ಸಿರಿಯೆ ನೀ ಸಿರಿಯೆ
ಮಲೆನಾಡ ಕಣ್‌ಮಣಿಯೆ
ಕನ್ನಡ ತಾಯ ಹೊನ್ನ ಹೂರಣವೇ ನೀ
ಸಿರಿಯೆ ನೀ ಸಿರಿಯ ಬಾರಲೇ ನೀಽಽಽಽ ||ಸಿ||
ಅರಳಿದ ಹೊಂಗನಸ ಹೂ ಮಾಲೆಯೆ ನೀ
ಸಪ್ತ ಸ್ವರ ರಾಗ ಝೇಂಕಾರದಲಿ
ಕನ್ನಡ ತಾಯ ಕೊರಳ ಬಳಸು ನೀಽಽಽಽ ||ಸಿ||
ಹಸಿರ ಸೀರೆಯ ಹೊನ್ನ ರವಿಕೆಯ
ಧರಿಸಿ ನೀ ಬಂದೆಯಾ ಓ ಗೆಳತಿ
ಕಣ್ಣಂಚಿನ ನೋಟವ ಹರಿಸಿದೆಯಾ ನೀ ||ಸಿ||
ವಸಂತನ ವರಿಸಿ ನಂದನ ವನವೇ
ನಾಚುವ ಸೊಬಗೆ ಎಲ್ಲಿಹೆ ನೀ ಗೆಳತಿ
ಕಿನ್ನರ ನರ್ತನ ತಾಳಕೆ ಹಾಡುವ ಕೋಗಿಲೆಯೆ
ಎಲ್ಲಿಹೆ ನೀ ಗೆಳತಿ ||ಸಿ||
ಮಾಧುರ್ಯ ಮಾನಸೆಯೆ ನೀ
ಅಂಬರಕೆ ಹಂದರವ ಕಟ್ಟೀ
ಮುತ್ತಿನಾರತಿ ಎತ್ತಲು ಅಂಗನೆಯರು
ಕಾದಿಹರು ಬಾರಲೆ ಓ ಗೆಳತಿ ||ಸಿ||
*****