ಇಂಗದ
ಧನ ದಾಹಕೆ
ಬರಿದಾಯ್ತು ಕಾಡು
ಬಗಿದಾಯ್ತು ನೆಲ
ತಪ್ಪಿದರೆಚ್ಚರ
ಬಂತೆ ಗಂಡಾಂತರ
ಕುತ್ತು ಜನಕೆ
ಕೇಡು ಜಗಕೆ
ಏರಿತು
ಧರೆಯ ಧಗೆ
ಬತ್ತಿತೋ ಬತ್ತಿತು
ಇಳೆಯ ಜಲ
ಸಂರಕ್ಷಿಸಿ
ಅಂತರ್‍ಜಲ
ಮರಗಿಡ ಬಳ್ಳಿ
ಬೆಳೆಸಿ ಹೆಚ್ಚೆಚ್ಚು
ತೋಡಿ ಇಂಗುಗುಂಡಿ
ಮಾಡಿ ಮಳೆಕೊಯ್ಲು
ಇದುವೇ
ಪ್ರಾಣಾಮ್ಲ ಜಗಕೆಲ್ಲ
*****


















