
ಹೊಯ್, ಹೊಯ್, ಹೊಯ್,
ಬೆಳತ ತಣ್ಗಲ್ಗಳಲಿ, ಕಡಲೇ!
ನನ್ನೆದೆಯೊಳೇಳುತಿಹ ಬಗೆಗಳನು ನಾಲಗೆಗೆ
ತಂದು ನಾ ನುಡಿಯಲಹುದೇ!
ಏನೊಸಗೆ ತೊರೆಯರೆಳೆಯನಿಗೆ!
ತಂಗಿಯೊಡನಾಡುತ್ತ ಕೂಗುತಿಹನೇ!
ಏನೊಸಗೆ ಅಂಬಿಗರ ಮಗುಗೆ!
ತೆರೆಯ ಮೇಲೋಡದಲಿ ಹಾಡುತಿಹನೇ!
ಗಂಭೀರದಲಿ ನಡೆದು ಹಡಗು
ಬೆಟ್ಟದಡಿಯಲಿ ನೆಲೆಯ ಸೇರುತಿಹುವು!
– ಅಯ್ಯೋ! ಆ ಬಯಲಾದ ಕಯ್ಯ ಸೋಂಕೇ!
ಮಾತಡಗಿಹೋದವನ ಕೊರಲಿನುಲಿಯೇ!
ಹೋಯ್, ಹೋಯ್, ಹೋಯ್,
ನಿನ್ನರೆಗಳಡಿಯಲ್ಲಿ, ಕಡಲೇ!
ಅಳಿದುಹೋದಾ ಹಗಲಿನಕ್ಕರಿನ ಸಿರಿಯೊಂದು
ಮಗುಳ್ದಿನ್ನು ಬಾರದೆನಗೆ!
*****
TENNYSON : Break, break , break,














