ಪ್ರಳಯ ಸೃಷ್ಟಿ

ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ- ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು- ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು- ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ...

ಮಹಾತ್ಮರಿಗೆ

ಒಡದು ಕರ್ಮದ ಕಟ್ಟು - ಜಗದ ಮೋಹವ ಸುಟ್ಟು ಪಡೆದು ಸತ್ಯದ ದೃಷ್ಟಿ - ಜನಕೆ ತಿಳಿವನು ಕೊಟ್ಟು ಜಡ ಶರೀರದ ಮಮತೆ - ಕಾಮ ಮದಗಳ ಬಿಟ್ಟು ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು....

ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ಭೂಪಾಳಿ-ಝಂಪೆ ನೋಡು ನೋಡೆಲೊ ದೇವ! ಗತಿವಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ! ನೋಡು ಪಡುವಣ ದಿಕ್ಕ, ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧|| ಬಡ ತ್ರಿಪಲಿಯನ್ನಿತಲಿ ಪಿಡಿದಿರುವುದೆನ್ನುತಲಿ ಮೊರೆಯಿಡುವ...

ನನ್ನನ್ನೆ ಬಿಟ್ಟು ನಾ ನಿನ್ನ ಪರವಿರುವಾಗ

ಓ ಕ್ರೂರಿ ನಿನ್ನ ನಾನೊಲಿದಿಲ್ಲವೇ ಹೇಗೆ ? ದುಷ್ಟಳೇ ನಿನಗಾಗಿ ನನ್ನನ್ನೆ ಮರೆತಾಗ ನಿನ್ನ ಕುರಿತೇ ನಾನು ಯೋಚಿಸುವುದಿಲ್ಲವೇ ? ನಿನ್ನ ಹಗೆ ಯಾರನ್ನು ಗೆಳೆಯ ಎಂದಿರುವೆನೆ ? ನಿನಗಾಗದವರನ್ನು ಎಂದು ಓಲೈಸಿರುವೆ ?...

ತಾಯೆ ಕನ್ನಡಾಂಬೆಗೆ

ಮೊಂಜಾವಿನಂದದಿ ಬೆಳಕಾಗಿ ಮೂಡಣದಾ ಇಬ್ಬನಿ ಹನಿಗಳೇ ಮಣಿಮುತ್ತಾಗಿ ಸಿಂಗರಿಸೆ ತಾಯೆ ಹಸಿರ ಹೊನಲಿಗೆ ತಳಿರು ತೋರಣ ನಾಚಿ ತಾಯ ಗುಡಿ ಬಾಗಿಲತೆರೆಯೆ ಮುತ್ತೈದೆಯರು ಪಂಚಮುಖಿ ಆರತಿ ಎತ್ತಿ ನುಡಿದಿಹರು ಚವತಿ ಚುಕ್ಕೆಗಳ ಹರಸಿ ||...

ಕನ್ನಡ್ ಪದಗೊಳು

ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ- ತಕ್ಕೊ! ಪದಗೊಳ್ ಬಾಣ! ೧ ಬಗವಂತ್ ಏನ ಬೂಮೀಗ್ ಇಳದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್...

ಅಷ್ಟಷಟ್ಪದಿ

ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ, ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ ಮಿಂಚಿನಂತುಲ್ಲಟಿಸಿ ಅಟಮಟಿಸಿ...

ಹಾರಿಬಂತೊಂದು ಹಕ್ಕಿ

ಹಾರಿಬಂತೋಂದು ಹಕ್ಕಿ ಸಂಜೆಯಲಿ ಮೈದಪ್ಪಿ ಒಳಗೆ ಹಾರಿಬಂತೊಂದು ಹಕ್ಕಿ. ಹೊರ ಹೋಗಲರಿಯದೆ ತನ್ನವರ ಕಾಣದೆ ಬಂದ ಬಗಯರಿಯದೆ ಅತ್ತಿತ್ತ ನೋಡುತಿದೆ ಭಯದಿಂದ ನಡುಗುತಿದೆ. ಇವರಾರೊ ಹೊಸಬರು ತನ್ನನಿವರರಿಯರು ಮೊದಲಿವರು ಕಾಣರು ಬಂಧನದಿ ಬದುಕುವರು ತನ್ನ...

ಹೊಲೆಯನು ಯಾರು?

ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ...

ವೃಷಭಾವತಿ

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ ತುಂಬಿ...