ಮುತ್ತು ರನ್ನದ ಕಿಡಿ ಉದುರೀತು

ಮುತ್ತು ರನ್ನದ ಕಿಡಿ ಉದುರೀತು
ಕಡು ವಿಷಯ ಹಿಂದಿನ ಪಾಪ ಬಂದು ಮಂದೆ ನಿಂತೀತು || ಪ ||

ಅಪ್ಪ ಅಣ್ಣಗಳೆಲ್ಲ ಕೇಳಿರಿ ತಪ್ಪಲಾರದು ಕರ್ಮದೋಷವು
ಒಪ್ಪುವಂಥಾ ಘಟವು ಬಿಟ್ಟು ಕ್ಷಣದಲಿ ಅಸು ಹಾರಿಹೋಯಿತು ||ಆ.ಪ.||

ದೇಶಕಧಿಕವಾದ ಹುಬ್ಬಳ್ಳಿ ಹುಚ್ಚಯ್ಯಸ್ವಾಮಿ
ಮಠದ ಪಟ್ಟದ ಚರಮೂರ್ತಿ ಅವರ ಕೀರ್ತಿ ಸಾರಿ ಸದ್ಭಕ್ತರಿಗೆ
ದುಃಖವು ಗಾರಗೊಂಡಿತು ಮನದ ಕೊನೆಯೊಳು
ಆರು ಮಾಡುವರೇನು ಇದಕೆ ಹುಟ್ಟಸಿದ ಶಿವ ತಾನೇ ಬಲ್ಲಾ || ೧ ||

ಏನು ಎಷ್ಟಿದರೊಳು ಎಷ್ಟು ದಿವಸ ಇದ್ದರೆ ಸಾವು ತಪ್ಪದು
ಮೃತ್ಯುಬುದ್ಧಿಯನ್ನು ಬಲ್ಲವರೊಳು ಕೇಳು
ಅಲ್ಲಮ ಮಹಾಪ್ರಭುವಿನ ಸಿರಿಯು ತುಂಬಿ
ಯೋಗಮಂದಿರದೊಳು ಬೆಳಗುವ ಕಳಿವುಳ್ಳ ಬಸವಾದಿ ಪ್ರಮಥರು || ೨ ||

ಕಾಶೀ ಗ್ರಾಮದ ಪುಣ್ಯ ತೀರಿತು ಬೈಲಾಯಿತು
ಬೈಲಿನೊಳಗೆ ಬೈಲು ಆಯಿತು ಕಡಿಗೆ ಆಯಿತು
ಒಡಿಯ ಶಿಶುನಾಳ ಈಶನಡಿಗೆ ಬಿಡದೆ ಭಜಿಸುವ ನಿಮ್ಮ ಧ್ಯಾನದಿ
ನುಡಿದ ಮಾತಿಗೆ ಕಸರು ಇದ್ದರೆ ತಿದ್ದಿ ಹೇಳಿರಿ ರಸಿಕರೆಲ್ಲಾ || ೩ ||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ
Next post ಗುಗ್ಗುಳ ಹೊರಟಿತಮ್ಮಾ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…