ಬರೆದವರು: Thomas Hardy / Tess of the d’Urbervilles
ನಾಯಕನು ನಿದ್ದೆಯಿಂದ ಏಳುವ ವೇಳೆಗೆ ಸುಮಾರು ಐದು ಗಂಟೆಯಾಗಿತ್ತು. ಆ ವೇಳೆಗೆ ಅಮಲ್ದಾರನು ಎರಡು ಮೂರು ಸಲ ಬಂದು ಹೋಗಿದ್ದನು.
ನಾಯಕನು ಎದ್ದು ಕೈಕಾಲು ತೊಳೆದುಕೊಂಡು ಬರುವ ವೇಳೆಗೆ ಅಲ್ಫಾಹಾರವಾಗಿ ಮಾಂಸಭೋಜನವು ಬಂದಿತ್ತು. ಆ ವೇಳೆಗೆ ಅಮ ಲ್ದಾರನು ಬಂದನು. ಇಬ್ಬರೂ ಅಲ್ಫಾಹಾರವನ್ನು ತೆಗೆದುಕೊಳ್ಳುತ್ತ ಕುಳಿತರು.
“ಏನು ನಾಯಕರಿಗೆ ಈ ದಿನ ವೀರಾವೇಶಬಂದಿತ್ತಂತೆ?”
“ಅದೇನು ಮಹಾ! ಬುದ್ಧಿ! ಆಗಾಗ ನಡೀತಾ ಇರೋದೆ ಇದು?”
“ಪ್ರಿನ್ಸ್ ಇಂತಹ ಬೇಟೆ ಎಷ್ಟು ನೋಡಿರಬಹುದು ! ಅಂಥ ವರೂ ಕೂಡ ಆಶ್ಚರ್ಯಪಟ್ಟು ಹೋಗಿದ್ದಾರೆ. ಇನ್ನೇನು ನಿಮ್ಮನ್ನು ಕರೆಯಿಸಿಕೊಳಲೂ ಬಹುದು.”
“ಇವೊತ್ತು ನಾನು ಅವರನ್ನು ನೋಡುವುದಿಲ್ಲ. ತಪ್ಪಿಸಿಬಿಡಿ.?
“ಅದೇನು ? ”
“ಇವೊತ್ತು ನನಗೆ ಮನಸ್ಸು ನಯವಾಗಿರೋದಿಲ್ಲ. ಹಿಡಿ ದೇನು! ಕಡಿದೇನು! ಎಂಬಂತೆ ಇದ್ದು, ಮನಸ್ಸು ಘುರ್ಕಾಯಸ್ತಾ ಇರುತವೆ. ಇಂಥಾ ದಿನ ನಾನು ಮನೇಗೆ ಕೂಡ ಹೋಗೋಲ್ಲ. ?
“ಮತ್ತೆ?”
” ಅದಕ್ಕೇನು ಬುದ್ದಿ ! ಇರೋದಿಲ್ವಾ ? ಯಾವುದಾದರೂ ಮನೆ ನುಗ್ಗಿದಾ! ತಿಂದಾ! ಕುಡಿದಾ! ಮನಸ್ಸು ಹತೋಟಿಗೆ ಬಂದಮೇಲೆ ಮನೆಗೆಹೋದಾ !”
“ಹಾಗಾದರೆ ಇವೊತ್ತು ಬೇಟೆ ಉಂಟು?”
“ಕೇಳಲೇಬೇಕಾಗಿಲ್ಲ. ಲೇ ಯಾರೋ! ನಂಜಪ್ಪನ ಕರೀ!”
ನಂಜಪ್ಸ ಬಂದು ತೆರೆಯನ್ನು ಕೊಂಚತೆಗೆದು ಮೊಕತೋರಿಸಿದೆ ;
“ಏನ್ರೀ ಎಷ್ಟುಹೊತ್ತಿಗೆ ಗಾಡೀ ಕಟ್ಟೋದು?” “ಸಾರೋಟು ಎಂಟು ಗಂಟಿಗೆ ಬರುತ್ತದೆ ಬುದ್ದಿ.” “ನೋಡಿದಿರಾ! ನೀವೂ ಬರುತೀರಾ ಬುದ್ಧಿ !” “ಇವೊತ್ತು ನಿಮ್ಮ ಕೈಲಿ ಮಾತನಾಡೋಕೆ ದಿಗಿಲಾಗುತ್ತದೆ. ನೀವು ಆನೆ, ನಾವು ಆಡು ಎನ್ನುವಹಾಗಿದೆ. ”
ನಾಯಕನು ಹಹ್ಹಾ ಎಂದು ಬಾಯಿಬಿಟ್ಟು ನಗುತ್ತಾ “ಇವೊತ್ತು ಇಂಥಾ ಆವೇಶ ಇಲ್ಲದಿದ್ದರೆ ಆ ರಾಕ್ಷಸ ಹಂದಿಮೇಲೆ ಬೀಳೋಕಾದೀತಾ! ಈ ಹಂದಿಬೇಟೆ ದಿನ ನಾನೂ ರಾಕ್ಷಸನೆ !-ನಂಜಪ್ಪಾ ! ಇವೊತ್ತು ಬೇಟೆ ಆಡಿರೋ ದಿನ. ನೆನೆಪದೆಯೋ ಅಂತೀನಿ” ಎಂದನು. ನುಡಿ ಹೆಚ್ಚು ಕಡಿಮೆ ಹುಲಿಯ ಸಣ್ಣ ಘರ್ಜನೆಯಂತಿತ್ತು.
” ನೆನೆಪದೆ ಬುದ್ಧಿ ”
ಅಮಲ್ಜಾರನಿಗೆ ಅರ್ಥವಾಗಲಿಲ್ಲ: “ಹಾಗೆಂದರೆ” ಎಂದನು.
“ಇವೊತ್ತು ನಾನು ರಾಕ್ಷಸ ಅನ್ನಲಿಲ್ಲವಾ ಬುದ್ಧಿ, ಅದೇ ಮಾತು! ಯಾವೋಳಾದರೂ ಪಾಪಿ ಪರದೇಶಿ ಇವೊತ್ತು ಬಂದರೆ ಉಳಿದಾಳಾ! ಅದಕ್ಕೆ ಯಾವುದಾದರೂ ಕಗ್ಗಲಿತುಂಡು ನೋಡಪ್ಪಾ ! ಅಂದೆ. ಆಯಿತು ಇವೊತ್ತು ನೀವೇನಾದರೂ ನಮ್ಮ ಜೊತೇಲಿ ಬಂದೀರೋ??
ಅಮಲ್ದಾರನಿಗೆ ಆಸೆ : ಆದರೆ ಕ್ಯಾಂಪು ? ಯಾರಾದರೂ ಥಟ್ಟನೆ ಹೇಳಿ ಕಳುಹಿಸಿದರೆ ? ಎಂದು ದಿಗಿಲು.
ನಾಯಕನು ನಕ್ಕು “ನೋಡಿ ! ಎಷ್ಟಾಗಲೀ ನೀವು ತಾಪೇ ದಾರ್ರು ಅನ್ನೋದು ಇದೇ! ಸುಮ್ಮನೆ ನನ್ನ ಜೊತೇಲಿ ಬಂದುಬಿಡಿ. ಹನ್ನೊಂದು ಗಂಟೆಗೆ ಬಂದು ಬಿಡೋರಂತೆ. ”
” ಅದಕ್ಕಿಂತ ಹನ್ನೊಂದು ಗಂಟಿಗೆ ಹೋಗಿ ಮೂರು ಗಂಟಿಗೆ ಬಂದುಬಿಡೋದೆ ಚೆನ್ನಾ!”
“ಐದು ಗಂಟಿಗೆ ಬರೋವಾ ಬನ್ನಿ. ನಂಜಪ್ಪ! ಹನ್ನೊಂದು ಗಂಟೆಗೆ ಸಾರೋಟಿನಲ್ಲಿ ನಮ್ಮ ಬುದ್ಧಿಯವರು ಬರಲಿ. ನಮಗೆ ಎಂಟು ಗಂಟೆಗೆ ಎತ್ತಿನ ಗಾಡಿ ಕಟ್ಟಸಿ.
“ನಿಮಗೆ ಹೊತ್ತಾದರೆ?”
“ಇಲ್ಲಾ! ನಮ್ಮ ಎತ್ತೂ ಕುದುರೆ ಹಂಗೇ ಹೋಗ್ತದೆ? ?
ಅವರು ಉಪಾಹಾರ ಮುಗಿಸಿಕೊಂಡು ಬರುವ ವೇಳೆಗೆ ಡೆಪ್ಯಟಕಮೀಷನರ ಕಡೆಯಿಂದ ಆಳು ಬಂದಿದ್ದ. ಅವನು ತಂದಿದ್ದ ಕಾಗದವನ್ನು ತೆಗೆದುಕೊಂಡು ಅಮಲ್ದಾರನೇ ಓದಿ ಹೇಳಿದನು.
” ರಾಜಕುಮಾರರು ತಮ್ಮ ಬೇಟೆಯ ಪರಾಕ್ರಮ, ಚಾತುರ್ಯ, ಮೊದಲಾದವನ್ನು ನೋಡಿ ಬಹು ಸಂತೋಷ ಪಟ್ಟಿದ್ದಾರೆ. ಅವರಿಗೆ ತಮ್ಮನ್ನು ಮುಖತಃ ನೋಡಬೇಕು : ಮಾತನಾಡಿ ತಮ್ಮ ಸಂತೋಷ ವನ್ನು ತಾವೇ ತಿಳುಹಿಸಬೇಕೆಂದು ಆಸೆ. ಆದಕ್ಕೆ ಬೇಟೆಯ. ದಿನ ತಾವು ಇನ್ನು ಯಾವ ಕೆಲಸವನ್ನೂ ಮಾಡುವುದಿಲ್ಲ: ತಾವಾಗಿ ಮಾತನಾಡುವವರೆಗೂ ಯಾರೂ ಮಾತನಾಡಿಸಕೂಡದು ಎಂದು. ಗೊತ್ತಾಗಿರುವುದರಿಂದ್ದ ಈ ಕಾಗದ ಬರೆಯ ಬೇಕಾಗಿ ಬಂದಿದೆ. ತಾವಾಗಿ ಬರುವುದಾದರೆ ರಾಜಕುಮಾರರು ಸಂತೋಷದಿಂದ ಬರಮಾಡಿ ಕೊಳ್ಳುತ್ತಾರೆ. ಅಥವಾ ಆಯಾಸದಿಂದ ಇವೊತ್ತು ಬರುವುದು. ಸಾಧ್ಯವಿಲ್ಲವಾದರೆ, ನಾಳೆಯ ದಿನ ಭಾರಿಯ ಬೇಟೆಗೆ ಹೋಗುವಾಗ, ತಪ್ಪದೇ ತಾವೂ ಬಂದೇ ಬರಬೇಕೆಂದು ರಾಜಕುಮಾರರು ಕೋರು ತ್ತಾರೆ, ಎಂದು ಹುಜೂರಿನಲ್ಲಿ ಅಪ್ಪಣೆಯಾಗಿದೆ. ಹುಜೂರು ಸವಾರಿಯು ಕೂಡ ತಮ್ಮ ಬೇಟೆಯನ್ನು ಕಂಡು ಆಶ್ಚರ್ಯ ಮಗ್ನರಾಗಿ ಸಂತೋಷ ಪಟ್ಟು ತಮ್ಮಿಂದ ನಮ್ಮ ದೇಶಕ್ಕೆ ಕೀರ್ತಿಯೆಂದು ಹೆಮ್ಮೆ ಗೊಂಡಿದ್ದಾರೆ.”
ಅಮಲ್ದಾರನು ಎದ್ದು ನಾಯಕನ ಕೈ ಹಿಡಿದುಕೊಂಡನು. ಅವರ ಸಂತೋಷವು ಆಶ್ಚರ್ಯವಾಯಿತು. “ಏನಿದು? ನಾಯಕರೆ? ಕೈಯ್ಯೊ ಕಬ್ಬಿಣದ ತುಂಡೋ?” ಎಂದನು.
” ಈಗೇನು ನೋಡುತ್ತೀರಿ ಬುದ್ದಿ? ಆಗ ಹಂದಿ ಹೊಡೆಯೋ ವಾಗ ನೋಡಬೇಕಿತ್ತು. ಮೈಯೆಲ್ಲಾ ಹೀಗೇ ಇರುತ್ತದೆ. ”
“ಮತ್ತೆ ಮೊದಲಿನ ಹಗೆ ಆಗೋದು? ”
” ಒಂದಿಬ್ಬರು ಬಲವಾದ ಹೆಂಗಸರು ಮೆತ್ತಗಾದಾಗ. ಅದಿರಲಿ. ಈಗ ಏನು. ನಾನೇ ಹೋಗಬೇಕಾ ಈ ರಾಜಕುಮಾರರನ್ನ ನೋಡೋಕೆ? ” ಅಮಲ್ದಾರನು ಕೈ ಹಿಡಿದು ಕೊಂಡು ಹೇಳಿದನು: “ಹೋಗಿ ಬನ್ನಿ. ತಮ್ಮ ಪ್ರತಾಪನನ್ನು ಕಣ್ಣು ನೋಡಿ ಸಂತೋಷ ಪಟ್ಟಿದೆ. ಆ ಸಂತೋಷವನ್ನು ಬಾಯಿ ಹೇಳಿ ಸಂತೋಷ ಪಡಲಿ. ಯೂರೋಪಿರ್ಯರು ಸಂತೋಷವಾದಾಗ ಕೈ ಕುಲುಕದೇ ಇರುವುದಿಲ್ಲ. ಹಾಗೆ ಕೈಕುಲುಕಿ, ಈ ಗರ್ಡರ್ ಮೂರ್ತಿ ನೋಡಿ ಸಂತೋಷ ಪಡಲಿ. ಈ ನಾಡಿನಲ್ಲಿ ಎಂಥಾ ವೀರ ಪುರುಷರಿದ್ದಾರೆ ಅನ್ನೋ ಅರಿವು ಆಗಿರಲಿ.”
” ಏನುಮಾಡಲಿ, ಈ ಮೈ ಹಿಂಗಿರುವಾಗ ಮನಸ್ಸು ಬೋ ಬಿಗಿ. ಅದಕ್ಕಾಗಿ ಹಿಂತೆಗೆದೆ. ಆಗಲಿ. ನೀವೂ ಹೇಳ್ತೀರ. ನಡೇರಿ.”
ಆಳನ್ನು ಕರೆದು ಅಮಲ್ದಾರನು “ಸಾಹೇಬರಿಗೆ ಹೇಳಯ್ಯಾ. ನಾಯಕರು ಬರುತ್ತಿದ್ದಾರೆ ಅಂತ” ಎಂದು ತಾನೇ ಹೇಳಿ ಕಳುಹಿಸಿದನು.
ಇನ್ನೊಂದು ಗಳಿಗೆಯೊಳಗಾಗಿ ಅಮಲ್ದಾರರನ್ನೂ ಜೊತೆಯಲ್ಲಿ ಕೂರಿಸಿಕೊಂಡು ನಾಯಕನು ಭಾರಿಯ ಸಾರೋಟಿನಲ್ಲಿ ಕ್ಯಾಂಪಿನ ಕಡೆಗೆ ಹೊರಟನು. ಆತನ ಇಚ್ಛೆಯಂತೆ ದಾರಿಯಲ್ಲಿ ಎಲ್ಲರೂ ಸಾರೋಟನ್ನು ನೋಡುವವರೇ!
*****
ಮುಂದುವರೆಯುವುದು