೧
ಆಳಬಹುದು ಬೀಳಬಹುದು
ಅರಸು ಮನೆತನ
ಬೆಳೆಯ ಬೆಳೆದು ಉಂಡು ಉಳಿವ
ಮನುಜ ದಿನ ದಿನ
೨
ಹೆಣ್ಣು ಗಂಡು ಕೂಡಿಕೊಂಡು
ಜಗವ ಬೆಳಸಿವೆ;
ಮಣ್ಣಿಗಾಗಿ ಕೇಣಗೊಂಡು
ಸೊಗವನಳಿಸಿವೆ
೩
ಬಾಳಿನೊಡನೆ ಬೆಳೆದು ಬಂದ
ಕತೆಯು ಮರೆವುದು;
ಕಾಳೆಗವಿರೆ ಜೊತೆ ಬಾಳಿನ
ಸಂತೆ ನೆರೆವುದು
* *
ಜೊತೆ ಬಾಳಿದು ಶಾಶ್ವತ-
ಎಂದೆಂದಿಗು ನಿಶ್ಚಿತ
*****
ಬೆಳಗಾವಿ : ೧೯೪೦

















