ಪ್ರವಾಸ ಸಾಹಿತ್ಯದ ಓದಿನ ಮೂಲಕ ಈ ವರೆಗೆ ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿ ಬಂದಂತಾಯ್ತು. ಪ್ರತಿಯೊಬ್ದ ಲೇಖಕರದ್ದು ವಿಭಿನ್ನ ದೃಷ್ಟಿಕೋನಗಳು. ಈ ಹಿನ್ನೆಲೆಯಲ್ಲಿ ಆಯಾ ದೇಶಗಳ ರಾಜಕೀಯ, ಸಾಮಾಜಿಕ, ಐತಿಹಾಸಿಕ, ಕಲೆ ಸಂಸ್ಕೃತಿಗಳ ಪರಿಚಯ ಮಾಡಿಕೊಂಡಂತಾಯ್ತು. ಭಾರತ ದೇಶದ ಉದ್ದಗಲ ಪ್ರವಾಸಿಸಿದ ಪ್ರವಾಸಿಗರ ಕಥನಗಳಲ್ಲಿ ನಮ್ಮ ಸಂಸ್ಕೃತಿಯ ಬಗೆಗಿನ ಹೆಚ್ಚಿನ ಪರಿಚಯ. ವಿವರಣೆಗಳಿದ್ದು ಅವುಗಳೆಲ್ಲದರ ಒಟ್ಟಾರೆಯಾದ ಚಿತ್ರಣ ನಮ್ಮ ಕಣ್ಣೆದುರಿಗೆ ಕಟ್ಟುವಂತಿವೆ. ಹಾಗೆಯೇ ವಿದೇಶ ಪ್ರವಾಸ ರಚಿಸಿದ ಹೆಚ್ಚಿನ ಲೇಖಕರು ಅಲ್ಲಿಯ ಸಮೃದ್ಧತೆಯ ಬಗೆಗೆ ಹೊಗಳಿದ್ದಾರೆ. ಸ್ವರ್ಗದ ಅನುಭವ ಪಡೆದೆವು ಎಂದೂ ಹೇಳಿಕೊಂಡಿದ್ದಾರೆ. ಆ ಸ್ವರ್ಗ ಅಲ್ಲಿಯ ವಿಜ್ಞಾನ ತಂತ್ರಜ್ಞಾನದ ಪ್ರಗತಿಯಿಂದ ಪ್ರತಿಯೋರ್ವರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದೆ. ಅಷ್ಟೇ ಅಲ್ಲದೆ ಆ ಜನರ ಶಿಸ್ತು. ಸಮಯ ವೃತ್ತಿಪರತೆ, ವಾರಾಂತ್ಯ ರಜಾದಿನಗಳನ್ನು ಸಂತೋಷವಾಗಿ ಕಳೆಯುವ ಪ್ರವೃತ್ತಿಯ ಬಗೆಗೆ ಮೆಚ್ಚಿ- ಕೊಂಡಿದ್ದಾರೆ. ಕೆಲವರು ನಮ್ಮ ದೇಶದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳ ಬಗೆಗೆ ಅಲ್ಲಲ್ಲಿ ಚರ್ಚಿಸಿಕೊಳ್ಳುತ್ತ ಬಯ್ಪುಕೊಳ್ಳುತ್ತ ಬರೆದುಕೊಂಡು ಹೋದವರೂ ಇದ್ದಾರೆ. ಇರಲಿ. ಪ್ರವಾಸ ಸಾಹಿತ್ಯದ ಓದಿನಿಂದ ಒಟ್ಟಾರೆಯಾಗಿ ವಿಶ್ವದ ಅಧ್ಯಯನ ಮಾಡಲು ಸಹಾಯವಾಗುತ್ತದೆ.
ಇತ್ತೀಚಿಗೆ ಪ್ರವಾಸಕ್ಕೆ ಹೋರಡುವುದು ತೀರಾ ಸಲೀಸಾಗಿಬಿಟ್ಟಿದೆ. ಪ್ರವಾಸೋದ್ಯಮ ಇಲಾಖೆಯವರು ಜಗತ್ತಿನಾದ್ಯಂತ ಶಾಖೆಗಳನ್ನು ತೆಗೆದು ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆಗಳನ್ನು ಒದಗಿಸಿಕೊಡುತ್ತಿದ್ದಾರೆ. ಇಂದು ಅಮೆರಿಕೆಗೆ ಹೋಗಬೇಕೆನ್ನುವುದು ಬಹಳ ಸಹಜವಾಗಿಯೇ ನಮ್ಮ ನೆರೆಹೊರೆಯ ಊರಿಗೆ ಹೋದಂತೆಯೇ ಅಗುತ್ತಿದೆ. ಕೈ ತುಂಬಾ ಹಣ ಇರಬೇಕದ್ದೇ. ಪ್ರವಾಸಿ ಏಜೆಂಟರು ನಿಮ್ಮ ಮನೆಗೇ ಟಿಕೆಟ್ ತಂದು ಕೊಡುತ್ತಾರೆ.
ಪ್ರವಾಸ ಕೇವಲ ಮೋಜುಮಜವಾಗಿ ಮಾಡಿಕೊಂಡು ಬರಬಾರದಷ್ಟೆ. ಅವಕಾಶಗಳನ್ನು ಬಳಸಿಕೊಂಡು ಆಯಾ ದೇಶಗಳ ರೀತಿ ನೀತಿಗಳನ್ನು ಪರಿಚಯಿಸಿಕೊಳ್ಳುತ್ತ ಜ್ಞಾನಾಭಿವೃದ್ಧಿ ಮಾಡಿಕೊಂಡು ಬರಬೇಕಾದುದು ಅತೀ ಮಹತ್ವ.
ಆದರೆ ಕಂಡದ್ದನ್ನೆಲ್ದಾ ದಾಖಲಿಸಬೇಕೆನ್ನುವ ಹುಚ್ಚು ಹಿಡಿದು ಬಿಟ್ಟರೆ ಅದು ಆ ಪ್ರದೇಶದ, ದೇಶದ ಕೈಪಿಡಿಯಾಗು- ತ್ತದೆಯೇ ಹೊರತು ಮೌಲ್ಯಯುತವಾದ ಸಾಹಿತ್ಯವಾಗುವುದಿಲ್ಲ.
ಪ್ರವಾಸ ಸಾಹಿತ್ಯ ತನ್ನ ಪ್ರಯಾಸದ 120 ಮೆಟ್ಟಿಲುಗಳನ್ನೇರಿ (ವರ್ಷಗಳು) ಶಿಖರ ತಲುಪಿದ ಸಂಭ್ರಮದಲ್ಲಿದೆ. ನಮ್ಮಲ್ಲಿ ಪ್ರವಾಸಿಗರು ಲವಲವಿಕೆಯಿಂದ ವಿಶ್ವದ ನಾನಾ ಕಡೆಗೆ ಹೆಜ್ಜೆ ಮೂಡಿಸಿ ಬಂದಿದ್ದಾರೆ. ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ಧಾರೆ. ಅವರೆಲ್ಲರಿಗೂ ಮತ್ತೊಮ್ಮೆ ವಂದನೆಗಳು.
****