೧ ಹಾ! ಇನ್ನು ದೂರಮಾದೆಯ ನನಗೆ ಸಂತತಂ ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!* ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ- ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ; ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು ನೀರನೂ ಬಿಡದೆ ಹೀರುವೆನೆಂಬ ಪೂಣಾಂತು ಜಗವ ಸುಡುತಿದ್ದರೂ ಭಾಸ್ಕರನು-ಮೃಗಜಂತು ತರುರಾಜಿ ಸರ್ವಮುಂ ಇರೆ ಬಿಸಿ...

ಏಳೇಳು ಚಲುವತಿಯೆ! ನಿನಗಾಗಿ ತವಕಿಸುತ ನಿಂತಿಹರು ಯೋಗಿಗಳು, ಪಂಧವನೆ ತೊಟ್ಟಿಹರು ಕವಿವರರು ನಿನ್ನ ನೋಡುವದೆಂದು, ಬಿಟ್ಟಿಹರು ದೆಸೆದೆಸೆಗೆ ಬೆಳಕಿನಂಬುಗಳನ್ನು ಚದರಿಸುತ ಕತ್ತಲೆಯನರಸಿಗರು ತಾರೆಗಳು ಚಮಕಿಸುವ ತಮ್ಮ ಕಿರುವೆರಳನ್ನು, ನಲಿಯುವವು. ಮೆ...

ಕನ್ನಡ ನಲ್ಬರಹದ ಸೇವೆ ಮಾಡಲು ಕಾರಣರಾದ ನಮ್ಮೆಲ್ಲ ಬರಹಗಾರರಿಗೆ, ಓದುಗರಿಗೆ ಹಾಗೂ ಸದಸ್ಯರಿಗೆ ನನ್ನಿ....

ನರಸತ್ತ ಶಿವಧರ್‍ಮ ಬ್ಯಾಡ ಬ್ಯಾಡೋ ಯಪ್ಪ ಸತ್ತವನು ಶಿವಯೋಗಿ ಆಗಲಾರ ಇದ್ದವನು ಬಿದ್ದವನು ಎದ್ದೋಡಿ ಹೋದವನು ಶಿವಶಿವಾ ಶಿವಯೋಗಿ ಆಗಲಾರ ಪಟ್ಟೆ ಭಸಿತವ ಇಟ್ಟು ಲಿಂಗಬೆಟ್ಟವ ಕಟ್ಟಿ ಕಟ್ಟೀಯ ವಾಚಾಳಿ ಶರಣನಲ್ಲ ಹಗಲೊಂದು ಪರಿನಿದ್ರಿ ಇರುಳೊಂದು ಪರಿನಿದ...

ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ, ಸಮಾನತೆಯ ಬಗ್ಗೆ ಚರ್‍ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಪ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್‍ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸ...

ನಂಜಿ ರತ್ನ ತೋಟ್ಕ್ ಓಗಿದ್ರು ಒಂದಾರ್‌ ಮಾತಾಡ್ನಿಲ್ಲ; ಔರ್ಗೊಳ್ ಮಾತಾಡ್ನಿಲ್ಲಾಂತಲ್ಲ- ಆಡೋಕ್ ಮನಸಾಗ್ನಿಲ್ಲ. ೧ ನಂಜಿ ರತ್ನಂಗ್ ತೋರಿದ್ಲೊಂದು ದುಂಬಿ ತಬ್ಬಿದ್ ಊವ! ರತ್ನನ್ ಮನಸಿನ್ ಅಡಗ್ ಸೇರಿತ್ತು ನಂಜಿ ಮನಸಿನ್ ರೇವ! ೨ ಮನಸಿನ್ ಜೋಡಿ ಯೀಣೆ...

ಏಳು ಮೆಟ್ಟಿನ ಹುಲಿಯ ಬೀರ ಬೇಂಟೆಯ ಬಿಡಿಸಿ ಮಗುವ ಮುದ್ದಾಡುವೊಲು ಮಾಡಿದಾಕೆ. ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ ತಾನೆ ತನ್ನಷ್ಟಕ್ಕೆ ಹಾಡಿದಾಕೆ. ತಳಿರಿನುಡುಗೆಯನುಟ್ಟು ಗರಿತೊಡುವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ. ಗಿಡಕೆ ಗುಡ...

ಒಬ್ಬ ಶಿಷ್ಯ ತನ್ನ ಆಪ್ತ ಗುರುಗಳಲ್ಲಿ ಬಂದು ಹೇಳಿದ. “ಗುರುಗಳೆ! ಶೂನ್ಯವನ್ನು ನಾ ಗ್ರಹಿಸಿ ಹಿಡಿಯಲು ಕಲಿತು ಬಿಟ್ಟೆ”ಎಂದ. “ಭಲೇ! ಅದು ಹೇಗೆ?” ಎಂದರು ಗುರುಗಳು? “ಕೈಯ್ಯ ಬೊಗಸೆ ಮಾಡಿ ಮುಚ್ಚಿಹಿಡಿದಿರುವೆ ಶ...

ಶಕ್ತಿಯನೆಮಗೀವ ಅನ್ನದೊಳು ನೂರಾರು ತರಹ ಯುಕ್ತದೊಳಡುಗೆ ಮಾಡಲದುವೆ ಸಾವಿರದಾರು ತರಹ ಭಕ್ತಿಯೊಳೆಮ್ಮನ್ನವನು ನಾವೆ ಬೆಳೆದೊಡದು ವರಹ ಸೊಕ್ಕಿನೊಳಲೆವುದನೆ ಉದ್ಯೋಗವೆನೆ ವ್ಯರ್‍ಥವೆಲ್ಲರ ಬರಹ ರೊಕ್ಕವೆನುತನ್ನಮೂಲವನೆ ಮುಕ್ಕಿರಲೆಲ್ಲೆಡೆ ತ್ರಾಹ &#821...

(‘ಹೌದೋ’ ಹಾಕೂ ಕೊಬ್ಬ ಬೇಕಾತೀದು) ತಂದನ್ನೇ ತಾನೋ ತಾನನಂದೇ ನಂದಾನ ತಂದನ್ನೇ ತಾನೋ ತಾನನಾನಾ | || ೧ || ಶ್ವಾಮಿಯ ನೆನದೇನೋ ಭೂಮಿಯ ನೆನದೇನೋ ಶ್ವಾಮಿ ಶಂಕರನಾ ನೆನದೇನೋ || ನೆನದರೆ ಭೂಮಿಯ ತಾಯೇ, ಬಲ್ಲವ್ರೇ ನಿಮ್ಮ ನೆನೆದೇನೋ || ೨ || ಬಲ್ಲವ್ರ...

ಬರೆದವರು: Thomas Hardy / Tess of the d’Urbervilles ನಾಯಕನು ನಿದ್ದೆಯಿಂದ ಏಳುವ ವೇಳೆಗೆ ಸುಮಾರು ಐದು ಗಂಟೆಯಾಗಿತ್ತು. ಆ ವೇಳೆಗೆ ಅಮಲ್ದಾರನು ಎರಡು ಮೂರು ಸಲ ಬಂದು ಹೋಗಿದ್ದನು. ನಾಯಕನು ಎದ್ದು ಕೈಕಾಲು ತೊಳೆದುಕೊಂಡು ಬರುವ ವೇಳೆ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...