ನಾಳೆ

ಯೆಡ್ತಿ ಊರಾಗ್ ಇಲ್ಲ ಮುನಿಯ
ಊರ್‍ಗ್ ಓಗೌಳೆ ಜಾಣೆ!
ಜೀತ ತುಂಬ ಜೋಬೀಲೈತೆ
ನಿಕ್ಕ ಲ್ನೋವ್ ಅತ್ತಾಣೆ! ೧

ಅತ್ತಾಣೇಗು ಯೆಂಡ ತತ್ತ
ದೋಸ್ತೀವ್ರ್ ಎಲ್ಲ ಯೀರ್‍ಲಿ!
ನೀನ್ ನಂಗೇನು ಬುದ್ಯೋಳ್ಬೇಡ
ನಾಳೆ ಗೀಳೆ ಯಿರ್‍ಲಿ! ೨

ಆಕಾಸ್ಕಿಂತ ದೂರ್ ಎಚ್ಚೈತೆ
ನಾಳೆಗೊನೆ ನಮ್ಗು!
ಬೂಮಿ ಅನಕ ಮಡಿಕ್ಕಾಳಾಲ್ಲ
ರೂಪಾಯ್ ಗಂಟ್ ಮಾಡೌನ್ಗು! ೩

ಬಿಲ್ಟೆ ವೊಂಟೋದ್ ಪೀಪಾಯಿಂದ
ಯೆಂಡ ಬಸಿಯೋ ಮಾದ್ರಿ –
ಸುರದೋಗ್ತೈತೆ ಮನ್ಸನ್ ಬದಕು!
ನಾನ್ ಯೋಳಾದು ಕಾತ್ರಿ! ೪

ಕುಡಕನ್ ಕೈಲಿ ಕಾಸ್ ಗೀಸ್ ಏನ್ರ
ನಿಂತ್ರು ನಿಲ್ಬೌದಣ್ಣ;
ಮನ್ಸನ್ ಜೀವ ಮಾತ್ರ ಮುಳಗೋ
ಸಂಜೆ ಮೋಡದ್ ಬಣ್ಣ! ೫

ನಾಳೇನ್ಕೊಂಡಿ ನರಳೋದೆಲ್ಲ
ಬೆಪ್ಗೋಳ್ ಮನಸಿನ್ ಕನಸು!
ನಾಳೆ ಪಾಡು! ನಾಳೆ ಬಾರ!
ಈವತ್ಗ್ ಇಲ್ಲಿ ಮನಸು! ೬

ಮನ್ಸನ್ ಜೀವ ಮೂರೇ ನಿಮ್ಸ
ಕುಸಿ ಪಟ್ಟೌನ್ ಗೆದ್ದ!
ತಾಪತ್ರೇನ ತಬ್ಬಿಡುಕೊಂಡಿ
ಗೋಳಾಡೋವನ್ ಬಿದ್ದ! ೭

ತಕ್ಕೊ ಮುನ್ಯ ನನ್ ಅತ್ತಾಣೆ
ಯೆಂಡದ್ ಬುಂಡೆ ಬರ್‍ಲಿ-
ನಾಳೆ ಯೋಚ್ನೆ ನಂಗೆ ಬೇಡ
ಈವತ್ ಒಂದೇ ಇರ್‍ಲಿ! ೮
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಭಿರುಚಿ
Next post ಅಪರಾಧದ ಒಂದು ಮುಖವಾಗಬಲ್ಲ – ವೈವಾಹಿಕ ಅತ್ಯಾಚಾರ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…