ಆನಂದದಿಂದ ಬಂದೀ ಜಗದ ರುಚಿಯೆ ಕಹಿ
ಯೆಂದು ಕಾತರಗೊಳ್ಳಬೇಡ, ನಾಲಿಗೆಯೆ! ಇದು
ಎಲ್ಲವೂ ಅನ್ನ; ಅದರದರ ರುಚಿಯದಕೆ; ಬಿಡು,
ನಿನ್ನ ಬಯಕೆಯ ಬಣ್ಣವೆರಚದಿರು, ರಸವೆ ಸಿಹಿ.
ಒಗರು, ಸಿಹಿ, ಕಹಿ, ಕಾರ, ಉಪ್ಪು, ಹುಳಿ, ಒಡವೆಯದು;
ರಸವು ರಸಬಲ್ಲ ರಸಿಕನದು? ಸರಸಿಗೆ ತೆರಹಿ
ತೋರುವದು ಜಗವು ಹೃದಯವ? ಅರಸಿಕಗೆ ಅರುಹಿ
ಇಮ್ಮೆ ಸಾವುದೆ ಮಾಯೆ? ಚೆಲುವನರಿಯದು ಕುರುಡು
ಭಾರತಕು ಭಾರತರವಾದ ಜಗದ ರಹಸ್ಯ
ಉಸಿರಲೆಣಸಿದ ವೇದ ವಾದವಾಯಿತು; ಬೆಳೆವ
ಬೆಳಕಿನ ಮಹಾಪಥವನಳೆವ ಸಾಹಸ ಹಾಸ್ಯ;
ಕಡಲು ಕರೆವುದು; ಕಾಲುವೆಯಲಿ ತಿಳಿಯದೆ ಕೊಳೆವೆ,
ಎಲೆ ಜೀವ! ನಿನ್ನೊಳಗೆ ಜಿಹ್ವೆ ಚಿಗುರಲಿ; ಹಿಂದೆ
ಕಣ್ಣು ಅರಳಲಿ ಹಿಗ್ಗ ಹಣ್ಣ ಪಡೆಯುವೆ ಮಂದೆ.
*****