ಮಿಂಚು ಬಾರೆ ಮಿಂಚು ರಾಣಿ!
ಮುದ್ದು ಮೊಗವ ಶೋರೆ ಜಾಣಿ!!
ಮುಗಿಲಿನಲ್ಲಿ ಮಲಗಿಕೊಂಡು
ಮೋಡಗಳಲಿ ಮುಸುಕಿಕೊಂಡು
ಸೂರ್ಯನಿಲ್ಲದ ಸಮಯದಲ್ಲಿ
ಕತ್ತಲೇರುವ ಕಾಲದಲ್ಲಿ
ಕಣ್ಣು ಮುಚ್ಚಲು ಕಾಣಿಸಿಕೂಳ್ಳುವಿ’
ಕೈಯಚಾಚಲು ಕಾಲುತಗೆಯುವಿ!
ಮಿಂಚು ಬಾರೆ ಮಿಂಚು ರಾಣಿ!
ಮುದ್ದು ಮೊಗವ ತೋರೆ ಜಾಣಿ!!
ಮುತ್ತಿನ ಮೂಗುತಿಯಿಟ್ಟು ಕೂಂಡು
ಜರದ ಕುಪ್ಪಸ ತೊಟ್ಟುಕೊಂಡು
ಹೂಳೆವ ಸೀರೆಯನುಟ್ಟು ಕೊಂಡು
ಚಕ್ಕಪಕ್ಕನೆ ಕಾಣಿಸಿಕೂಂಡು
ಕಳ್ಳಕುಣಿತವ ಕುಣಿಯುತಿಹಿ!
ಕಣ್ಣುಸನ್ನೆಯ ಮಾಡುತಿಹಿ!
ಮಿಂಚು ಬಾರೆ ಮಿಂಚು ರಾಣಿ!
ಮುದ್ದು ಮೊಗವ ತೋರೆ ಜಾಣಿ!!
ಏನ ಹುಡುಗಿ ನಿನ್ನ ಮಿಂಚು
ನಿನ್ನಗಾಗಿ ಹಾಕಿ ಹೊಂಚು
ಕತ್ತಲಲ್ಲಿ ತಿರುಗಿ ತಿರುಗಿ
ಮನಸಿನಲ್ಲಿ ಮರುಗಿ ಮರುಗಿ
ನೊಂದೆ ಬೆಂದೆ ಬಾರೆ ಮಿಂಚು!
ತರುಣ ಹೃದಯದಲ್ಲಿ ಮಿಂಚು!
ಮಿಂಚು ಬಾರೆ ಮಿಂಚು ರಾಣಿ!
ಮುದ್ದು ಮೊಗವ ತೋರೆ ಜಾಣಿ!
*****








