ಗುಗ್ಗುಳ ಹೊರಟಿತಮ್ಮಾ ಈ ಊರೊಳು
ಗುಗ್ಗುಳ ಹೊರಟಿತಮ್ಮಾ || ಪ||
ಗುಗ್ಗುಳ ಹೊರಟಿತು
ವೆಗ್ಗಳಾಯಿತು ಮ್ಯಾಳಾ
ಸ್ವರ್ಗದೊಳಿರುವ ಶ್ರೀ ರುದ್ರನರಿಯದಾಗಿ ||ಅ.ಪ.||
ಭೂತ ಪಂಚಕ ರೂಪದಾ ಪುರಂತರು
ಆತುಕೊಂಡಿರುತಿಹರು
ನೂತನವಾಯಿತು ಏ ತರುಣಿ ಕೇಳೆ
ಧಾತ ಶಿವನ ತನುಜಾತನರಿಯದಾಗಿ ||೧||
ದಕ್ಷನ ವಧಮಾಡಿದೆ ಷಣ್ಮುಖದೇವಾ
ಸಾಕ್ಷಾತನನು ಕೂಡಿದೆ
ಈ ಕ್ಷಿತಿಯೊಳು ಬೂದ್ಯಾಳ ಗ್ರಾಮದೊಳು ತಾ
ಸಾಕ್ಷತ ಬಸವನಾಲಯದಂಗಳದೊಳು ||೨||
ಇಳೆಯೋಳ್ ಅಧಿಕವಾಯಿತು ಶಿಶು-
ನಾಳಧೀಶನ ಮನವೆನಿತು
ತಿಳಿದು ನೋಡೆ ಇಂದು ಲಲನಾಮಣಿಯೆ ಕೇಳೆ
ಹೊಳಿವ ಕುಂಭದ ರೂಪಾ ಬೆಳಕಿನ ಉರಿಯಂತೆ ||೩||
****