Home / ಕಥೆ / ಕಿರು ಕಥೆ / ಹಲ್ಲಿನ ಪದಕ

ಹಲ್ಲಿನ ಪದಕ

ಅವನೊಬ್ಬ ಜಟ್ಟಿ, ಕುಸ್ತಿಮಾಡಿ ಜೀವಿಸುತ್ತಿದ್ದ. ಅವನಿಗೆ ತನ್ನ ಪ್ರತಿಯೊಂದು ಅಂಗವೂ ಅತ್ಯಂತ ಪ್ರಿಯ. ಮಾಂಸಖಂಡಗಳನ್ನು ಬಲಿಷ್ಟಿಸಿಕೊಂಡು ಸಂತಸ ಪಡುತ್ತಿದ್ದ. ಅವನಿಗೆ ಉಕ್ಕಿನಂತಹ ಮೂಳೆಯಿದ್ದರೂ, ಅತಿನಾಜೂಕಾದ ಹಲ್ಲುಗಳಿದ್ದವು. ಕುಸ್ತಿ ಮಾಡುವಾಗಲೆಲ್ಲಾ ಬಹಳ ಜಾಗರೂಕತೆ ವಹಿಸುತ್ತಿದ್ದ. ಅವನು ಹೂಂ ಕರಿಸಿ ಕುಸ್ತಿಗೆ, ಪ್ರತಿಸ್ಪರ್ಧಿಗೆ ಆಹ್ವಾನವೀಯುವಾಗ ಅವನ ಹಲ್ಲುಗಳನ್ನು ಕಡಿದು ಕಟಕಟವೆಂದು ಶಬ್ದ ಮಾಡುತ್ತಿದ್ದ. ಅವನಿಗೆ ದೇಹವೇ ದೈವವಾಗಿತ್ತು. ದೇಹದ ತಾಕತ್ತು ಅವನ ಸಂಪತ್ತಾಗಿತ್ತು. ದೇಹವನ್ನು ಬೆಳೆಸುವುದರಲ್ಲಿ ಅವನ ಆಹಾರದ ಪಾತ್ರ ಹಿರಿದಾಗಿತ್ತು. ಆಹಾರವನ್ನು, ಹಸಿ ತರಕಾರಿಗಳನ್ನು, ಹಣ್ಣು ಹಂಪಲುಗಳನ್ನು ತಿನ್ನುವಾಗ, ಅವನು ಹಲ್ಲುಗಳನ್ನು ಪೂಜಿಸಿ, ಗಲ್ಲಕ್ಕೆ ಅರಸಿನ ಕುಂಕುಮ ಹಚ್ಚುತ್ತಿದ್ದ. ಅವನು ಪ್ರತಿಸ್ಪರ್ಧಿಯ ಮೇಲೆ ಹಲ್ಲು ಕಿರಿದ ಅಂದರೆ ಪ್ರತಿಸ್ಪರ್ಧಿ ತರತರನಡುಗುತ್ತಿದ್ದ. ಅವನ ಹೊಟ್ಟೆ ಗೂಡಾಣವಾಗಿ ಬೆಳೆಯಲು, ತೋಳು ಕಬ್ಬಿಣವಾಗಲು, ತನ್ನ ಹಲ್ಲಿನ ಪಾತ್ರ ಅತಿದೊಡ್ಡದೆನ್ನುತ್ತಿದ್ದ.

ತಾನು ಮೆಲ್ಲುವ ಎರಡುನೂರು ಟನ್ ಆಹಾರವನ್ನು ಭಂಜಿಸಿ ಭಕ್ಷಿಸಲು ಹಲ್ಲುಗಳ ಕಾರಖಾನೆಯೇ ಕಾರಣವೆನ್ನುತ್ತಿದ್ದ. ಒಮ್ಮೆ ದುರಾದೃಷ್ಟವಶಾತ್ ಕುಸ್ತಿಯಾಡುವಾಗ ಪ್ರತಿ ಸ್ಪರ್ಧಿಯಿಂದ ಹೊಡೆಸಿಕೊಂಡು ಇವನ ಮುಖವು ಕಂಭಕ್ಕೆ ತಗುಲಿ ಮುಂದಿನ ಎರಡು ಹಲ್ಲು ಅಲುಗಾಡಿ ಬಿದ್ದವು. ಜಟ್ಟಿಗೆ ಅತೀವ ಸಂಕಟವಾಯಿತು. ಅವನು ನಂಬಿದ್ದ ದೈವ ಕೈ ಬಿಟ್ಟಂತೆ ಭಾಸವಾಯಿತು. ಕೈಕಾಲಲ್ಲಿ ಶಕ್ತಿ ಕುಗ್ಗಿದಂತಾಯಿತು. ಹಲ್ಲನ್ನು ಬಿಸಾಡಲು ಅವನಿಗೆ ಮನಬರಲಿಲ್ಲ. ಹಲ್ಲಿನಲ್ಲಿ ತನ್ನ ಆರಾಧ್ಯ ದೈವವನ್ನು ಕೊರೆದು ಅದಕ್ಕೆ ಸ್ವರ್ಣ ಕವಚ ಹಾಕಿ ತನ್ನ ಕೊರಳಿಗೆ ಪದಕವಾಗಿ ಹಾಕಿಕೊಂಡ.

ಇದನ್ನು ನೋಡಿದ ಅವನ ಗೆಳೆಯ ಅವನನ್ನು ಉಪೇಕ್ಷೆ ಮಾಡಿದ. “ಹಲ್ಲಿನಲ್ಲಿದ್ದ ಶಕ್ತಿ ನಿನ್ನಲ್ಲಿ ಇಲ್ಲದಿದ್ದರೆ ನೀನು ನಾಲಾಯಕು”-ಎಂದ. ಅವನ ನುಡಿಗಳು ಅವನ ಮರ್ಮವನ್ನು ಭೇಧಿಸಿದವು. ತನ್ನ ಆರಾಧ್ಯ ಹಲ್ಲಿನ ಝೆನ್ ಧ್ಯಾನ ಮಾಡುತ್ತಾ, ಮಾಡುತ್ತಾ ಅವನಿಗೆ ಮತ್ತೆ ಹಲ್ಲು ಹುಟ್ಟಿತು. ಧ್ಯಾನದಲ್ಲಿ ನೆನೆದದ್ದು ನನಸಿನಲ್ಲಿ ಸಾಕಾರವಾಯಿತು. ಚಿಂತನೆಯಲ್ಲಿ ಚಿಲುಮೆ ಚಿಮ್ಮಿತು. ದೃಷ್ಟಿ ನೆಟ್ಟಲ್ಲಿ ಸೃಷ್ಟಿ ಎಂಬ ಅರಿವಾಯಿತು.

ಗೆಳೆಯನಿಗೆ ಇವನ ಅಪಾರ ಧ್ಯಾನ ಶಕ್ತಿಯಲ್ಲಿ ನಂಬಿಕೆ ಮೂಡಿತು.
*****

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...