ಚಂದದಾದ ಗಾಳಿಯೊಂದು ಬೀಸುತ್ತಿದೆ
ಕುಳಿತು ಬಸ್ಸಿನಲ್ಲಿ ಪಯಣ ಆರಂಭಿಸಿದೆ
ಜೀವನವೇ ಸಾಗರದೊಂದು ಅಲೆ
ಆ ಅಲೆಗಳಲ್ಲಿಯೇ ಈ ಪಯಣ ಅಲೆ
ಗಾಳಿಯು ಬೀಸಿದಾಗ ಅಲೆಗಳ ಕಾಣುವೆ
ಜೀವನವು ಸಹ ಅಲೆಯದೊಂದು ತುಣುಕು
ಜೀವನ ಯಾವ ಸಂದರ್ಭದಲ್ಲಿಯು
ಶಾಶ್ವತವಲ್ಲ ಓ ಮನುವೇ
ಗಾಳಿಯು ನಿಂತಾಗ ಅಲೆಗಳ ನಿಲ್ಲುವು
ಜೀವನ ನಿಂತಾಗ ಪಯಣದ ನಿಲ್ಲುವು
ಪಯಣ ನಿಂತಾಗ ಎಲ್ಲವು ನಿಲ್ಲುವು
ಜೀವನ ಯಾವಾಗಲೂ ಶಾಶ್ವತವಲ್ಲ
ಅರಿವಿನ ಜ್ಯೋತಿ ಬೆಳಗಬೇಕಾದರೆ
ಜೀವನದ ಜ್ಯೋತಿ ಬೆಳಕು ಅವಶ್ಯ
ಜೀವನದ ಬೆಳಕು ಯಾರಿಂದಲು ಅಸಾಧ್ಯ
ಇದು ಎಂದೆಂದಿಗೂ ಶಾಶ್ವತವಲ್ಲ ಓ ಗೆಳೆಯ
ನಾನಾಡುವ ಮಾತೆಲ್ಲಾ ಸವಿಯಾಗಿವೆ
ನಾ ಬರೆಯುವ ಕವಿತೆಯು ಶಾಶ್ವತ
ನನ್ನ ಕನ್ನಡ ನಾಡೆಲ್ಲವು ಶಾಶ್ವತ
ನನ್ನ ಕನ್ನಡ ಭಾಷೆಯು ಶಾಶ್ವತವಾದದ್ದು
ಓ ಮನುವೇ ಓ ಗೆಳೆಯ ಓ ಭಾರತಾಂಬೆ.
*****