ಸಾಮಾನ್ಯವಾಗಿ ಜಲವಿದ್ಯುತ್ ಶಕ್ತಿಯನ್ನು ಕಂಡಿದ್ದೇವೆ. ಗೋಬರ್ ಗ್ಯಾಸ್ ಉತ್ಪಾದನೆಯನ್ನು ಅರಿತಿದ್ದೇವೆ. ಆದರೆ ಜೀವಾಣುಗಳಾದ ಬ್ಯಾಕ್ಟೀರಿಯಾಗಳಿಂದ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ ಎಂಬ ಅಂಶ ಹೊಸದು. ಬ್ಯಾಕ್ಟೀರಿಯಾಗಳನ್ನು ಬಳಸಿ ವೇಗವರ್ಧನೆ ಯನ್ನು ಹೆಚ್ಚಿಸಲು ಸಾಧ್ಯವೆಂದು ಡಾ|| ಸಿಸ್ಲರ್ ಎಂಬ ವಿಜ್ಞಾನಿಯು ಪತ್ತೆಹಚ್ಚಿದ್ದಾರೆ.
ಸಮುದ್ರದ ಹಸಿರು ಪಾಚಿಯಲ್ಲಿರುವ “ಅಲ್ಗೆ” ಎಂಬ ಜೀವಾಣುಗಳನ್ನು ಕಂಡು ಹಿಡಿದರು. ಸೂರ್ಯನ ಬಿಸಿಲನ್ನೇ ಇಂಧನವನ್ನಾಗಿ ಪಡೆದು ವಿದ್ಯುತ್‌ನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯಲಾಗಿದೆ. ಬ್ಯಾಕ್ಟೀರಿಯಾದ ಮೂಲಕ ವಿದ್ಯುತ್ತನ್ನು ಪಡೆಯುವುದಾದಲ್ಲಿ ಅದು ಬಳಸುವ ಇಂಧನದಲ್ಲಿ ಶೇ. 50ರಷ್ಟು ಮಾತ್ರ ವಿದ್ಯುತ್ ಆಗಿರುತ್ತದೆ. ಆಗ ಅದಕ್ಕೆ ಇಂಧನವಾಗಿ ಸತು ಇಂಗಾಲ ಬೇಕಿಲ್ಲ. ಸೂರ್ಯನ ಬೆಳಕು, ಗಾಳಿ, ಕಡಲಿನ ನೀರು ಮುಂತಾದ ಬಂಡವಾಳ- ವಿಲ್ಲದೇ ಸಿಗುವ ವಸ್ತುಗಳೇ ಇಂಧನವಾಗಿರುವುದೊಂದು ವಿಶೇಷ. ಇದರಿಂದ ಸುಲಭವಾಗಿ ವಿದ್ಯುತ್‌ಶಕ್ತಿ ಕೈಸೇರುತ್ತ ದೆಂದು ವಿಜ್ಞಾನಿಗಳು ಹೇಳುತ್ತಾರೆ. ಅಮೇರಿಕಾದ ‘ನಾಸಾ’ ಸಂಸ್ಥೆಯು ಅಕಾಶಯಾನಕ್ಕೆ ಸಜೀವಕೋಶ- ಗಳು ಉತ್ಪಾದಿಸುವ ವಿದ್ಯುತ್‌ನ್ನು ಬಳೆಸಿಕೊಳ್ಳಬಹುದೇ ಎಂಬುದನ್ನು ಯೋಚಿಸುತ್ತದೆ. ಮುಂದಿನ ದಿನಗಳಲ್ಲಿ ನಿರುಪಯುಕ್ತವಾಗಿ, ಕಶ್ಮಲವಾಗಿ, ಅಸಹ್ಯವಾಗಿ ಹರಿದು ಹೋಗುವ ಚರಂಡಿ ನೀರು, ಕೊಳಚೆ ನೀರಿನಲ್ಲಿರುವ ಜೀವಾಣುಗಳಿಂದ (ಬ್ಯಾಕ್ಟೀರಿಯಾಗಳಿಂದ) ವಿದ್ಯುತ್ತನ್ನು ಉತ್ಪಾದಿಸಿ ಕತ್ತಲೆಯ ಸಮಸ್ಯೆಗ ಪರಿಹಾರ
ಕಂಡುಹಿಡಿಯಬಹುದು.
*****