ಹಾರಿಬಂದ ದುಂಬಿಗೆ
ಸುಮವು ಸೂಸಿ ನಸುನಗೆ, ಬಾಚಿಕೊಂಡಿತೆನ್ನ ಎದೆಗೆ
ಮೆತ್ತೆಯೊಳಗೆ ಮುದುಡಿತವಗೆ |
ಇಬ್ಬನಿಯ ತಂಪಕಂಪ ಮೋದ
ಪನ್ನೀರ ಸಿಂಚನ,
ಚಂದಾನಿಲದಲೆಯಲೆಯಲಿ
ಮಧುರ ಗಾಯನ |
ಹೊನ್ನ ಮಾಲೆ ಸೌಧ ಸೌಧ
ದುಂಬಿದುಟಿಯಲಿ
ರನ್ನಮಾಲೆ ತೊಟ್ಟ ಅಮಲು
ಸುಮದ ಮೊಗದಲಿ |
ಅಧರಧರದ ಕೇಸರಕೆ
ಮೇಘ ಚುಂಬನ,
ಕೇಳಿ ಕೇಳೋ ಸುರತಿ ಕೇಳಿಕೆ
ತರುಲತೆಯಾಲಿಂಗನ |
ತಪ್ತಳಾಗಿ ತಣಿದ ಭಾಮೆ
ಮುಗುಳ್ನಗೆಯ ಚಿಮ್ಮಿತು,
ಸಮವನರಸಿ ಹಾರೋ ದುಂಬಿ
ಕಂಡು ಕನಲಿ ನಲುಗಿತು |
*****