
ಮುಂದೆ ಬಂದರೆ ಹಾಯಬೇಡ ಹಿಂದೆ ಬಂದರೆ ಒದೆಯಬೇಡ ಎಂದು ಕಂಡ ಕಂಡವರಿಗೆಲ್ಲ ಕೈ ಮುಗಿದು ಕಂಬನಿಯ ಕೆಚ್ಚಲು ಕರೆಯಬೇಡ ಹುಟ್ಟಿಸಿದ ದೇವರು ಹುಲ್ಲನ್ನ ಮೇಯಿಸುವ ನನ್ನ ಭವಿಷ್ಯವ ನೀನೇ ಬರೆಯಬೇಡ ಹೋಗು ನಿನಗಾಗಿ ಹಾತೊರೆದ ಹುಲಿಯ ಎದುರೇ ನಿಲ್ಲು ಒಡ್ಡು ಗು...
ಪಂಜದಮ್ಯಾಲ ನಿನ್ನ ಮನಸು ಕಾಲ- ಕಂಜದೆ ಅದರೊಳು ಕಂಡಂಥ ಕನಸು || ಪ || ಅಂಜದಿರು ಅಲಾವಿ ಹಬ್ಬದಿ ರಂಜಿಸುವ ರಾಜಿಸುವ ಮೋರುಮ ಪಂಜದೊಳು ಪರಿತೆದ್ದು ಆಡುವ ಭಜನವು ಬಹುತೆರದಿ ಪೂಜಿಸು || ಆ. ಪ. || ಜಲದೊಳು ಉರಿಯ ಬಿಸಿಲಣ್ಣ ಮಹಾ- ಕಲಹ ಕರ್ಬಲದೊಳು ಕಲ...
ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ ಅನ್ನಲಿ...
ಬಿಳಿ ತಲೆಯಾದರೇನು? ಕರಿ ತಲೆಯಾದರೇನು? ಸಾಲ ತೀರಿಸೆ, ತಪ್ಪಸಿಕೊಳ್ಳುವುದಕ್ಕೆ `ಮರೆವು’ ಒಂದೇ ಕಲೆ. ****...
ಇದ್ದಕ್ಕಿದ್ದ್ಹಂಗ ಮಾಡೋ ಮೋರುಮದೀ ಐಸುರ || ಪ || ಅಲೇದೇವರ ಸತ್ತಿತ್ತು ಭರಮದೇವರು ಹೊತ್ತಿತ್ತು ಕತ್ತಿ ಫಕ್ಕೀರನಾಗಿ ಯಾಯ್ಮೋಮ್ಮಧೀನ್ ಆಂತಿತ್ತು || ಅ. ಪ. || ಮಂಡಿಗನಾಳಗ್ರಾಮದಿ ನೋಡಿ ಮೊರುಮ ಹೋದೀತು ಓಡಿ ಲಾಡಿಗೆ ದುಡ್ಡಿಲ್ಲ ಬೆಲ್ಲಕ್ಕ ಓದಿ...
ಬಗ್ಗಿ ನಡೆಯುತ್ತಾಳೆ ಬೀಳಿಸಿಕೊಂಡು ವ್ಯಸನಗಳನ್ನು, ಗೂನು ಬೆನ್ನಿನ ತರುಣಿ ಖಾಲಿ ರಸ್ತೆಯಲ್ಲಿ ಭಂಗಿ ಸೇದಿಕೊಂಡು. ಮೋಟು ಕೈ ಕಾಲುಗಳನ್ನು ಬಂಧಿಸುತ್ತಾಳೆ, ತಿವಿಯುತ್ತಾಳೆ ಕಾದ ಕಬ್ಬಿಣದ ಸಲಾಖೆಯಿಂದ ಮುಗ್ಧ ರಕ್ತವನ್ನು, ಸುಡುತ್ತಾಳೆ ಬಂದ...
ಕರುಳಲ್ಲಿ ಬಿಗಿದರೆ ಗಂಟು ಕಗ್ಗಂಟು ಇನ್ನೆಲ್ಲಿದೆ ಮಾನವತೆಗೆ ನೇಹ ನಂಟು ****...
ಖೇಲ್ ಐಸುರ ಮೊಹರಮ್ ತೀರಿತು || ಪ || ಐಸುರ ತೀರಿತು ಮೊಹರಮ್ ಸಾಗಿತು ಮೀರಿದ ಕರ್ಬಲ ದಾರಿಯೊಳಗ ಖೇಲ್ || ೧ || ಬಣ್ಣದ ಲಾಡಿ ಕಣ್ಣಿಲೆ ನೋಡಿ ಪುಣ್ಯಪಾಪಗಳೆರಡಿಲ್ಲದಲಾವಿ ಖೇಲ್ || ೨ || ಸತ್ಯಕ್ಕೆ ಶರಣರು ಮರ್ತ್ಯಕ್ಕೆ ಮಹಿಮರು ಗುರ್ತತೋರಿಸಿ ಹತ್...
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಳಿಯನಿಗೆ ಅನುಗಾಲ, ಮಾವನಿಗೆ ಸಾಯೋ ಕಾಲ *****...
ನಿನ್ನ ಕಣ್ಣ ಹೂದೋಟದಲ್ಲಿ ನಾ ದುಂಬಿಯಾಗಿ ಬರುವೆ ನಿನ್ನ ಹಗಲ ಹಾಡುಗಳ ಹೂವುಗಳ ನಗುವ ನೋಡಲಿರುವೆ ನಿನ್ನ ತೋಟದಾಚೆ ನನಗು ತೋರದಾಚೆ ಸುಗ್ಗಿಯಾಟದಲಿ ಹಿಗ್ಗಿ ನಲಿವ ಕಿನ್ನರರ ಕೂಡಲೆಂದು ಒಲವಿನಾಟದಲಿ ನಲಿವಿನಾಟದಲಿ ನೋವು ತೀರಲೆಂದು ನಿನ್ನ ಬೇಡಿಕೆದಾ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....













