ಶ್ರುತಿ

ಶ್ರುತಿಯೆ ಬೆಳಕು
ಬಾಳಿನಂದದ ರೂಪಕೆ
ನಭದೆ ದನಿಯ ಆನಂದಹೊನಲಸುರಕೆ||
ಕರವ ಮುಗಿದು ಬೇಡುವಂದದಿ ತಾಯೆ||

ಒಲವಿಂದ ವೃಂದದಲಿ ಕೂಡಿ ನಲಿದು
ಬಾರೆ ಬಾರೆ ಜಗವ ತಣಿಸುತಲಿ
ಕುಣಿದು ನಲಿದು ಮನವ ತಣಿಸೆ
ಆನಂದದಲಿ ಕೂಡಿ ಒಲಿದು
ಬಾರೆ ಬಾರೆ ಬಾ ತಾಯೆ

ಶೃಂಗಾರ ಕಾವ್ಯದಲ್ಲಿ ಹೊನ್ನ ಕುಂಚದಲ್ಲಿ
ನಲಿವ ನಾಟ್ಯ ಸಮರಸ ಭಾವದೊಲುಮೆಯಲಿ
ನಲಿಯೆ ಒಲಿಯೆ ಬಾರೆ ಬಾರೆ ಬಾ ತಾಯೆ
ಬೆಡಗಿನಂದದ ರೂಪದಲಿ ಹರುಷದ
ಹೊನಲ ಚಿಮ್ಮಿ ಬಾರೆ ತಾಯೆ||

ಬಾರೆ ಬಾರೆ ಬಾ ತಾಯೆ
ಕರವ ಮುಗಿವೆ ವರ ಒಂದ ಬೇಡುತ
ಭಕುತಿಯಿಂದಲಿ ಶರಣೆಂದೆ ತಾಯೆ
ಪೊರೆಯೆ ಬಾ ಬಾರೆ ತಾಯೇಽಽಽಽ
ಕರುಣಾಸಾಗರಿ ಆನಂದ ವಿಹಾರಿ
ನಮೋ ನಮೋ ನಮಿಸುವೆ ದೇವಿಯೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀರ್‍ಘಮೌನದ ಬಳಿಕ
Next post ಸಂಸ್ಕರಣ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…