(ಷಟ್ಪದಿ ಪದ್ಯ)
ಜನ್ಮ ಪಡೆಕೊಂಡು ಬೀದಿ ಬದಿಯ
ಚರಂಡಿಯಲ್ಲಿ ಹರ್ಷದಿಂದ ಆ
ನಾಥ ಮಗುವು ಜಯಜಯಕಾರವ ಘೋಷಿಸುತ್ತಿತ್ತು.
ಅದರ ಶರೀರ ಮೇಲಿನ ಬಟ್ಟೆ
ಯೇ ಇ ಆಕಾಶವೆಂದು ನಾಯಿ
ಯು ಬೋಗಳುವುದೇ ತಾಯಿಯ ಜೋಗುಳೆಂದು ಭಾವಿಸಿ ||
ತಾನು ಅನಾಥನೆಂದು ಅನ್ಯಥ
ಭಾವಿಸಲಾರದೆ ತನ್ನ ಜನ್ಮ
ನೀಡಿರುವ ತಂದೆ ತಾಯಿಗೆ ಮನದಲ್ಲಿಯೇ ನೆನೆದ
ಮಗುವಿದ ಸ್ಥಳಕ್ಕೆ ಮಗುವಿಲ್ಲದ
ಬಂಜೆಯ ಪ್ರಾಣಿಯಾ ಬಂದು ಮ
ಗುವಿನ ಜಯಕಾರದಲ್ಲಿ ಸ್ವರ್ಗಲೋಕವು ಕಂಡಿತು.
ಉದಯಿಸುವ ಸೂರ್ಯನು ಸುಮಂಗಲಿ
ಯ ಹಣೆಯ ಬೊಟ್ಟಿನಂತೆ ಮಗು ಅ
ಪ್ಸರೆಯರ ಕಣ್ಣಿಗೆ ಸೂರ್ಯನಂತೆ ಕಂಗೊಳಿಸಿದನು ತಾ
ಸ್ವರ್ಗಲೋಕದ ನಂದನ ವನದ
ನರ್ತಕಿ ವರ್ಗದ ದೇವತೆಯರು
ಅನಾಥ ಶಿಶುವಿನ ರೂಪಕ್ಕೆ ಬೆರಗಾಗಿ ನಿಂತರು.
*****