ಜೀವನದ ಹಗಲಿನಲಿ
ಕನಸು ಸುಳಿವಂದದಲಿ,
ಆಕೆ ಬಂದಳು ಮುಂದೆ;
ನಡುಹಗಲು ಬರುತಿರಲು
ಅಳಿವಡೆವ ನೆರಳಿನೊಲು
ಹಾರಿಹೋದಳು ಹಿಂದೆ!
ಅವಳಿಲ್ಲ, ಈಗೆನ್ನ
ಮನಸು ಕನಸಿನ ಅನ್ನ.
ಕಂಗೆಟ್ಟ ಶಶಿ ನಾನು;
ದಿನ ದಿನಕು ಸಣ್ಣಾಗಿ,
ದುಃಖದಲಿ ಹಣ್ಣಾಗಿ,
ಅಳಿವ ದಾರಿಗೆ ಹವಣು !
ಓ ಮಧುರ ಮಾರುನುಡಿ,
ನನಗಾಗಿ ಇನಿತು ತಡಿ,
ನನ್ನೆದೆಯಳಲು- ಕೇಳು :
ಅದು ಚೂರು ಚೂರಾಗಿ,
ದನಿ ನೂರು ನೂರಾಗಿ,
ಹರಡೆ ನೀನದ- ಹೇಳು!
*****