ಇದೊಂದು ಹೊಸ ಬಗೆಯ ಪಾರದರ್ಶಕ ಗ್ಲಾಸ್. ಸಾಮಾನ್ಯ ಗಾಜಿಗಿಂತಲೂ ಹೆಚ್ಚು ಪಾರದರ್ಶಕವಾಗಿದ್ದು ಇದರ ಮೂಲಕ ಕ್ಷ-ಕಿರಣಗಳು ಸುಲಭವಾಗಿ ಹಾದುಹೋಗಬಲ್ಲವು. ಶಾಖಮಾತ್ರ ಇದರ ಮೂಲಕ ಹಾದುಹೋಗಲಾರದು. ಇದರಲ್ಲಿರಲ್ಲಿ ಕೊರೆಯಬಹುದು. ಹಾಳೆ ಮಾಡಬಹುದು, ಬೇಕಾದ ಕೋನಕ್ಕೆ ತಿರುಗಿಸಬಹುದು, ವೆಲ್ಡ್ ಮಾಡಬಹುದು, ಕ್ಯಾಸ್ಟ್ ಮಾಡಬಹುದು, ಗರಗಸದಿಂದ ಕತ್ತರಿಸಬಹುದು. ಪಂಚ್ ಮಾಡಬಹುದು, ಪಾಲೀಶ್ ಮಾಡಬಹುದು, ಎಲ್ಲ ಬಗೆಯ ಕ್ರಿಯೆಗೂ ಒಗ್ಗಿಕೊಳ್ಳುವ ಈ ಪೆಕ್ಸಿ ಗ್ಲಾಸನ್ನು ತಯಾರಿಸಲು ಅಸಿಟೋನ್, ‘ಹೈಡ್ರೋಸಯನಿಕ್ ಆಮ್ಲ’ ಗಂಧಕಾಮ್ಲ ಮುತ್ತು ಮಧ್ಯಸಾರ (ಅಲ್ಕೋಹಾಲ್)ಗಳನ್ನು ಬಳಸಿ ತಯಾರಿಸಲಾಗುತ್ತದೆ.
ಸಾಮಾನ್ಯ ಗಾಜು ನಿರಯವವಾಗಿದ್ದು ಇದರ ತಯಾರಿಕೆಯಲ್ಲಿ ಸಿಲಿಕಾ ಬಂದರೆ ಮರಳನ್ನು ಉಪಯೋಗಿಸುತ್ತಿದ್ದು ಇದು ಇನ್ ಆರ್ಗ್ಯಾನಿಕ್ ವಸ್ತುವಾಗಿದೆ. ಆದರೆ ಪೆಕ್ಸಿಗ್ಲಾಸು ಸಾವಯವವಾಗಿದೆ.
ಈ ಪೆಕ್ಸಿ ಗ್ಲಾಸ್‌ನಲ್ಲಿ ಹೈಡ್ರೋಸಯನಿಕ್ ಇದ್ಧರೂ ಇದು ವಿಷವಲ್ಲ ಕೃತಕವಾದ ಕಣ್ಣು ಮೂಗು, ಕೈಬೆರಳುಗಳನ್ನು ತಯಾರಿಸಲೂ ಸಹ ಉಪಯೋಗಿಸಲಾಗುತ್ತದ. ಮಾನವ ದೇಹದ ಅಂಗಾಂಗಗಳೊಡನೆ ಸುಲಭವಾಗಿ ಹೊಂದಿಕೊಳ್ಳಬಲ್ಲವಾದ್ದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಹೃದಯದ ಕೃತಕ ಕವಾಟಗಳನ್ನು ತಯಾರಿಸಲಾಗುತ್ತದೆ, ಎಂದಾಗ ಇದರ ಅಪರಿಮಿತ ಉಪಯೋಗದ ಅರ್ಥವಾಗುತ್ತದೆ. ಅನೇಕ ವಿಜ್ಞಾನದ ಪ್ರಯೋಗಶಾಲೆಗಳಲ್ಲಿ ‘ಮಾದರಿ’ಗಳನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ. ಏಕೆಂದರೆ ಪಾರದರ್ಶಕವಾದ್ದರಿಂದ ಒಳಭಾಗದ ನೋಟವನ್ನು ನೋಡಬಹುದು. ಇದು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯನ್ನು ತಡೆಯಬಲ್ಲದಾದ್ದರಿಂದ ಸಣ್ಣಪುಟ್ಟ ಅಗ್ನಿ ಶಾಖಕ್ಕೆ ಹೆದರಬೇಕಿಲ್ಲ ಸಂಗೀತದ ಉಪಕರಣಗಳನ್ನು ತಯಾರಿಸಲು ಇಂಜಿನಿಯರಿಂಗ್ ಕಾಂಪೊನೆಂಟ್‌ಗಳನ್ನು ತಯಾರಿಸಲು, ಉಪಯೋಗಿಸಬಹುದಲ್ಲದೇ ಈ ಪೆಕ್ಸಿಗ್ಲಾಸು ಕಟ್ಟಡ ನಿರ್ಮಾಣದ ಕಾರ್ಯದಲ್ಲಿಯೂ ಇದರ ಉಪಯೋಗವನ್ನು ಪಡೆಯಲಾಗುತ್ತದೆ. ಇದರ ಮೇಲೆ ನೀರು, ಅಮ್ಲ ಪ್ರತ್ಯಾಮ್ಲಗಳ ಪೆಟ್ರೋಲ್ ಮುಂತಾದ ದ್ರವಗಳು ಏನು ಮಾಡಲಾಗದು. ಗಟ್ಟಿತನದಿಂದಲೂ, ಶುಭ್ರತೆಯಿಂದಲೂ ಬಹು ಉಪಯೋಗಿ ಗುಣಗಳಿಂದಲೂ ಗಾಜಿಗಿಂತಲೂ ಈ ಪೆಕ್ಸಿಗ್ಲಾಸ್ ಹೊಸ ದಾಖಲೆ ಸ್ಥಾಪಿಸಿದೆ.
****************