Home / ಲೇಖನ / ಇತರೆ / ಕಾಳಿ ಕತೆ

ಕಾಳಿ ಕತೆ

ಈಗೀಗ ವಿದೇಶಗಳಲ್ಲಿ ವಿದೇಶಿಯರಲ್ಲಿ ಭವ್ಯ ಭಾರತದ ಬಗ್ಗೆ ಭವ್ಯ ಭಾರತೀಯ ದೇವಾನುದೇವತೆಗಳ ಬಗ್ಗೆ ತುಂಬಾ ತುಂಬಾ ಗೌರವ ಮೂಡುತ್ತಿದೆ. ಇದೆಲ್ಲ ಸ್ವಾಗತಾರ್ಹ.

ಭವ್ಯ ಭಾರತದ ಪ್ರಭಾವ, ಸಂಸ್ಕೃತಿ, ನಾಗರೀಕತೆ ಅಂಥಾದ್ದು! ಇಡೀ ವಿಶ್ವಕ್ಕೆ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ!

ಇದೆಲ್ಲದ್ದಕ್ಕೂ ಪುಷ್ಠಿದಾಯಕವಾಗಿ ಇತ್ತೀಚೆಗೆ ಆಗಸ್ಟ್ ೨೦೧೫ ರ ಮೊದಲ ವಾರದಲ್ಲಿ ನೂಯಾರ್ಕ್‌ನ ಎಂಪೈರ್ ಬಿಲ್ಡಿಂಗ್ ಮೇಲೆ ಕಾಳಿದೇವಿಯ ಪ್ರದರ್ಶನವಿತ್ತು!

ಇಡೀ ನ್ಯೂಯಾರ್ಕಿನ ಜನತೆ ಅದರಲ್ಲೂ ಅಲ್ಲಿ ನೆಲೆಸಿರುವ ಭವ್ಯ ಭಾರತೀಯರೆಲ್ಲ ಈ ಅಭೂತಪೂರ್ವ ದೃಶ್ಯವೊಂದನ್ನು ಕಂಡು ಪುನೀತರಾಗಿದ್ದಾರೆ.

ನ್ಯೂಯಾರ್ಕಿನ ಕಲಾವಿದ ಆಂಡ್ರ್ಯೂ ಜೋನ್ಸ್- ಕಾಳಿದೇವಿಯ ಬೃಹತ್ ಚಿತ್ರ ರಚಿಸಿದ್ದರು. ಅದನ್ನು ಕಟ್ಟಡದ ಉದ್ದಕ್ಕೂ ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸಿದ್ದರು.

ಈ ಬೃಹತ್ ಚಿತ್ರ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು! ಸಾಕ್ಷಾತ್ ಕಾಳಿಕಾದೇವಿಯೇ ಆಕಾಶದಿಂದ ಧರೆಗಿಳಿದು ಬಂದಿದ್ದಳೆಂಬಂತೆ ಎದ್ದು ಕಾಣುತ್ತಿತ್ತು!

ಈಗೀನ ಪ್ರಕೃತಿ ಮಾತೆ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಮಾನವನ ದುರಾಸೆಗಳಿಗಾಗಿ ನಾನಾ ರೀತಿಯ ಅತ್ಯಾಚಾರ ಅನಾಚಾರ… ಹಿಂಸೆ… ಅವಮಾನ, ಕ್ರೌರ್ಯ, ಬಲಿಗೆ ತುತ್ತಾಗಿ ನಿರಂತರವಾಗಿ ಮಾನವನ ಘೋರ ದಾಳಿಗಳಿಗೆ ಒಳಗಾಗುತ್ತಿರುವಳು. ಇದನ್ನೆ ಕಂಡು ರೋಸಿ ಹೋಗಿ ಇಂದು ಭೂಮಿಯನ್ನು ರಕ್ಷಿಸಲು ತಾಯಿ ಕಾಳಿಕಾ ಮಾತೆಯೇ ಪ್ರಚಂಡಾವತಾರ ಎತ್ತಲು ಕಾಲ ಸನಿಹವಾಗಿದೆಯೆಂಬ ಸಂದೇಹ ಸಾರಲು ಈ ಚಿತ್ರವೆಂದು ಕಲಾವಿದ ಆಂಡ್ರ್ಯೂ ಜೋನ್ಸ್ ತನ್ನ ಅಳಲನ್ನು ಅಂದು ತೋಡಿಕೊಂಡಿರುವನು.

ಇಲ್ಲಿ ನ್ಯೂಯಾರ್ಕಿನ ಜನಪ್ರಿಯ ಎಂಪೈರ್ ಬಿಲ್ಡಿಂಗ್‌ನ ಮೇಲೆ ಆಗಾಗ ಇಂಥ ಹಲವು ಚಿತ್ರಗಳನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯವಾಗಿದೆ. ಈಗ ಕಾಳಿ ಕತೆ ಜನರ ಮನದಲ್ಲಿ ನೆಲೆಯೂರಲಿ ಎಂದಿಗೂ ಈ ಪ್ರದರ್ಶನದ ಘನ ಉದ್ದೇಶವೆಂದು ಕಲಾವಿದ ಸಾರಿಕೊಂಡಿದ್ದಾನೆ.

ನಮ್ಮಲ್ಲಿಯೂ ಸಾಹಿತಿಗಳಿಗೆ, ಕಲಾವಿದರಿಗೆ ಇಂಥಾದೊಂದು ವೇದಿಕೆ ನಿರ್ಮಾಣವಾಗಬೇಕು. ಅದಕ್ಕಾಗಿ ನಾವು ನೀವು ಕಾಯೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...