Home / Ananthanarayana S

Browsing Tag: Ananthanarayana S

ಜಗದೊಳಗಲ್ಲೆಲ್ಲಿಯು ಕ್ರಾಂತಿ ಹಬ್ಬಿ, ದಲಿತ ಜನಜೀವನದುನ್ನತಿ ಸಾಧಿಸುತ್ತಿದೆ. ತರುತಿದೆ ಶಾಂತಿ, ನನ್ನ ಬಾಳಿಗಿನ್ನಲ್ಲಿದೆ ಹೊಸ ಗತಿ ? ಜಗ ಬದಲಾದರು, ಜೀವನ ಬದಲದು! ರಷ್ಯದ ವೀರರ ಕೆಚ್ಚು ಕಾಳಗ, ಏಷ್ಯದ ಜನತೆಯ ಸ್ವಾತಂತ್ರದ ರವ, ಮೊಳಗಿವೆ ನಾಳಿನ ...

ಸುಂದರತೆಯಾನಂದ ಅಮರವೆಂದನು ಅಂದು ಕವಿ ಕೀಟ್ಸು ಕಲ್ಪನೆಯ ಕನಸಿನಲಿ ಮೈಮರೆತು; ನನಸಿನಲಿ ತಾನೊಲಿದ ಸೌಂದರ್ಯದಲಿ ಬೆಂದು, ಅದು ತನಗೆ ದೊರಕದೆಯೆ ಸಾಗಿಹೋಗುವುದರಿತು ಸಾವ ಸುಖ ಬಯಸಿದನು ! ತಂಗಾಳಿ ಬೀಸುತಲಿ ಹೊತ್ತು ತರುವಂದದಲಿ ಹೊಸ ಹೂವ ಪರಿಮಳವ, ಸೌ...

ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. “ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ ನಿನ್ನಿನಿಯನೊಲವಿನೆದೆ ಮಡಿಲೊಳಿರದೆ ಇಲ್ಲಿ ಏಕಾಂತದಲ...

ಜೀವನದ ಹಗಲಿನಲಿ ಕನಸು ಸುಳಿವಂದದಲಿ, ಆಕೆ ಬಂದಳು ಮುಂದೆ; ನಡುಹಗಲು ಬರುತಿರಲು ಅಳಿವಡೆವ ನೆರಳಿನೊಲು ಹಾರಿಹೋದಳು ಹಿಂದೆ! ಅವಳಿಲ್ಲ, ಈಗೆನ್ನ ಮನಸು ಕನಸಿನ ಅನ್ನ. ಕಂಗೆಟ್ಟ ಶಶಿ ನಾನು; ದಿನ ದಿನಕು ಸಣ್ಣಾಗಿ, ದುಃಖದಲಿ ಹಣ್ಣಾಗಿ, ಅಳಿವ ದಾರಿಗೆ ಹ...

ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ ಹಾರವಾಗಿಡುವಾಸೆ ಮನವ ತುಂಬಿರಲಾನು ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು, ಕಿಚ್ಚಿನಲಿ ಅವುಗಳನು ನೂಕಿದನು. ಅವು ಓ...

ಇರುಳಿನ ಮಡಿಲಲಿ ಒಲವಿನೊಂದು ಮನ- ದಾಸೆಯ ನನಸಂತೆ, ಆಗಸದೊಡಲಲಿ ಚಂದಿರ ನಗುತಿರೆ, ಜೀವನೆ ಕನಸಂತೆ! ಒಂದು ಚಕೋರಿಯು ಚಂದಿರನೊಲವನು ಪಡೆಯಲಂದು ಮನವ ಭಾವ ಪುಷ್ಪಗಳ ಪರಿಮಳವಾಗಿಸಿ ಹರಿಸಿತು ಎದೆಯೊಲವ ಹಕ್ಕಿ ಚಂದಿರನ ಸನಿಯ ಸಾರಲಿಕೆ ಚಿಮ್ಮಿ ಹಾರುತಿಹು...

ಯಾರ ನುಡಿಗಳ ಸೋಂಕು ಸುಳಿದೊಡನೆಯೇ ಮನದ ಮೈದಾನದಲಿ ಬಾಳ ಋತು ವಸಂತದ ಸುಗ್ಗಿ ಎಳೆಯಾಸೆಗಳ ಚಿಗುರ ತಂದು, ಒಲವಿನ ಹಸದ ಇದೊ ಎಂದು ಪಿಸುಗುಡಲು, ಜೀವನವು ಹಿರಿ ಹಿಗ್ಗಿ ನಲಿದಿತೋ, ಆಕೆ ಬರುವಳು ಇಂದು ! ಮತ್ತೊಮ್ಮೆ ನಕ್ಕು ನಗೆಯಾಡಿಸುವೆ ! ನಾಚುತಲಿ ಕ...

ಒಮ್ಮೊಮ್ಮೆ ಎನಿಸುವುದು ಜೀವವಾರಿದಮೇಲೆ ಸುಖ ಸ್ವಪ್ನಗಳ ಬಿಂಬ ಮೂಡಬಹುದೆಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೋ ! ಅಂತಾದರೆನಿತು ಸುಖ; ಬಾಳ ದುಃಸ್ವಪ್ನವನು ಮರೆಯಬಹುದಾಗ; ಜೀವದೊಳಗಿಲ್ಲದುದ ಸ...

ತಾರೆಯ ಚಿತ್ತಾರದ ಇರುಳಿನ ಹಸೆ ಕನಸಿನ ಆರತಿ ಆನಂದದ ದೆಸೆ ಕಳೆಯುತ ಕೂಡಿರೆ ಕಾಲದ ಉಡಿ ಕಿಸೆ, ನಸುಬೆಳಕಲಿ ಮುತ್ತಿತು ಚಂದ್ರನ ರಾಹು! ಹಗಲುದಯಕೆ ಕೈದಾಳವನುರುಳಿಸಿ, ಇರುಳಿನಳಿವಿಗೆ ರಕ್ತವ ಹೊರಳಿಸಿ, ದುಗುಡದ ಮೋಡದ ಕೆಂಪೆದೆ ಕೆರಳಿಸಿ, ನಸುಬೆಳಕಲಿ...

ಮರಗಳೆಲೆಗಳ ನಡುವೆ ತೂರಿ, ಅಲೆಗಳ ಮೇಲೆ ಬೆಳ್ಳಿಯೆರಕವ ಹೊಯ್ದ ಚಂದಿರನ ಬೆಳಕಿನಲಿ ತೊರೆಯ ಹೃದಯವು ಅರಳಿ, ಚಿಮ್ಮಿ, ಕುಣಿಯುವಹಾಗೆ ಮನಸು ಕುಣಿಯುತಲಿಹುದು ನಿನ್ನ ನುಡಿ ನನಸಿನಲಿ ನಾ ಮುಂದೆ ಸಾಗುತಿರೆ! ಹಿಗ್ಗಿನಲಿ ಕುಣಿಯುತ್ತ, ನಿನ್ನ ಕಂಡೊಡನೆನ್ನ...

12345...10

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...