(‘ಹೌದೋ’ ಹಾಕೂ ಕೊಬ್ಬ ಬೇಕಾತೀದು)
ತಂದನ್ನೇ ತಾನೋ ತಾನನಂದೇ ನಂದಾನ
ತಂದನ್ನೇ ತಾನೋ ತಾನನಾನಾ | || ೧ ||
ಶ್ವಾಮಿಯ ನೆನದೇನೋ ಭೂಮಿಯ ನೆನದೇನೋ
ಶ್ವಾಮಿ ಶಂಕರನಾ ನೆನದೇನೋ || ನೆನದರೆ ಭೂಮಿಯ ತಾಯೇ,
ಬಲ್ಲವ್ರೇ ನಿಮ್ಮ ನೆನೆದೇನೋ || ೨ ||
ಬಲ್ಲವ್ರ ನೆನದೇನೋ ಬಿಲ್ಲವ್ರ ನೆನದೇನೋ
ಹೆತ್ತಾ ಹೆರಿಯವ್ರಾ ನೆನದೇನೋ
ಹೆತ್ತಾ ಹೆರಿಯವ್ರಾ ನೆನದಲ್ ಬೂಮಲ ತಾಯೇ || ೩ ||
ಹುತ್ತಿನ ಮೇಲಿರುವಾ ದರಣೀಯೋ || ನಾಗಪ್ಪಾನೇ
ತಪ್ಪದೇ ಬಾರೋ ಬೆಲೆಮುಂದೇ || ನಾಗಪ್ಪಾನೇ
ನಾಗಮಂಡಲವಾ ಗೆಯುಕೊಡುವೆ || ೪ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.