Home / ಕಥೆ / ಕಿರು ಕಥೆ / ಮೀನದ ಪರಿಮಳ

ಮೀನದ ಪರಿಮಳ

(ಕೇಳಿದ ಕತೆ)

ಮೀನ ಮಾರಿ ಮರುಳುವಾಗ ಕತ್ತಲಾಯಿತು. ಪರಿಚಿತರಾದ ಯೆಂಕಟ ಆಚಾರ್ರ ಮನೆಯ ಅಂಗಳದಲ್ಲೇ ‘ಹಮ್ಕೊಂಡು’ ‘ಹೊತ್ತಾರೆ’ ಹೋದರಾಯಿತೆಂದು ಅವರು ನಿಶ್ಚಯಿಸಿದರು.

ಆಚಾರಿಯ ಮನೆಯಲ್ಲಿ ಅಂದು ಸತ್ಯನಾರಾಯಣವಾಗಿತ್ತು. ಬಾಗಿಲಿಗೆ ಬಂದ ಅಂಬಿಗಿತಿಯರಿಗೆ ಅಂಗಳದ ತುದಿಗೆ ಮಲಗಲು ಜಾಗ ಕೊಡದಷ್ಟು ಕೆಟ್ಟವನಲ್ಲ ಆಚಾರಿ. “ಓಹೋ ಆಚಾರ್ರ ಮನೇಲಿಯೇನೋ ಇಶೇಷ ಅಂತ್ಕಾಣ್ತೀದು!” ಎಂದು ಅಂಬಿಗಿತಿಯರು ಹೇಳಿದ ಮೇಲೆ ಅವರಿಗೆ ಒಂದು ಚೂರು ಅದು ಇದು ಕೊಡದೆ ಇರಲೂ ಅವನಿಂದಾಗಲಿಲ್ಲ.

ದಣಿದುಬಂದ ಅಂಬಿಗಿತಿಯರು ಅಂಗಳದ ತುದಿಗೆ ಗೊರೆಯಹತ್ತಿದರು. ಸತ್ಯನಾರಾಯಣವಾದ್ದರಿಂದ ಹೂವು ಕಪ್ಪುರ ಊದುಬತ್ತಿಗಳ ನರುಗಂಪು ಆಚಾರಿಯ ಮನೆಯೊಳಗೂ ಆ ವಠಾರದಲ್ಲೂ ತುಂಬಿಕೊಂಡಿತ್ತು.

“ಯೇನೇ ಅಕ್ಕಾ, ವರ್ಕ ಬರ್ಲಿಲ್ವನೇ?”

“ನಿನ್ಗೂ ಬರ್ಲಿಲ್ವೊ ನೋಡ್ತೆ”

“ಇಲ್ವೆ, ಯೇನೋ ಒಂದ್ ನಮೂನಿ ನಾತ ಬತ್ತಿದು.”

“ನನ್ಗೂ ಅದೇ ನೋಡು.”

“ಯೇನ್ಮಾಡ್ವ? ನನ್ಗೆ ಇಲ್ಲಿ ವರ್ಕ ಬರ್ವಾಂಗೇ ಇಲ್ಲ”

“ನನ್ಗೂ ಹಾಗೇ, ತೋಟಕ್‌ ಹೋಗಿ ಹಂಮ್ಕಂಬನೆ?”

ಆ ಕಂಪಿನಿಂದ ನಿದ್ದೆ ಉಡುಗಿ ಹೋಗಲು ಇಬ್ಬರೂ ವಿಚಾರಿಸಹತ್ತಿದರು. “ಬೇಡ್ವೆ. ಇಲ್ಲೇ ನಂ ಬುಟ್ಟಿ ತಂದಿಟ್ಕಂಬ” ಎಂಬ ನಿರ್ಣಯಕ್ಕೆ ಬಂದರು.

ಆಚಾರಿಯ ಮನೆಯೆದುರು ಕಂಪು ಬೀರಲು ತರಬಾರದೆಂದು ತೋಟದಲ್ಲಿಯೇ ಬಿಟ್ಟು ಬಂದ ಮೀನಿನ (ಖಾಲಿಯಾದ) ಬುಟ್ಟಿಗಳನ್ನು ತಲೆಬದಿಗೆ ಇಟ್ಟುಕೊಂಡರು.

ಮೀನು ಇರದಿದ್ದರೂ ಬುಟ್ಟಿಗೆ ಪರಿಮಳ ಇದ್ದೇ ಇತ್ತು, ಇದರಿಂದ ಊದಬತ್ತಿ, ಕಪ್ಪುರ, ಹೂಗಳ ‘ನಾತ’ ಓಡಿಹೋಯಿತು.

ಅಂಬಿಗಿತಿಯರಿಗೆ ತಮ್ಮ ಗುಡಿಸಲಿನಲ್ಲೇ ಮಲಗಿದಷ್ಟು ಸುಖವಾಗಿ ನಿದ್ದೆ ಹತ್ತಿತು.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...