ನಾಳೆ

ಯೆಡ್ತಿ ಊರಾಗ್ ಇಲ್ಲ ಮುನಿಯ ಊರ್‍ಗ್ ಓಗೌಳೆ ಜಾಣೆ! ಜೀತ ತುಂಬ ಜೋಬೀಲೈತೆ ನಿಕ್ಕ ಲ್ನೋವ್ ಅತ್ತಾಣೆ! ೧ ಅತ್ತಾಣೇಗು ಯೆಂಡ ತತ್ತ ದೋಸ್ತೀವ್ರ್ ಎಲ್ಲ ಯೀರ್‍ಲಿ! ನೀನ್ ನಂಗೇನು ಬುದ್ಯೋಳ್ಬೇಡ ನಾಳೆ ಗೀಳೆ...

ಅಭಿರುಚಿ

ಆನಂದದಿಂದ ಬಂದೀ ಜಗದ ರುಚಿಯೆ ಕಹಿ ಯೆಂದು ಕಾತರಗೊಳ್ಳಬೇಡ, ನಾಲಿಗೆಯೆ! ಇದು ಎಲ್ಲವೂ ಅನ್ನ; ಅದರದರ ರುಚಿಯದಕೆ; ಬಿಡು, ನಿನ್ನ ಬಯಕೆಯ ಬಣ್ಣವೆರಚದಿರು, ರಸವೆ ಸಿಹಿ. ಒಗರು, ಸಿಹಿ, ಕಹಿ, ಕಾರ, ಉಪ್ಪು, ಹುಳಿ,...

ಮೋಡಿ ಹಲವು

ಮೋಡಿ ಹಲವು ಮಾಯೆ ಹಲವು ಮೋಡಿಕಾರನೊಬ್ಬನೇ ಮಾಯಕಾರನೊಬ್ಬನೇ ಚಿತ್ರ ಹಲವು ಬಣ್ಣ ಹಲವು ಚಿತ್ರಕರನೊಬ್ಬನೇ ಎಂಥ ಚಿತ್ರ ರಚಿಸುತಾನೆ ಬಾನಿನಂಥ ಮೋಡದಂಥ ಬೆಟ್ಟದಂಥ ಕಣಿವೆಯಂಥ ಹೂದೋಟದಂಥ ವನದಂಥ ಸೂರ್‍ಯೋದಯ ಸೂರ್‍ಯಾಸ್ತ ಬೆಳಗು ಬೈಗು ಸಂಧ್ಯೆಯಂಥ...

ಆತ್ಮಾನಂ ವಿದ್ಧಿ೧

ನನ್ನನರಿಯದೆ ನಿನ್ನನರಿಯಲಳವಲ್ಲ, ನನ್ನ ಕಾಣದ ಮುನ್ನ ಕಾಣೆ ನಾ ನಿನ್ನ ನೆಂದು ಸಾರುವುವೈಸೆ ಧರುಮಂಗಳೆಲ್ಲ- ಆದೊಡಾಂ ಕಾಂಬೆನೆಂತರಿವೆನೆಂತೆನ್ನ? ೪ ೨ಕಡೆಮುಗಿಲ್ವರಮೆನಿತೊ ಕಣ್ಣಾಲಿ ದೂರಂ ನೋಡಬಲ್ಲಡೆ, ನೋಡಬಲ್ಲುದೇಂ ತನ್ನ? ಸುರಿಸಬಲ್ಲಡೆ ಸರಿಗೆಯಿಂ ಸ್ವರಾಸಾರಂ, ಕೇಳಬಲ್ಲುದೆ ೩ಕುಡುಪಣಂ...

ನಿಲುವಂಗಿ

ನನ್ನ ಹಾಡಿಗದೊಂದು ನಿಲುವಂಗಿ ಹೊಲಿದೆ ಹಳೆಪುರಾಣವ ಬಳಸಿ ಬುಡದಿಂದ ತುದಿಗೆ, ಹೊಲಿದೆ ಬಣ್ಣದ ಜರಿಕಸೂತಿ ಹೆಣಿಗೆ. ಯಾರೋ ಪೆದ್ದರು ನಿಲುವಂಗಿ ಕದ್ದರು, ತಮ್ಮದೇ ಎನ್ನುವಂತೆ ಅದ ತೊಟ್ಟು ಮೆರೆದರು ಲೋಕದೆದುರು; ಚಿಂತಿಲ್ಲ ಹಾಡೇ, ತೊಡಲಿ...

ಈ ಮೋಸ ದೋಸವಲ್ಲ

ಅಗಲೆಲ್ಲ ಬೆವರ್ ಅರ್‍ಸಿ ಜೀತ ಕೆರ್‍ಕೊಂಡು ಅಟ್ಟೀಗ್ ನಾ ಬತ್ತಂದ್ರೆ ಮೈ ಕೈ ಮುರ್‍ಕೊಂಡು ಜೋಬೆಲ್ಲ ಜಡ್ತಿ ಮಾಡ್ತೌಳ್ ನನ್ ಎಡ್ತಿ! ೧ ಒಂದ್ ದಪ ತಂದ್ ಜೀತ ಪೂರ ಕೊಟ್ಬುಟ್ಟಿ ಯೆಂಡಕ್ ಒಂಬತ್...

ಗಂಧವತಿ

ಗಂಧವತಿ ಪೃಥ್ವಿಯ ಸುಗಂಧ-ಕಂದದ ಬಳ್ಳಿ ಹಬ್ಬುತಿದೆ ಬೆಟ್ಟ ಸಾಲುಗಳಲ್ಲಿ; ಗಿರಿಶಿಖರ ಮುಕುಲದೊಲು ಮೊಗವನೆತ್ತಿವೆ ನಭದಲಲ್ಲಲ್ಲಿ; ಮಲರುವದದೆಂದೋ? ಕೊನೆಯ ಪ್ರಳಯ ಪ್ರಖರ ದ್ವಾದಶಾದಿತ್ಯರದಿಸಿದ ಮೇಲೆ, ಚಳಿ ತಳ್ಳಿ ನವವಸಂತವು ಬರಲು, ಸುರ-ತಾರಕಾನಿಕರ ಭೃಂಗದಂತೆರಗಿ, ನರುಗಂಪನ್ನು ಹೊರಚೆಲ್ಲಿ,...

ಕಟ್ಟುತಾವೆ ಹಕ್ಕಿ

ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು ಎಂಥ ಸಂಭ್ರಮ ಎಂಥ ಹುಲ್ಲು ಎಂಥ ಕಡ್ಡಿ ಈ ಮಾಡಿನಲ್ಲಿ ಬಂದು ಸೇರಿ ಎಂಥ ಸಂಭ್ರಮ ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು ಎಂಥ ಸಂಭ್ರಮ ಎಂಥ ಪರಾಗ ಎಂಥ...

ಕಡವಿನಲ್ಲಿ

ಕಾಣಲಿಹುದನು ಕಂಡೆನೆಲ್ಲ, ಕೊಳ್ಳಲಿಹುದನು ಕೊಂಡೆನೆಲ್ಲ, ಹಿರಿವುದೆಂದೀ ಸಂತೆ ಬಲ್ಲ ರಾರು ನೆರಸಿದನಲ್ಲದೆ? ೪ ಬಂದು ಪೋಪರು ಮೊತ್ತಮೊತ್ತದೆ- ಯಾರಿಗೇಕೇನೆಂದು ಗೊತ್ತದೆ? ಬಾಳದೊಡವೆಗೆ ಬೆಲೆಯ ತೆತ್ತುದೆ ನನ್ನ ಪಾಲಿನ ಕೌತುಕ. ೮ ಇಲ್ಲಿ ಇನ್ನಿರಲಿಷ್ಟವಿಲ್ಲ- ಕೆಲಸವಿಲ್ಲದಲಿರಲು...

ಪತನಗೊಂಡ ಘನತೆಗೆ

ಹಿಂದೊಮ್ಮೆ ಅವಳ ಮುಖ ನೋಡಲೆಂದೇ ಜನ ನೆರೆಯುತ್ತಿದ್ದರು ಭಾರಿ ಗುಂಪಿನಲ್ಲಿ, ಮಂಜಾಗುತ್ತಿದ್ದುವು ಮುದುಕರೆಲ್ಲರ ದೃಷ್ಟಿ ಅವಳನ್ನಟ್ಟಿ; ಜಿಪ್ಸಿಗಳ ಬೀಡಿನಲ್ಲಿ ಕಟ್ಟಕಡೆ ಸಭಿಕ ಸ್ತುತಿಸುವಂತೆ ಪತನಗೊಂಡ ವೈಭವವನ್ನ ಬರೆಯುವುದಿದೊಂದೆ ಕೈ ಗತಿಸಿದ್ದನ್ನ. ಮುಖಮಾಟ, ನಗು ಮಧುರವಾಗಿಸಿದ...