“ಕಲ್ಲುಕೋಳಿ ಕೂಗ್ಯಾವೋ, ಬೆಂಕಿ ಮಳೆ ಸುರಿದೀತೋ ….. ..?” ಹೀಗೆ ಕಾಲಜ್ಞಾನ
ಭವಿಷ್ಯ ನುಡಿದಿತ್ತು. ಈಗ್ಗೆ 50 ವರ್ಷಗಳ ಹಿಂದೆ ಕಾಲಜ್ಞಾನವೆಲ್ಲ ಬೊಗಳೆ ಎಂಬಂತಹ
ಮಾತುಗಳನ್ನು ಆಡಿದ್ದೆವು. ಆದರೆ ಕಾಲಜ್ಞಾನದ ಅಂತರಂಗದ ಅರ್ಥವನ್ನು ಬಿಡಿಸಿದಾಗ
ಘನವಸ್ತುಗಳು ವಿಜ್ಞಾನದ ಆವಿಷ್ಕಾರದಿಂದ ಜೀವಪಡೆಯುತ್ತವೆ, ಅತ್ಯಂತ ತೀಕ್ಷ್ಣವಾದ ಆಮ್ಲ
ಸುರಿಯುತ್ತದೆ ಎಂದು ಅರ್ಥಮಾಡಿಕೊಂಡಾಗ ಇದೆಲ್ಲ ಒಂದು ಬಗೆಯಲ್ಲಿ ನಿಜವಾಗಿವೆ ಮತ್ತು
ಆಗಲಿವೆ, ಆಗಬಹುದು, ಎಂಬ ಅಭಿಪ್ರಾಯಕ್ಕೆ ಎಲ್ಲರೂ ಬರುವಂತಾಗಿದೆ. ಮುಂದಿನ ಹತ್ತಾರು
ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ತನ್ನ ಶೋಧನೆಗಳನ್ನು ಒರೆಹಚ್ಚಿ ಅಸಾಧ್ಯವಾದುದನ್ನು ಸಾಧ್ಯಗೊಳಿಸುತ್ತಲಿದೆ.
ಆಹಾರ, ಔಷಧಿ, ಕಾರು, ವಿಮಾನ ಇನ್ನೂ ಮುಂತಾದ ವಸ್ತುಗಳು ವಿಸ್ಮಯವಾದ
ರೂಪತಾಳಿ ಅಚ್ಚರಿಯ ಫಲಿತಾಂಶವನ್ನು ನೀಡುತ್ತವೆ. ಈಗಿನ ಆಹಾರ ಪದಾರ್ಥಗಳನ್ನೇ
ತೆಗೆದುಕೊಂಡರೆ ಇಂದಿನ ಅಕ್ಕಿ, ಗೋಧಿ, ರಾಗಿ, ಜೋಳ ಎಲ್ಲದರಲ್ಲಿಯೂ ಅನೇಕ ಗೊಬ್ಬರಗಳ
ಸಮೀಕರಣದ ಕಾರಣ ವಿಟ್ಯಾಮಿನ್ ರಹಿತವಾಗಿ ದೊರೆಯುತ್ತಿದ್ದು ಅಂತರಂಗದಲ್ಲಿ
ನಿಧಾನವಾಗಿ ವಿಷಯುಕ್ತವಾಗಿವೆ. ಈ ಕಾರಣವಾಗಿ ಮನುಷ್ಯನಿಗೆ ಹೃದ್ರೋಗ, ಕ್ಯಾನ್ಸರ್,
ಹೊಟ್ಟೆನೋವು, ಅಶಕ್ತತೆಗಳು ಉಂಟಾಗಿ ಬೇಗನೇ ವೃದ್ಧಾಪ್ಯ ಬರುತ್ತದೆ.ಅಥವಾ ಕಾಯಿಲೆಗಳ
ಪರಿಣಾಮವಾಗಿ ಆಯುಷ್ಯದ ಮುಂಚೆಯೇ ಆಂತ್ಯಗೊಳ್ಳುವ ಸೂಚನೆಗಳೂ ಕಂಡಿವೆ. ಇಂತಹ
ನಿಶಕ್ತವಾದ, ಅನಾರೋಗ್ಯಕ್ಕೆ ಕಾರಣವಾಗುವ ಆಹಾರ ಪದಾರ್ಥಗಳು ಭವಿಷ್ಯದಲ್ಲಿ
ಆರೋಗ್ಯವನ್ನು ವರ್ಧಿಸುವ ಔಷಧಿಯುಕ್ತ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ
ಹೇರಳವಾಗಿ ದೊರೆಯುವ ದಿನಗಳು ದೂರವಿಲ್ಲ. ಆಹಾರದ ಒಂದೊಂದು ತುತ್ತು ಕೂಡ
ಶಕ್ತಿವರ್ಧಕವಾಗಿರುತ್ತದೆ. ಸಾಮಾನ್ಯವಾಗಿ ವಯಸ್ಸಾದವರು ಹೃದ್ರೋಗ, ರಕ್ತದೊತ್ತಡ ಕಡಿಮೆ
ಸಾಂದ್ರತೆಯ ಲೈವೋಪ್ರೋಟಿನ್ಸ್ (L.D.L..) ಮುಂತಾದ ಸಮಸ್ಯೆಗಳಿಂದ ಮರಣ
ಹೊಂದುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಎದುರಿಸಲು, ಕೊಲೆಸ್ಟರಾಲ್ ಅನ್ನು
ನಿಯಂತ್ರಿಸಲು ಸಾಮಾನ್ಯವಾಗಿ ನಾವು ಉಪಯೋಗಿಸುವ ಆಹಾರದಲ್ಲಿ ಬದಲಾವಣೆಯನ್ನು
ಮಾಡಿಕೊಳ್ಳಲಾಗುತ್ತದೆ. ಆದರೆ ಮುಂದೆ ಈ ಹೊಂದಾಣಿಕೆಯ ಗೂಡವೆಗೆ ಹೋಗಬೇಕಿಲ್ಲ
ಏಕೆಂದರೆ ಐಸೋಪ್ಲೇವೋನ್ಸ್ (Isoflavones) ಎಂಬ ಕೆಲವು ಪ್ರತ್ಯೇಕ ರಾಸಾಯನಿಕ
ಪದಾರ್ಥಗಳನ್ನು ಸೇವಿಸಿದರೆ ಸಾಕು. ಇದರಿಂದ ಹೃದ್ರೋಗ, ಬಿ.ಪಿ. ಮುಂತಾದ ರೋಗಗಳು
ಜಾಗ್ರತೆಯಾಗಿ ನಿಯಂತ್ರಣಗೊಳ್ಳುತ್ತವೆ ಎಂದು ಉತ್ತರ ಕೆನಡಾದ ವೆಟ್‌ಫಾರ್‌ಹ್ಟ ವಿಶ್ವ
ವಿದ್ಯಾಲಯದ ಬ್ಯಾಪ್ಟಿಸ್ಟ್ ಮೆಡಿಕಲ್ಸ್ ಕೇಂದ್ರಕ್ಕೆ ಸೇರಿದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸೋಯಪ್ರೋಟಿನನ್ನು ಹೆಚ್ಚಿನ ಪ್ರಮಾಣ ಐಸೋಪ್ಲೇವೋನ್ಸ್ ಜತೆಗೆ ಸೇರಿಸಿಕೊಡು
ವುದರಿಂದ ಬೊಜ್ಜಿನ ಪ್ರಮಾಣವನ್ನು ಕುಗ್ಗಿಸಬಹುದೆಂದು ಅಧ್ಯಯನವೊಂದರಲ್ಲಿ ಜಾನ್ ಆರ್
ಕ್ರೂಯಿಸ್ III ಎಂಬ ವಿಜ್ಞಾನಿ ಹೇಳುತ್ತಾರೆ. ಅಲ್ಲದೆ ಐಸೋಪ್ಲೇರ್ವೊನ್ಸ್ ಪ್ರಮಾಣವನ್ನು
ಹೆಚ್ಚಿಸಿದಾಗ ಅದು ಮಹಿಳೆಯರಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುವುದನ್ನು ಅವರು
ಕಂಡುಕೊಂಡಿದ್ದಾರೆ. ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ನಡೆಸುವ ಸಂಶೋಧನೆಗಳ
ಫಲಿತಾಂಶಗಳನ್ನು ಅನುಸರಿಸಿ ಸಿದ್ಧ ಆಹಾರವನ್ನು ತಯಾರಿಸಿ ಸಂಸ್ಥೆ ಹೆಚ್ಚಿನ ಪೋಶಕಾಂಶಗಳುಳ್ಳ
ಆಹಾರವನ್ನು ತಯಾರಿಸುತ್ತವೆ. ಆಹಾರದ ಬೇಡಿಕೆಗೆ ತಕ್ಕಂತೆ ಸಿದ್ಧ ಆಹಾರ ತಯಾರಿಸಿ ಕೊಡುವ
ಕಂಪನಿಗಳು ತಮ್ಮಉತ್ಪನ್ನವನ್ನು ಹೆಚ್ಚಿಸಿಕೊಳ್ಳುತ್ತವೆ. ಪ್ರಾಯಶ: 2050ರ ಹೊತ್ತಿಗೆ ಆರೋಗ್ಯಕ್ಕೆ
ಹಾನಿಯುಂಟು ಮಾಡುವ ಪದಾರ್ಥಗಳು ದೊರೆಯಲಾರವೆನಿಸುತ್ತದೆ.
೦೦೦