ಕವಿ ಮತ್ತು ವಿಮರ್ಶಕ

ಬಿತ್ತರಿಸದೆ ತಾಂ ಕಾವ್ಯವ ಗೊತ್ತರಿಯಲಳವೆ ಕವಿಯೆದೆಯಂ? ಕವಿಯೆದೆಯಂ| ಗೆತ್ತಿರದ ವಿಮರ್ಶಕನೇಂ? ಹೆತ್ತರಿಯದ ಬಂಜೆ ಸೂಲಗಿತ್ತಿಯೆ ಜಗದಿ? ||೧|| ಬೆಳಗುವೂಲರ್ಥದಿಂದ ನುಡಿ, ಕಾಣಿಕೆಯಿಂ ಬೆಳೆವಂತೆ ಲೋಚನಂ, ತಳುವುವೊಲಿಂಚರಂ ಸ್ಫುರಣದಿಂ, ನದಿ ತಕ್ಕನಿಹಂತೆ ದಂಡೆಯಿಂ; ಬೆಳಗಿ ಮನಕ್ಕೆ,...

ಜಯ ಜಯಾ!

ರಾಗ ನವರಸಕನ್ನಡ ರೂಪಕತಾಳ ('ನಿನುವಿನಾ ನಾಮದೇಂದು' ಎಂಬ ತ್ಯಾಗರಾಜ ಕೃತಿಯಂತೆ) ಜಯಜಯಾ ನಮ್ಮೊಡೆಯಾ! ಜಗದೊಡೆಯಾ ಜಯಜಯಾ! ||ಪಲ್ಲ|| ಜಯಜಯ ಭಾರತದಜೊಡೆಯಾ! ಬಡವರೊಡೆಯ ಜಯಜಯಾ! ||ಅನು|| ಏನು ಚೆಲುವೊ ದೇವ ನಿನ್ನೀ ಭಾರತಮೂರ್ತಿ! ತೆರೆಯ ಗೆಜ್ಜೆ,...

ಬರ್ದಿಲ

ಅಂದಿನ ಹೂಗಳಿಲ್ಲ, ನಲಿವಕ್ಕಿಗಳಿಲ್ಲ, ಕೊಳಂಗಳಿಲ್ಲ, ತಂ ೧ಗಾನಗಳಿಲ್ಲ- ಧಾರಿಣಿ ತನತ್ತುರೆ ಗೆತ್ತಣಮಿಲ್ಲವಿಂದಿಗೆ! ಕಬ್ಬದೊಳಾದೊಡಂದಿಗೊಗೆತಂದೊಲೆ ನಿಂದಿಹವಿಂದಿಗೆಂದಿಗುಂ - ಬರ್ದಿನ ವಾರ್ಧಿಯಿಂದೊಸರ್ದಮರ್ದೆನೆ ಕಬ್ಬಮದೊಂದೆ ಬರ್ದಿಲಂ. ೪ ಯಾವೆನಿತೆಲ್ಲ ರಾಜ್ಯವಳಿವೋದುದೊ? ಮಂದಿಯೆ ಕುಂದಿ ಮಾದುದೊ? ವೀರರ ಕೀರ್ತಿ ನೆತ್ತರೊಳಗಾಳ್ದುದೊ?...

ಜೀವನದೀ ಮಧುಮಾಸಂ

ಜೀವನದೀ ಮಧುಮಾಸಂ ಬತ್ತುತ ಬಂತು, ಮನಸಿನ ಮಧುರವಿಕಾಸಂ ನನೆಯೊಳೆ ಸಂತು; ಮುಸುರಿದ ಮಕರಂದಪಾನ ಮೊದವದೆದೆಯ ಭ್ರಮರಗಾನ ಮೆಚ್ಚರಲೆಂತು? ೭ ಮನೆಗೆಯ್ದಕ್ಕರೆಯ ಪಿಕಂ ಪಾರಿದುದೆಲ್ಲಿ? ಗೂಡುಗೊಂಡ ಹಿಂಡು ಶುಕಂ ಕಾಣಿಸವಿಲ್ಲಿ! ಅಳಲ ಕಣಜವಿನ್ನು ಸಾಗೆ, ಹಗಲುದ್ದಕೆ...

ಬಲ್ಲುದೆ ಲತೆ ಫಲಂ ತನ್ನ

ಬಲ್ಲುದೆ ಲತೆ ಫಲಂ ತನ್ನ ಸಿಹಿಯೊ ಕಹಿಯೊ ಎಂಬುದನ್ನ? ಒಗೆದಂತೊದಗಿಸಲು ಬನ್ನ ಮೇನೊ? ಬಳ್ಳಿಯಾ ೪ ಹಲವೊ ಕೆಲವೊ ಸವಿದು ಹಣ್ಣ, ಸಿಹಿಯಾದಡೆ ಕೊಳುವುದುಣ್ಣ ಕಹಿಯಾದಡೆ ಕಳೆವುದಣ್ಣ ಲತೆಯ ತಳ್ಳಿಯಾ ೮ ಪ್ರಕೃತಿವಶಮೆ ಫಲಿಸ...

ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?

ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?- ಬೇಡಿದುದ ಕೊಡೆ, ಬೇಡದುದನಾಯ್ದು ಕೊಡುವೆ! ಆರದುದನಾಪೆನೆಂದೇಕೆ ತಡಬಡುವೆ? ಕೇಳುವೊಡನೀವೆನೆಂದೇಕ ಬೇಡಿಸುವೆ? ೪ ಆದೊಡಂ ಕೇಳೆನಗೆ ನಿನ್ನಿಂದು ಬೇಡ- ಅವಳನೆನ್ನಿಂದೊಯಿದ ಇಂದೆನಗೆ ಬೇಕೆ? ಇನ್ನವಳ ಕಾಣಿಸದ ನಾಳೆಯಕಟೇಕೆ? ಅವಳಿದ್ದ ನಿನ್ನೆ ಸಾಕೆನಗದಂ...

ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ...

ಸಫಲ

'ನಮ್ಮ ಸೊಡರನುರಿಸುವಿರೇಂ ಮಿಣುಕಲಿಂತು ಬರಿಯೆ? ಪರರ ಬೆಳಕನಳುಪುವಿರೇಂ? ಸುಡದೆ ನಿಮ್ಮ ಗರಿಯೆ?'- ಜಂಕಿಸಿತಿಂತುಡು ಸಂಕುಳ ಹೊಂಚುವ ಮಿಂಚುಹುಳಂಗಳ ಬೇಸಗೆ ಕೊನೆವರಿಯೆ. ೭ 'ಕುರುಡಾದಿರೆ ಬೆಳಕಿನಿಂದ? ನಿಮ್ಮ ಬೆಳಕಿದಲ್ಲ; ನಿಮಗೆತ್ತಣಿನತ್ತಣಿಂದ ನಮಗಿದು ಬಂತಲ್ಲ? ಹಿರಿದು ಕಿರಿದು...

ಹೆಂಗಸು

'ನಾರಿ ನಾನೆಂದಕಟ ರೂಪಗೋಸಾಯಿ೧ ನನಗೀಯನೆನುವನೇಂ ದರ್ಶನದ ಭಾಗ್ಯಂ? ಹೆಮ್ಮೊಗನ ನೋಡದೇನವನ ವೈರಾಗ್ಯಂ? ಏತರೀ ವ್ರತವೊ!' - ಎಂದಳು ಮಿರಾಬಾಯಿ ೪ 'ಇವನಾದೊಡಂ ಗಂಡೆ? ಗೋಕುಲದೊಳೆಲ್ಲ ಹೆಂಗಸಲ್ಲದೆ ಗಂಡಸಿಲ್ಲಿ ಬರಸಲ್ಲ! ಅರಿಯಲಿವನಿಲ್ಲಿಹುದನಟ್ಟದಿರಳಲ್ಲ ಬೃಂದಾವನದ ದೇವಿ! ಇವನದೇಂ...

ಬೇಕು-ಬೇಡ

ಬೇಕೆಂಬುವ ಬಡತನವ ನ್ನೇಕೆ ಕರೆದುಕೊಳುವೆ? ಬೇಡದೆ ಬಹ ಬಲುಧನವ ನ್ನೇಕಕಟಾ ಕಳೆವೆ? ಹಗಲ ಕುಮುದದಿಂದುಭಿಕ್ಷೆ, ಶಿಶಿರಾಂತದ ಸುಮೋಪೇಕ್ಷೆ ನೆರೆಯಲೆಂದುಮಳವೆ? ೭ ಬೇಕೆನೆ ನೀನೊಮ್ಮೆ ಬಳಿಕ ಬೇಕೆನುವೆಲ್ಲವಂ- ಬೇಡುವುದಿನ್ನೇಕೆ ತುಳುಕ ಲಂಬುಧಿ ಸಲಿಲವಂ? ಬೇಡುವಂತೆ ಬಡವನಾದೆ-...