ಹುಚ್ಚು

ಕೊಟ್ಟದ್ದು ಪಾಷಾಣವಲ್ಲ
ಪ್ರೀತಿ…..
ತುಂಬಿದೆ, ತುಳುಕಿದೆ
ತೊರೆದು ಭೀತಿ
ಇನ್ನು ಕಾಯಲಾರೆ
ನಿನಗಾಗಿ ಸಾಯಲಾರೆ

ಒಂದು ಯುಗವೇ
ನಮ್ಮಿಬ್ಬರ ನಡುವೆ ಇದ್ದು ಹೋಗಲಿ
ಇಲ್ಲ…. ನನಗೇನೂ ಇಲ್ಲ
ನಿನ್ನನ್ನು ಕಾಣುವ ಬಯಕೆ

ನಾಕು ರಸ್ತೆ ಕೂಡುವಲ್ಲಿ
ನಿಂತು ಬೇಕಾದರೆ ಹಾಡುವೆ-
ಹೌದು ನಾನು ಹುಚ್ಚಿ
ನನಗೆ ಪ್ರೇಮದ ಹುಚ್ಚು
ಗೊಳಗೊಳಸಿ ನಗುವೆ
ಬುಳುಬುಳು ಎಂದಳುವೆ

ಏನೆಲ್ಲ ಮುಚ್ಚಿಟ್ಟಿರುವೆ
ತೆರೆಯಲಾರೆ ಕದ
ತೋರಲಾರೆ….
ಜಗತ್ತು ಕಂಡುಕೊಳ್ಳಲಿ
ನಾ…. ಸುಮ್ಮನಿರುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಿಪ್ಪಜ್ಜಿ ಸರ್ಕಲ್
Next post ಇವರು

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…