ಬೇಟಕಾರ ಬಂದ ಮಾದ, ಹಹ್ಹ! ಏನು ಬೇಟವೋ! ಬೇಡಿ ಸತ್ತು ಸುಣ್ಣವಾದ, ಹಹ್ಹ! ಏನು ಬೇಟವೊ! ಮಾದಿ ಕತ್ತನೊಲೆದುದೇನು! ಅತ್ತ, ಇತ್ತ, ಸಿಡಿದುದೇನು! ಮಾದ, ಪಾಪ, ಮಿಡಿದುದೇನು! ಹಹ್ಹ! ಏನು ಬೇಟವೊ! ಕಯ್ಯ ಮುಗಿದ, ಕಾಲ ಹಿಡಿದ, ಹಹ್ಹ! ಏನು ಬೇಟವೋ! ರೊಯ್ಯನೆದೆಯೆ, ಹಲ್ಲ ಕಡಿದ, ಹಹ್ಹ! ಏನು ಬೇಟವೋ! ಬೆಚ್ಚಗುಸಿರ ಬಿಟ...

ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ ಯಶೋದೆಯ ಜೋಗುಳದ ಹಾಡು ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ ಬದಲು ತಣ್ಣನೆಯ ಗಾಳಿ ಕಚಗುಳಿ ಇಟ್ಟು ಜೀವ ನಲಿ...

ಐಸುರ ಛೇ ಇದು ಏನು ಮೊಹರಮದ್ಹಬ್ಬ ಮಾಡಿ ಧೀನ್ ಧೀನ್ ಅಂಬರು || ಪ || ಕೈಲೆ ಕೈವಾಲಿ ಕಟ್ಟಿ ತಗಡಿನಸ್ತವನಿಟ್ಟಿ ಶಾಸ್ರ ಧರ್ಮವ ಬಿಟ್ಟಿ || ೧ || ಕುದುರಿ ಕಂದೂರಿ ಮಾಡಿ ಮಸೂದಿಗೆ ಓದೆಲ್ಲೊ ಎಡಿ ಮುಲ್ಲಾ ಓದಕಿ ಮಾಡಿ || ೨ || ಅಲ್ಬೀದಾ ಅಳತಿತ್ತು ಸ...

ಅಭಿ, ನಾನು ಮಾತಾಡ್ತನೇ ಇದ್ದೀನಿ. ನೀನು ಮಾತ್ರ ಮೌನವಾಗಿದ್ದಿಯಲ್ಲ? ಏನಾದ್ರು ಮಾತಾಡೋ. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ. ನನ್ಗಂತೂ ಜೀವನವನ್ನ ಇಲ್ಲಿಗೇ ಕೊನೆಗಾಣಿಸಿಬಿಡುವ ಅನ್ನಿಸ್ತಾ ಇದೆ. ಒಂದ್ವೇಳೆ ನಾವಿಬ್ರು ಒಂದಾಗುವುದಕ್ಕೆ ಸಾಧ್ಯ...

ಆಕಾಶ ಭೂಮಿ ಸಾಗರ, ಬೆಟ್ಟ ಇದು ದೇವರ ಆಸ್ತಿ ಬೇಲಿ ಹಾಕಿ ಆಡಲೇಕೆ ಕುಸ್ತಿ? ಗಾಳಿ, ನೀರ ಹರಿದಾಡಿ, ಹಂಚಿ ಬುಡ ಬೇರ ಅಲುಗಾಡಿಸಿದಂಚಿ ನಿನ್ನಕೈಗೆ ಸಿಕ್ಕೀತು ನಿನ್ನ ಆಸ್ಥಿ ನಿಸರ್ಗ ಕಾಪಾಡು ಮಾಡಿ ದೋಸ್ತಿ ****...

ಮಾಡಬಾರ್ದೋ ಈ ಮೊಹರಮದ್ಹಬ್ಬ || ಪ || ಮಾಡಲಿದು ಕೇಡಲಿದು ಕಾಡ ಕರ್ಬಲ ಕಡಿದಾಡುವ ಹಬ್ಬ ಮಾಡಬಾರ್ದೋ || ೧ || ಕತ್ತಲ ಶಹಾದತ್ತು ಮತನದೋನ್ಮತಗತಿ ಶರಣರ ಸಮ್ಮತವಾಗದ ಹಬ್ಬ ಮಾಡಬಾರ್ದೋ ||೨ || ತಾನೇ ಶಿಶುವಿನಾಳ ಜ್ಞಾನದಲಾವಿಯ ಮೌನ ರಿವಾಯತ ಮಂತ್ರ ಓ...

  ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, ‘ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; ‘ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮ...

ಕಂಬನಿಯ ಕಪ್ಪು ಸಮುದ್ರದ ಆಚೆ ಅಗೋ ಉಪ್ಪು ಹರಳುಗಟ್ಟಲಾರಂಭಿಸಿದೆ ಪ್ರಾಣಾಯಾಮಕ್ಕೆ ಬಿಗಿ ಹಿಡಿದ ಉಸಿರು ಈಚೆ ಕಡೆಯಿಂದ ಹೊರ ಜಿಗಿದಿದೆ ಸ್ಥಿತಪ್ರಜ್ಞೆ ಕಲ್ಲುಬಂಡೆಯ ಕೊರಕು ಹೂ ಬಿಡಲು ಎದ್ದಿರುವ ಜೀವಕ್ಕೆ ತಾಯಾಗಿದೆ ಅವಕಾಶದ ಅವಗೃಹೀತ ಖಾಲಿ ಜಾಗಕ್...

ಕಾಳಗ ಖೇಲ ಬಲ ಮುರಿದೆದ್ದಿತು || ಪ || ನೆಲದೊಳಗಿದು ಬಲು ವಿಪರೀತವಾಯಿತು ವರ ಸಮರದಿ ಸಾರದಿ ಖೇಲ || ೧ || ಆಗಣಿತ ಗಣಿಗಳು ತೆಗದೆಸೆಯಲಾಗ ರಗಳಿಗಾ ಜಿತಮಯದೋರಿತು ಖೇಲ || ೨ || ಪೊಡವಿಯೊಳು ಶಿಶುನಾಳ ಒಡೆಯರಲಾವಿದು ಬಿಡದೆ ಕತ್ತಲದಿನ ಕಾಳಗ ಖೇಲ ||...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....