂರ್ವಪರಿವಿಡಿದು. ಅಲೆದಲೆದು ಬಸವಳಿದು ಕತ್ತಲೆ...

ಮಾನಸಮರಾಳ! ಮರಳಿ ನೆಗೆದೇಳ ಕಲುಷಿತ ಕರಾಳ ಕೊಳದಿಂದ ಮೇಲೆ ಕದಡಿ ಕೊಳೆಯಾದ ಪಕ್ಷಗಳ ಬಿದಿರಿ ನಿರ್ಮಲನಿರಾಳಸರದಲ್ಲಿ ತೇಲೆ.  ೧ ತಿಳಿಬಿಳಿದುಪ್ಪುಳ ನಿನ್ನ ನಯನವುರು ಮಲಿತ ಜಲವುಂಡು ಮಾಸಿ ಹೋಗಿಹುದು ಮುಗಿಲನೆ ಮುದ್ದಿಪ ನಿನ್ನಯ ನೋಟವು ಮೀನದ ಕಣ್ಗಳ ...

ನುಡಿದು ಬೇಸತ್ತಾಗ! ದುಡಿದುಡಿದು ಸತ್ತಾಗ ಜನಕ ಹಿಗ್ಗಿನ ಹಾಡು ನೀಡಾಂವಾ ನಿನ್ಹಾಂಗ ಆಡಾಕ । ನಿನ್ಹಾಂಗ ಹಾಡಾಕ ಪಡೆದು ಬಂದವ ಬೇಕೊ ಗುರುದೇವಾ ಮಕ್ಕಳಾಗ್ಯಾಡೀದಿ । ಹಕ್ಕ್ಯಾಗಿ ಹಾಡೀದಿ ಚಿಕ್ಕ್ಯಾಗಿ ನೋಡೀದಿ ಗುರುದೇವಾ ಬಳ್ಳ್ಯಾಗ ಕುಣಿದೀದಿ । ಬೆಳ...

ಹಠಯೋಗ ಸಾಧಿಸುವ ಯೋಗಿ ಬಾ, ದಿಟವನುಡಿ. ಕಪಟಿ ಕಣ್ಣಿನ ಕೂರ ಕಿಡಿ ನೋಟ ಚಿಮ್ಮದಿರು! ಉಪಚಾರ ವೈಖರಿಯ ವಿಸ್ತರಿಸಿ ಹಿಗ್ಗದಿರು ಮಠ ಮಾನ್ಯ ಸೌಧ ಗುಡಿ ಗೋಪುರಕದ ಕಾಲಹುಡಿ ಚಿಮ್ಮಿ ಚಿತ್ರಿಸುವ ಘನ ಪುಣ್ಯ ಮೂರ್ತಿಯ ರೂಪ ಹೊಮ್ಮಿ ಹೊನ್ನಿನ ಹೊಗೆಯಲೊಗೆದ ...

ಆವನೀ ಉನ್ಮತ್ತ-ಈ ಸರಿಯ ಹೊತ್ತಿನೊಳು ಕೊಳಲ ಬಾರಿಸಿ ಮಧುರ ರಾಗವನು ರಚಿಪನಿಂತೆ? ಕರಿಮುಗಿಲ ಬಲೆಯೊಳಗೆ ಪೆರೆ ಸಿಲುಕಿ ನೋಯುತಿದೆ ಗಾಳಿ ಬಾನಲೆಯುತಿದೆ ಪಾಳೆಯದ ಭೂತದಂತೆ. ಈಗಿತ್ತ ಆಗತ್ತ ಕಿವಿಯಾಚೆ ದೂರತ್ತ ಮುಗಿಲ ಮರೆ ಜೊನ್ನದಿಂ ಬೂದಾದ ರಜನಿಪಥದಿ...

ಪ್ರೀತಿಯೆ ಬಾರೇ ದೂತಿಯೆ ಬಾರೇ ‘ಪ್ರೀತಿಯ ದೂತಿ’ಯ ಜ್ಯೋತಿಯ ತಾರೆ ಬಾರೇ ಬಾರೇ ತೋರೇ ತೋರೇ ಜೀವದ ಗೆಳತಿಯ ಪ್ರೀತಿಯ ಧಾರೆ! ಈ ಹೃದಯದ ಆಲ್ಹಾದಿನಿಯೆಲ್ಲಿ? ಈ ಜೀವನ-ಸಂಜೀವಿನಿಯೆಲ್ಲಿ? ನನ್ನಾ ಗೆಳತಿಯ ಬಳಿಯಿಂದಲಿ ಬಹ ಗಾಳಿಯೆ ಬಾ ತಂಗ...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...