Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಸೋಮವಾರ, ಜೂನ್ ೧೫, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಸೋಮವಾರ, ಜೂನ್ ೧೫, ೧೯೪೨

ರವಿವಾರ ಮಧ್ಯಾಹ್ನ ನನ್ನ ಹುಟ್ಟುಹಬ್ಬದ ಪಾರ್ಟಿ ಮಾಡಿದೆವು. ನನ್ನ ಸ್ನೇಹಿತರಿಗೆಲ್ಲ “Lighthouse Keeper with Rin-Tin-Tin” ಸಿನೇಮಾ ತೋರಿಸಿದೆವು. ಅವರೆಲ್ಲ ತುಂಬಾ ಖುಷಿಪಟ್ಟರು. ಅದೊಂದು ಸುಂದರ ಕ್ಷಣ. ಅಲ್ಲಿ ಬಹಳಷ್ಟು ಹುಡುಗ ಹುಡುಗಿಯರಿದ್ದರು. ನಾನು ಯಾರನ್ನು ಮದುವೆಯಾಗಲಿರುವೆ ಎಂಬುದನ್ನು ತಿಳಿಯಲು ಅಮ್ಮ ಯಾವಾಗಲೂ ಬಯಸುತ್ತಿದ್ದಳು. ಆಕೆಯ ಸಣ್ಣ ಊಹೆ ಎಂದರೆ ಅವನು ಪೀಟರ್ ವೆಸಲ್ ಇರಬಹುದೆಂದಾಗಿತ್ತು. ಅದಕ್ಕೆ ನಾಚಿಕೊಳ್ಳದೇ, ಕಣ್ಣೆವೆ ಮಿಣುಕಿಸದೇ ಒಂದು ದಿನ ಆ ವಿಚಾರವನ್ನು ಅಮ್ಮನ ತಲೆಯಿಂದ ತೊಡೆದುಹಾಕುವಲ್ಲಿ ನಾನು ಯಶಸ್ವಿಯಾದೆ.

ವರ್ಷಗಳವರೆಗೆ ಲೀಸ್ ಗೂಸೆನ್ಸ್, ಸ್ಯಾನ್ ಹೌಟ್‌ಮ್ಯಾನ್ ನನ್ನ ಬೆಸ್ಟ್ ಪ್ರೆಂಡ್ಸ್ ಆಗಿದ್ದರು .ತದನಂತರ ಜೇವಿಸ್ ಸೆಕೆಂಡರಿ ಸ್ಕೂಲಿನಲ್ಲಿರುವಾಗ ನನಗೆ ಜೋಪೀ-ಡಿ-ವಾಲ್‌ಳ ಪರಿಚಯವಾಯಿತು. ನಾವಿಬ್ಬರೂ ಜೊತೆಯಾಗಿರುತ್ತೇವೆ. ಈಗಾಕೆ ನನ್ನ ಆಪ್ತ ಗೆಳತಿ. ಲೀಸ್ ಬೇರೊಬ್ಬ ಹುಡುಗಿಯೊಂದಿಗೆ ಬಹಳ ಸ್ನೇಹದಿಂದಿದ್ದಾಳೆ. ಸ್ಯಾನ್ ಬೇರೆ ಶಾಲೆಗೆ ಹೋಗುತ್ತಾಳೆ. ಆಕೆಯೂ ಬೇರೆ ಸ್ನೇಹಿತರನ್ನು ಮಾಡಿಕೊಂಡಿದ್ದಾಳೆ.
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...