ಷೇರು ಪೇಟೆ ಕುಸಿಯುತಿದೆ…

ತಂಗಿ... ಷೇರುಪೇಟೆ ಕುಸಿಯುತಿದೆ ಮಾರುಕಟ್ಟೆ ನಡುಗುತಿದೆ... ಕರಡಿಯೊಂದು ಕುಣಿಯುತ್ತಿದೆ ಗೂಳಿಯೊಂದು ತಿವಿಯುತ್ತಿದೆ ಗುಳ್ಳೆಯೊಂದು ಒಡೆಯುತಿದೆ ಕೊಳ್ಳೆಯೊಂದು ಕರಗುತ್ತಿದೆ... ಅಕ್ಕ... ಷೇರುಪೇಟೆಯೇ? ಗೊತ್ತಿಲ್ಲ ಕಣೆ! ಇಲ್ಲಿ.... ಕೇಳಿಲ್ಲಿ.... ಪುಟ್ಟ ಮೀನು ಭಾರಿ ಹಡನ್ನು ಮುಳುಗಿಸುವುದಂತೆ ನಿಜವೇನೇ?...

ತಾಯಿ ಮಗುವಿನ ಆಟ

ಇಲ್ಲೇ ಇರು ಆಡಿಕೊಂಡಿರು ಎಲ್ಲಿಯೂ ಹೋಗದಿರು ಹೂಂಗುಟ್ಟಿತು ಮಗು ಮುಖದ ತುಂಬ ನಗು ಹೊರಳುತ್ತಾ ಉರುಳುತ್ತಾ... ಅಂಬೆಗಾಲನು ಇರಿಸಿತು ಲಜ್ಜೆ ಬಟ್ಟೆಯ ತೊಟ್ಟು ತಿಪ್ಪ ಹೆಜ್ಜೆಗಳನಿಟ್ಟಿತು ಬಾಯಿಗೆ ಬೆರಳು ಕಣ್ಣಿಗೆ ಮರಳು ಹೋ... ಎಂದಿತು...

ಹುಚ್ಚು

ಕೊಟ್ಟದ್ದು ಪಾಷಾಣವಲ್ಲ ಪ್ರೀತಿ..... ತುಂಬಿದೆ, ತುಳುಕಿದೆ ತೊರೆದು ಭೀತಿ ಇನ್ನು ಕಾಯಲಾರೆ ನಿನಗಾಗಿ ಸಾಯಲಾರೆ ಒಂದು ಯುಗವೇ ನಮ್ಮಿಬ್ಬರ ನಡುವೆ ಇದ್ದು ಹೋಗಲಿ ಇಲ್ಲ.... ನನಗೇನೂ ಇಲ್ಲ ನಿನ್ನನ್ನು ಕಾಣುವ ಬಯಕೆ ನಾಕು ರಸ್ತೆ...

ಎಲ್ಲಿಂದ ಎಲ್ಲಿಗೆ?

ಮಣ್ಣಿನಲ್ಲೊಂದು ಅಣುವಾಗಿದ್ದೆ ಆಶೆಯ ಕುಲುಮೆ, ಆಗಸದೊಲುಮೆ ಹೊಮ್ಮಿದೆ ನಾ.... ಹೊರ ಹೊಮ್ಮಿದೆ ನಾ.... ಬೀಜವಾಗಿ. ಅಡವಿಯಲ್ಲೊಂದು ಗಿಡವಾಗಿದ್ದೆ ಗಾಳಿಯ ಗರಿಮೆ ವರುಣನ ಬಲುಮೆ ನೋಡಿದ ನಾ... ಜಗ ನೋಡಿದೆ ನಾ.... ಕುಸುಮವಾಗಿ. ಹಳ್ಳದಲ್ಲೊಂದು ಹನಿಯಾಗಿದ್ದೆ...

ಕವಿಯ ಕಾಣ್ಕೆ

ಅವರು ಕಾಲುಗಳು ಸೋಲುವ ತನಕ ಬೆಂಬತ್ತಿ ಹೋದರು. ಕೈಗಳು ಸೋಲುವ ತನಕ ಗುಂಡು ಹಾರಿಸಿದರು. ಕಣ್ಣುಗಳು ಸೋಲುವ ತನಕ ಕಿಡಿಗಳ ಕಾರಿದರು. ನಾಲಗೆ ಸೋಲುವ ತನಕ ನಿಂದೆಯ ಸುರಿಮಳೆಗೈದರು. ಹೃದಯ ತುಂಬಿ ಬಂದ ದಿನ...

ಕವಿಯ ನಿರೀಕ್ಷೆ

ಎಂತಹ ಬಿರುಗಾಳಿಯಾದರೂ ಶಾಂತವಾಗಲೇ ಬೇಕು. ಎಂತಹ ಜ್ವಾಲಾಮುಖಿಯಾದರೂ ತಣ್ಣಗಾಗಲೇ ಬೇಕು. ಎಂತಹ ಪ್ರವಾಹವಾದರೂ ನೆರೆ ತಗ್ಗಲೇಬೇಕು. ಎಲ್ಲರಲೂ ಅಂತಃಕರಣ ಇದ್ದೇ ಇರುವುದು. ಕೇಡನು ಅದು ಕೊನೆಗೂ ಗೆದ್ದೇ ತೀರುವುದು. ***** ಗುಜರಾತ್‌ಗೆ ಕವಿ ಸ್ಪಂದನ

ಕವಿಯ ಕನಸು

ದರ್ಗಾದಲ್ಲಿ ಅತ್ತರು ಘಮಘಮಿಸುತ್ತಿದೆ ದೇಗುಲದಲ್ಲಿ ಗಂಧ ಪರಿಮಳಿಸುತ್ತಿದೆ ಅವರು ಸರ್ವಶಕ್ತನಲ್ಲಿ ನಿವೇದಿಸಿಕೊಳ್ಳುತ್ತಿದ್ದಾರೆ ಇವರು ಸರ್ವಾಂತರ್ಯಾಮಿಯಲ್ಲಿ ಪ್ರಾರ್ಥಿಸುತ್ತಿದ್ದಾರೆ. ದೇವರೇ... ಹಗೆತನದ ಹುಟ್ಟಡಗಲಿ ಗೆಳೆತನವು ನಿತ್ಯ ಒದಗಿ ಬರಲಿ. ***** ಗುಜರಾತ್‌ಗೆ ಕವಿ ಸ್ಪಂದನ

ಕವಿಯಾದರೂ ಏನು ಮಾಡಿಯಾನು?

ಪ್ರಭುತ್ವಕ್ಕೆ ಧರ್ಮಗುರುವಿನ ಬೆಂಬಲವಿದೆ ಧರ್ಮಗುರುವಿನಲ್ಲಿ ಪ್ರಭುತ್ವಕ್ಕೆ ನಂಬುಗೆಯಿದೆ ಇಬ್ಬರನೂ ಖಂಡಿಸಿದ ಕವಿಗೆ ಕಠಿಣ ಶಿಕ್ಷೆ ಕಾದಿದೆ. ***** ಗುಜರಾತ್‌ಗೆ ಕವಿ ಸ್ಪಂದನ

ಕವಿಯ ಮಾತನ್ನು ಯಾರು ಕೇಳುತ್ತಾರೆ?

ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ ಇವರು ತಲವಾರಗಳನ್ನು ಹಿಡಿದಿದ್ದಾರೆ ಕಿಚ್ಚು ಹಾಯಿಸುವ ಹಬ್ಬದಲಿ ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ! 'ಅಲ್ಲಾ' ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ 'ರಾಮ' ಎಂದರೆ ಇಲ್ಲೇ ನರಕದಲ್ಲಿ ಉಳಿಸುತ್ತಾರೆ! ***** ಗುಜರಾತ್‌ಗೆ ಕವಿ...