ತೊಣ್ಣೂರಿನ ಸೊಬಗು

ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು ತೋಣ್ಣೂರು ಗ್ರಾಮದಲ್ಲಿ ಹಸಿರು ಸೀರೆಯ ಮೇಲೆ ಹಳದಿಯರಮಣಿ ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ ಕರೆಯುತಿದೆ ನೋಡ ಬನ್ನಿ ಸುಂದರ ವನಪುಷ್ಪರಾಶಿಗಳ ನಡುವೆ...

ತಾಯೆ ಕನ್ನಡಾಂಬೆಗೆ

ಮೊಂಜಾವಿನಂದದಿ ಬೆಳಕಾಗಿ ಮೂಡಣದಾ ಇಬ್ಬನಿ ಹನಿಗಳೇ ಮಣಿಮುತ್ತಾಗಿ ಸಿಂಗರಿಸೆ ತಾಯೆ ಹಸಿರ ಹೊನಲಿಗೆ ತಳಿರು ತೋರಣ ನಾಚಿ ತಾಯ ಗುಡಿ ಬಾಗಿಲತೆರೆಯೆ ಮುತ್ತೈದೆಯರು ಪಂಚಮುಖಿ ಆರತಿ ಎತ್ತಿ ನುಡಿದಿಹರು ಚವತಿ ಚುಕ್ಕೆಗಳ ಹರಸಿ ||...

ಕನ್ನಡಾಂಬೆ ಮೆರವಣಿಗೆ

ಹೊರಟೈತೆ ಮೆರವಣಿಗೆ ನಮ್ಮೂರಿಗೆ ಭೂದೇವಿ ಸಿರಿದೇವಿ ವನದೇವಿ ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ || ಬರುತಾಳೆ ಕಾವೇರಮ್ಮ ಕಾಲ್ ತೊಳೆಯೆ ನಿನ್ನ .... ನಿನ್ನ ಮಕ್ಕಳ ಹರಸಮ್ಮ ಜಗದಾಂಬೆ ಕನ್ನಡಾಂಬೆಯೆ || ನಿನ್ನ ಹೃದಯಂಗಳದಿ ಹಸಿರ...

ಮೂವರು ತಾಯಂದಿರು

ನನಗಿಹರು ಮೂವರು ತಾಯಂದಿರು ಹೆತ್ತು ಹೊತ್ತು ಹಾಲುಣಿಸಿ ಲಾಲಿಹಾಡಿ ಮುದ್ದು ಮಾಡಿ ಪೊರೆದವಳು ನಮ್ಮಮ್ಮ ಅವಳ ಮಮತೆಯ ಕುಡಿ ಹಿಮ್ಮೆಟ್ಟದೆ ಹೆಜ್ಜೆ ಇಡಲು ಗೆಜ್ಜೆಯ ನಾದಕೆ ನಲಿದ ಹಾದಿಯಲಿ ದಿವ್ಯತೆಯ ಮನವು ಹೊಸ್ತಿಲ ದಾಟಿ...

ಶರಣೆಂಬೆವು

ಶರಣೆಂಬೆವು ತಾಯಿ ಶರಣೆಂಬೆವು ಶರಣಾಗತರಾಗಿಹೆವು ರಕ್ಷಿಸೆಮ್ಮನು ಕರಮುಗಿದು ಬೇಡುವೆವು ವರವೊಂದನು || ಭುವನೇಶ್ವರಿಯೆ ತಾಯೆ ರಾಜ ರಾಜೇಶ್ವರಿಯೆ ಕರುನಾಡ ತಾಯೆ ಕರುಣೆಯ ತೋರು ಕರಮುಗಿದು ಬೇಡುವೆವು ವರವೊಂದನು || ನಿನ್ನ ಕರುಣೆಯೆ ನಮಗೆ ಶ್ರೀ...

ಅನಂತ ಅನಂತವಾಗಿರು

ಅನಂತ ಅನಂತವಾಗಿರು ಮನವೆ ತಾಮಸ ಬೇಡ ನಿಸ್ವಾರ್‍ಥದ ಹಣತೆಯ ಹಚ್ಚು ನೀ ಓ ಮನವೆ ಕನ್ನಡ ಕನ್ನಡ ಎಂದುಲಿಯ ನೀ ಮನವೆ ದುಡಿದ ಮನಕೆ ತಣಿವ ಜಲವೆ ತಲ್ಲಣವೇಕೆ ನಿನಗೆ ಮಣಿವೆ ಧರೆಗೆ ಎಂದೆಂದಿಗೂ...

ವರ್‍ತಮಾನ

ವರ್‍ತಮಾನ ಅಭಿಮಾನದ ಹೊನ್ನಬೆಳಕಲ್ಲಿ ಮುನ್ನೆಡೆದಿದೆ ನವಯುಗದ ನವಚೇತನ ಹಿಮ್ಮೆಟ್ಟದೆ ಮುನ್ನುಗಿದೆ ಅನಂತ ಕಾನನ || ಕರ್‍ನಾಟ ಗತಕಾಲದಿ ಮೆರೆದಿದೆ ಕಲಿ ಜಾಗೃತದ ಅರಿವ ಮೂಡಿಸುವಡೆಗೆ ಶೃಂಗವೇರಿದೆ ಬಾಹ್ಯಸತ್ವವಿಜ್ಞಾನದ ಮರ್‍ಮತೆ ಸಾಧನಕೆ || ಮನ್ವಂತರದ ಪುರಭಾವೆಯಲಿ...

ಕನ್ನಡ ಕನ್ನಡ

ನಮ್ಮ ನೆಲವಿದು ಕನ್ನಡ ನಮ್ಮ ಜಲವಿದು ಕನ್ನಡ ನಮ್ಮ ನಾಡಿದು ಕನ್ನಡ ಕನ್ನಡ ಕನ್ನಡ || ಶಿಲ್ಪ ಕಲ್ಪತಲ್ಪವಲ್ಲಿ ಅಂದ ಚೆಂದ ಒಲ್ಮೆಯಲಿ ಒಲುಮೆ ಚಿಲುಮೆ ನಲುಮೆ ತಂಗಾಳಿಯಲಿ ತಂಪ ಸೂಸಿ ಇಂಪಾಗಿ ಕೇಳ...

ಕನ್ನಡ ನುಡಿಯಿದು

ಕನ್ನಡ ನುಡಿಯಿದು ಸುಂದರ ನಡೆಯಿದು ಮಿಂಚಿನ ಚಂದುಳ್ಳಿ ಕನ್ನಡ || ಚಂಚಲೆ ಸುಂದಿರ ಮಂಚಲೆಯಾಗಿರೆ ಅನಂತ ಕಸ್ತೂರಿಯೆ ಕನ್ನಡ || ಬಾಳಿನ ಹಂದರದಲಿ ಕನಸಿ ನೋಕಳಿಯಲಿ ಮನಸಿನ ಐಸಿರಿಯೆ ಕನ್ನಡ || ಮುತ್ತಿನ ಮಣಿ...

ಎದ್ದೇಳಿ ಎದ್ದೇಳಿ ಸೋದರರೇ

ಎದ್ದೇಳಿ ಎದ್ದೇಳಿ ಸೋದರರೇ ಕನ್ನಡದಾ ವೀರಯೋಧರರೇ ಕನ್ನಡದಾ ಮಣ್ಣಲ್ಲಿ ಮಣ್ಣಾಗಿ ಕನ್ನಡದಾ ನೆಲದ ಹಸಿರಾಗಿ || ಬಡಿದೆಬ್ಬಿಸುತಿಹಳು ತಾಯಿ ಮೊರೆ ಕೇಳಿ ಕನ್ನಡದಾದೀಪ ಹಚ್ಚಿ ಬೆಳಗಿ ನುಡಿಯೊಂದ ಕೇಳಿ ಒಲವಿಂದೇ ತೂಕಡಿಸದಿರಿ ತೂಕಡಿಸದಿರಿ ಮತ್ತೆ...