Home / ಕಥೆ / ಕಿರು ಕಥೆ / ಏಕಾಂತದ ಬೆಳೆ

ಏಕಾಂತದ ಬೆಳೆ

ಗುರುವಿನ ಕಠೋರ ಮಾತುಗಳು ಶಿಷ್ಯನಿಗೆ ವೇದನೆಯಾಯಿತು. ತಾನು ಮಾಡಿದ ತಪ್ಪುಗಳನ್ನು ಅರಿತು ಆಂತರ್ಯವನ್ನು ಶೋಧಿಸ ತೊಡಗಿದ. ಒಡನಾಡುವ ಮಿತ್ರರೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲಾರದೆ ವಿಕಾಂತವನ್ನು ಬಯಸಿದ. ಕಾಡಿನ ಮೂಲೆಯಲ್ಲಿ ಗಿಡಮರಗಳ ಮಧ್ಯೆ ಏಕಾಂತದಲ್ಲಿರಲು ಇಚ್ಛಿಸಿದ. ಗುರುವಿನ ಮಾತುಗಳನ್ನು, ಉಪದೇಶವನ್ನು ಮನದಟ್ಟು ಮಾಡಿಕೊಳ್ಳುತ್ತಿದ್ದ. ಅಳಕನ್ನು ಹುಡುಕಿ ಮನವ ಗುಡಿಸುತ್ತಿದ್ದ, ಸಾರಿಸುತ್ತಿದ್ದ, ತಿಕ್ಕಿ ತೊಳೆದು, ಒರೆಸಿ, ಶುಭ್ರ ಮಾಡುತ್ತಿದ್ದ.

ಏಕಾಂತದಲ್ಲಿ ಕುಳಿತು ಅಂತರಂಗದ ಒಳಹೊಕ್ಕು ದೀಪ ಹಚ್ಚುತ್ತಿದ್ದ. ಬೆಳಕಿನಲ್ಲಿ ಆತ್ಮ ಸಂಶೋಧನೆ ಮಾಡುತ್ತಿದ್ದ. ಏಕಾಂತದಲ್ಲಿ ಕಣ್ಣೀರು ಸುರಿಸಿ ಮುತ್ತಾಗಿ ಬೆಳೆಸುತ್ತಿದ್ದ. ಹೃದಯ ಹೊಲವ ಉಳುತ್ತಿದ್ದ. ತನ್ನನ್ನು ತಾನೇ ತೋಡಿಕೊಂಡು ಬೀಜ ಮೊಳೆಯುವಂತೆ ಸಂಪನ್ನ ಗೊಳಿಸುತ್ತಿದ್ದ. ಏಕಾಂತದಲ್ಲಿ ದಿಗಂತದವರೆಗೂ ಸಾಗುತ್ತಿದ್ದ. ಮನವನ್ನು ಎತ್ತರಕ್ಕೆ ಬೆಳೆಸುತ್ತಿದ್ದ.

ಶಿಷ್ಯನು ಬಹಳಷ್ಟು ಹೊತ್ತು ಏಕಾಂತದಲ್ಲಿ ಕಳೆಯುವುದನ್ನು ಗಮನಿಸಿ ಶಿಷ್ಯನನ್ನು ಕರೆದು “ನಿನ್ನ ಏಕಾಂತಕ್ಕೆ ಕಾರಣವೇನು?” ಎಂದು ಕೇಳಿದರು.

“ಗುರುವೆ! ನಿಮ್ಮ ಸಾನಿಧ್ಯದಲ್ಲಿ ಕಲಿತದ್ದು ರಕ್ತಗತವಾಗಿರಿಸಲು ನಾ ಏಕಾಂತದಲ್ಲಿ ನನ್ನ ನಾನು ಹುಡುಕಿಕೊಂಡು ಹೊರಟಿರುವೆ” ಎಂದ.

“ನಿನ್ನ ನೀನು ಹುಡುಕಲು ಎಲ್ಲಿಗೂ ಹೋಗಬೇಕಿಲ್ಲ. ಕಾಡು ವನದಲ್ಲಿ ನೀನು ಹುಡುಕಬೇಡ. ನೀನು ಇರುವುದು ನಿನ್ನ ಹೊರಗಲ್ಲ, ಒಳಗೆ, ನಿನ್ನ ದೃಷ್ಟಿ ಅಂತರ ಮುಖವಾಗಲಿ. ನಿನ್ನ ಭಾವ ಪರಿಪಕ್ವವಾಗಲಿ. ನಿನ್ನೊಳಗಣ ಹಾದಿ ಅನಂತವಾಗಲಿ. ಅದಕ್ಕೆ ಅನುವಾಗುವುದು ಏಕಾಂತ ಎಂದು ಅರಿತಿರುವೆಯಾ?” ಎಂದರು ಗುರುಗಳು.

“ಏಕಾಂತದಿಂದ ಶ್ರೀಕಾಂತ ಸಾಕ್ಷಾತ್ಕಾರ. ಏಕಾಂತದ ಹಾದಿಯಲ್ಲಿ ಝೆನ್ ಹೆಜ್ಜೆ ಇಟ್ಟು ನಡೆ. ಸಾಗುವುದು. ಗುರಿ ಸೇರುವುದು” ಎಂದಾಗ ಶಿಷ್ಯನ ಎದೆ ತುಂಬಿ ಬಂದಿತು.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...