Home / Kavana

Browsing Tag: Kavana

ಹೊಸವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು? ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂದಿಗಳೆ ಎಲ್ಲ! ...

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ ಉಬ್ಬರಿಳಿತ ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು ಎಂಥೆಂಥಾ ಚಿತ್ರಗಳಿವು&...

ಚಂದದಾದ ಗಾಳಿಯೊಂದು ಬೀಸುತ್ತಿದೆ ಕುಳಿತು ಬಸ್ಸಿನಲ್ಲಿ ಪಯಣ ಆರಂಭಿಸಿದೆ ಜೀವನವೇ ಸಾಗರದೊಂದು ಅಲೆ ಆ ಅಲೆಗಳಲ್ಲಿಯೇ ಈ ಪಯಣ ಅಲೆ ಗಾಳಿಯು ಬೀಸಿದಾಗ ಅಲೆಗಳ ಕಾಣುವೆ ಜೀವನವು ಸಹ ಅಲೆಯದೊಂದು ತುಣುಕು ಜೀವನ ಯಾವ ಸಂದರ್ಭದಲ್ಲಿಯು ಶಾಶ್ವತವಲ್ಲ ಓ ಮನುವ...

ಕುದುರೆ ಏರಿಬರುವ ಶೂರಧೀರ ನನ್ನವ ಲೋಕಸುಂದರ ಚೆನ್ನ ಚೆನ್ನಿಗ ತನ್ನ ತುಂಬಿಕೊಂಡ ಕಣ್ಣ ಒಳಗೆ ಮತ್ಯಾರನೂ ನೋಡ ಬಯಸದವನ ಕೊರಳಿಗೆ ತನ್ನ ಮಾಲೆ ಕನಸು ಕಂಡ ಮಾಧವಿ ಏನಾಯ್ತೆ ಸಖಿ ನಿನ್ನ ವಿಧಿ ಮಾರಾಟವಾಯ್ತೆ ಒಡಲು ಅಷ್ಟಶತ ಶ್ವೇತ ಅಶ್ವಕೆ ಹುಂಬ ಶಿಷ್ಯನ...

ಹೊತ್ತು ಮೀರುತ್ತಿದೆ ಇನ್ನೇನು ಈಗಲೋ ಆಗಲೋ ತೆರೆ ಮೇಲೇಳುವ ಸಮಯ! ಗಿಜಿಗುಡುತಿದೆ ಸಭಾಂಗಣ ಸುತ್ತ ಹಬ್ಬಿದೆ ಮಬ್ಬು! ಸಾಕಿನ್ನು ಮೇಲೇಳು ಮುಗಿದಿಲ್ಲವೇ ಇನ್ನೂ ಪ್ರಸಾಧನ? ತುಟಿಬಣ್ಣ ಒಂದಿನಿತು ಢಾಳಾಯ್ತು ಕೆನ್ನೆಗಿನ್ನೊಂದಿಷ್ಟು ಕೆಂಪಿದ್ದರಾಗಿತ್ತ...

ಮೂಡಿಬರಲಿ ಹೊಸ ವರುಷದ ಹೊಸ ಕಾಂತಿಯ ತಾರೆ ಸಾಗಿ ಬರಲಿ ಮೇಲಿನಿಂದ ಹೊಸ ಬೆಳಕಿನ ಧಾರೆ ಹಸಿದ ಪುಟ್ಟ ಕಂದಮ್ಮಗೆ ಹೊಟ್ಟೆ ತುಂಬ ಹಾಲು, ದುಡಿವೆ ಎನುವ ಕೈ ಕಾಲಿಗೆ ಕೆಲಸವಿರುವ ಬಾಳು, ಹಬ್ಬುತಿರುವ ಬಳ್ಳಿಗಳಿಗೆ ಹಂಬಿನ ಆಧಾರ, ಆಗಲಿ ಈ ಹೊಸವರುಷ ಸಮೃದ್...

ಬ್ರಿಟೀಷ್ ಏರ್‌ವೇಸ್ ಪಯಣ ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ; ಇವರು ಪಂಚಕನ್ಯೆಯರೆ….. ಹಾಗೆಂದೇ ಕರೆಯುತ್ತಿದ್ದಾರೆ ಸಹ ಭಾರತೀಯ ಪಯಣಿಗರು. ಜೊತೆಗೆ ಹಸಿರು ಕಣ್ಣಿನ ಕೆಂಪು ತುಟಿಯ ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು. ತೂಗುಬಿಟ್ಟ ಗೊ...

ಪ್ರೀತಿ ಇಲ್ಲದ ಮೇಲೆ ಇಬ್ಬರ ಸಂಗಮವಾದೀತು ಹೇಗೆ? ತಮ್ಮ ಸಂಸಾರದ ರಥ ಸಾಗೀತು ಹೇಗೆ? ದಿನಂಪ್ರತಿ ಕಾಲ ಕಳೆಯುತ್ತ ವಂಶದ ಕುಡಿ ಹೆಚ್ಚೀತು ಹೇಗೆ? ಪ್ರೀತಿ ಇಲ್ಲದ ಮೇಲೆ ಭೂಮಿ ಮೇಲೆ ಆಹಾರ ಧಾನ್ಯ ಬೆಳೆದೀತು ಹೇಗೆ? ಆಕಾಶದಿ ಮೋಡ ಕಟ್ಟಿತು ಹೇಗೆ? ನೆಲದ...

ಇವಳು ನನ್ನವ್ವ ತಂಪಿಗಾಗಿ ಕಾದವಳು ಹನಿ ಬೀಳದೆ ಒಡಲೆಲ್ಲ ಬಿರುಕು ಬಿರುಕು ಬರಗಾಲ ಒಳಗೂ ಹೊರಗು ಒಲೆಯ ಒಳಗಿನ ಬಿಸಿ ಕಾವು, ಕಾವಿನಲಿ ಬೆಂದ ಅವ್ವ ಹನಿಗಾಗಿ ಮೊಗವೆತ್ತಿ ನಡುನೆತ್ತಿಯ ಮೇಲಿನ ಕಪ್ಪು ಮೋಡಕ್ಕಾಗಿ ಕಾಯುತ್ತಲೇ ಇರುವಳು ಬೆಳ್ಳ ಬೆಳ್ಳನೆ ...

ಕನ್ನಡಿಯೊಳಗೇ ಅವಿತು ಕುಳಿತು ಬಿಂಬಕ್ಕೆ ಪಾದರಸದ ಪರದೆಯೆಳೆದು ಪಾರದರ್ಶಕದ ಪ್ರತಿಬಿಂಬವಾಗಿ ಕನ್ನಡಿಯಾಚೆಯ ಮೂರ್ತಬಿಂಬದ ಅಮೂರ್ತ ಪಡಿಯಚ್ಚು ಭೂಮಿ ಮೇಲೆಷ್ಟೋ ಒಳಗೂ ಅಷ್ಟೇ! ಕನ್ನಡಿಗೆ ಮುಖಾಮುಖಿಯಾದ ಪ್ರತಿಯೊಂದು ಬಿಂಬಕ್ಕೆ ತಕ್ಕ ಪ್ರತಿರೂಪ ಪಾತ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....