ಗೋಪಾಲ ಗೋವಿಂದ ಯಶೋದೆ ಕಂದ
ತೋರೋ ನಿನ್ನಯ ವದನಾರವಿಂದ
ಕಾತರಿಸುತಿಹೆ ನಾನು ನಿನ್ನೆಯ ಕಾಣಲು
ದರುಶನವ ನೀಡೋ ರಾಧೇ ಗೋವಿಂದ
ಮಾಯಾ ಪ್ರಪಂಚ ಮರೆಸುತ್ತಿದೆ ನಿನ್ನ
ಆಸೆ ತೋರಿದ ಕಾಮ ಕಾಂಚನದಿಂದ
ನನ್ನ ರೂಪವೇ ನಾ ಮರೆತಿಹೆ ಕೇಶವ
ಸತಿ ಸುತರೆಂಬ ನಿತ್ಯ ಲೋಭದಿಂದ
ಕಣ್ಣಗಳಲ್ಲಿ ತುಂಬಿ ಹರಿದಿವೆ ಕಂಬನಿ ಕೃಷ್ಣ
ಏಕೈಕ ನಿನ್ನ ಕರಣಾ ಭಾವದಿಂದ
ಕೊಳಲು ಭಾವಗಾನ ಆಲಿಸಬೇಕೆಂದಿಹೆ
ನಿನ್ನಲಿ ಕರಗುವ ತನ್ಮಯ ಭಾವದಿಂದ
ನೀನಿಲ್ಲದ ನೀರಸವಾಗಿದೆ ಜೀವಾನಂದ
ಆನಂದ ಮರೆತು ದುಃಖ ದುಮ್ಮಾನದಿಂದ
ನಾಥನು ನೀನು ಮತ್ತೆ ಅನಾಥ ನಾನು
ಮಾಣಿಕ್ಯ ವಿಠಲನ ಭಕ್ತಿ ಮೋಹಾನಂದ
*****