ಇರುವುದು ಕತ್ತಲೆ ಬರುವುದು ಬೆಳಕು ನಮ್ಮಯ ಜಗದಲ್ಲಿ
ಇರುವುದು ಬೆಳಕು ಬಾರದು ಕತ್ತಲೆ ಇಂತಹ ಜಗವೆಲ್ಲಿ!
ಪೀಡೆಯ ಪರಿಹಾರಕೆ ಮಾರ್ಗವನು ತೋಡುತಿಹೆವು ನಾವು
ಪೀಡೆಯೆ ನೋಡಲು ಸಿಗದಂತಿರುತಿಹ ನಾಡ ಕಾಣದಿಹೆವು
ಮರವಿನೊಳಿದ್ದು ಅರಿವನು ಗೆದ್ದು ಬಾಳಲು ಹೆಣಗುವೆವು
ಅರಿವಿನೊಳಿದ್ದರೆ ಬಾಳನು ಬೆಳಗುತ ಥಳಥಳ ಹೊಳೆಯುವೆವು
ದೇವನ ದೇಹ ದೇವನ ಮನಸು ದೊರೆವ ಬಗೆಯದೋರು
ದೇವನ ಹಾಡು ಹಾಡುತ ಹಾಡುತ ಮೇಲ ಮೇಲಕೇರು
*****

















