Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಗಸ್ಟ ೧೪, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಗಸ್ಟ ೧೪, ೧೯೪೨

ಪ್ರೀತಿಯ ಕಿಟಿ,

ಸುಮಾರು ಒಂದು ತಿಂಗಳು ನಾನು ನಿನ್ನಿಂದ ದೂರವಿದ್ದೆ. ಆದರೆ ನಿಜದಲ್ಲಿ ಇಲ್ಲಿಯ ಕೆಲವು ಸಣ್ಣ ಸಂಗತಿಗಳನ್ನು ಬಿಟ್ಟರೆ ನಿನ್ನೊಂದಿಗೆ ಹೇಳಿ ಆನಂದಿಸಲು ಅಂತಹ ಮೋಜಿನ ವಿಚಾರಗಳಿಲ್ಲ. ವ್ಯಾನ್ಡ್ಯಾನ್ ಕುಟುಂಬದವರು ಜುಲೈ ೧೩ಕ್ಕೆ ಬಂದರು. ಅವರು ೧೪ಕ್ಕೆ ಬರುವರೆಂದು ನಾವಂದುಕೊಂಡಿದ್ದೆವು. ಆದರೆ ಜರ್ಮನ್‌ರು ಜುಲೈ ೧೩ರಿಂದ ೧೬ರವರೆಗೆ ಎಲ್ಲ ಕಡೆಗಳಲ್ಲೂ ಜನರನ್ನು ಸೈನ್ಯಕ್ಕೆ ಸೇರಲು ಕರೆ ನೀಡಿದ್ದರು. ಇದರಿಂದ ಜನರು ವ್ಯಾಕುಲರಾಗಿದ್ದು, ತಮ್ಮ ಸುರಕ್ಷತೆಗಾಗಿ ಒಂದು ದಿನ ವಿಳಂಬ ಮಾಡುವ ಬದಲು ಒಂದು ದಿನ ಮೊದಲೇ ಬಂದಿದ್ದರು. ಬೆಳಿಗ್ಗೆಯ ಒಂಬತ್ತುವರೆಗೆ [ನಾವಾಗ ಬೆಳಿಗ್ಗೆಯ ತಿಂಡಿ ಮಾಡುತ್ತಿದ್ದೆವು] ವ್ಯಾನ್ಡ್ಯಾನ್‌ರ ಮಗ ಪೀಟರ್ ಬಂದ. ಇನ್ನೂ ಹದಿನಾರು ತುಂಬಿರದ, ಆದರೆ ಮೆತ್ತಗಿನ, ನಾಚಿಕೆಯ, ಅಂಜುಬುರುಕ ಸ್ವಭಾವದ ಹುಡುಗನಿಂದ ಹೆಚ್ಚಿನದೇನೂ ನಿರೀಕ್ಷಿಸುವಂತಿರಲಿಲ್ಲ. ತನ್ನೊಂದಿಗೆ ತನ್ನ ಬೆಕ್ಕು ಮೂಶೆಯನ್ನು ತಂದಿದ್ದ. ವ್ಯಾನ್ಡ್ಯಾನ್ ಮತ್ತು ಶ್ರೀಮತಿ ವ್ಯಾನ್ಡ್ಯಾನ್ ಅರ್ಧ ಗಂಟೆ ತಡವಾಗಿ ಬಂದರು. ನಮ್ಮ ಆಶ್ಚರ್ಯಕ್ಕೆ ಕಾರಣವಾದದ್ದು ಶ್ರೀಮತಿ ವ್ಯಾನ್ಡ್ಯಾನ್ ತನ್ನ ಹಾಟ್ ಬಾಕ್ಸನಲ್ಲಿ ತಂದಿದ್ದ ದೊಡ್ಡ ಶೌಚಾಲಯದ ತಂಬಿಗೆ, ನನ್ನ ಚೇಂಬರ ಬಿಟ್ಟು ಬೇರೆ ಕಡೆ ನನಗೆ ಮನೆಯಲ್ಲಿದ್ದಂತೆ ಅನ್ನಿಸುವುದಿಲ್ಲ ಶ್ರೀಮತಿ ವ್ಯಾನ್ಡ್ಯಾನ್ ಅಂದರು. ಹಾಗಾಗಿ ಅದಕ್ಕಾಗಿಯೇ ಅವರಿಗೆ ದಿವಾನದ ಅಡಿಯಲ್ಲಿ ಒಂದು ಶಾಶ್ವತ ಸ್ಥಳ ಹುಡುಕುವುದೇ ಮೊದಲ ಸಂಗತಿಯಾಗಿತ್ತು. ವ್ಯಾನ್ಡ್ಯಾನ್ ಅದನ್ನು ತಂದಿರಲಿಲ್ಲ. ಆದರೆ ಅವರು ಮಡಚುವ ಟೀ ಟೇಬಲ್ಲನ್ನು ತೋಳಲ್ಲಿಟ್ಟುಕೊಂಡು ತಂದಿದ್ದರು.

ಅವರು ಬಂದ ದಿನದಿಂದ ನಾವೆಲ್ಲ ಊಟವನ್ನು ಸ್ನೇಹದಿಂದ ಬೆರೆತು ಮಾಡಲಾರಂಭಿಸಿದೆವು. ಮೂರು ದಿನಗಳ ನಂತರ ನಾವೆಲ್ಲ ಒಂದೇ ಕುಟುಂಬದವರು ಎಂಬತಾಗಿತ್ತು. ಸಹಜವಾಗಿಯೇ ವ್ಯಾನ್ಡ್ಯಾನ್ ಕುಟುಂಬದವರು ಮೊದಲಿನ ಸ್ಥಳದಲ್ಲಿ ತಾವು ಕಳೆದ ಕೆಲವು ಹೆಚ್ಚು ವಾರಗಳ ಅನುಭವವನ್ನು ನಮ್ಮೊಂದಿಗೆ ಹೇಳುತ್ತಿದ್ದರು. ಉಳಿದೆಲ್ಲ ಸಂಗತಿಗಳ ಜೊತೆಗೆ ನಮಗೆ ನಮ್ಮ ಮನೆಗೆ ಏನಾಯಿತು? ಮತ್ತು ಗೌಡ್ಸ್ಮಿತ್ ಬಗ್ಗೆ ಕೇಳುವ ಹಂಬಲವಿತ್ತು.

ವ್ಯಾನ್ಡ್ಯಾನ್ ಹೇಳಿದರು, “ಗೌಡ್ಸ್ಮಿತ್ ನನಗೆ ಸೋಮವಾರ ಮುಂಜಾನೆ ಫೋನು ಮಾಡಿ ನನಗೆ ಅವರಲ್ಲಿಗೆ ಬರಲು ಸಾಧ್ಯವೇ? ಎಂದು ಕೇಳಿದರು. ನಾನು ತಕ್ಷಣವೇ ಅಲ್ಲಿಗೆ ಹೋದಾಗ ಗೌಡ್ಸ್ಮಿತ್ ಒಂದು ರೀತಿಯ ತಳಮಳದಲ್ಲಿ ಇದ್ದಂತೆ ಕಂಡರು. ಫ್ರಾಂಕ್ ಕುಟುಂಬ ಬಿಟ್ಟು ಹೋದ ಪತ್ರವೊಂದನ್ನು ಕೊಟ್ಟರು. ಪತ್ರದಲ್ಲಿ ಹೇಳಿದಂತೆ ಬೆಕ್ಕನ್ನು ಪಕ್ಕದ ಮನೆಯವರು ತೆಗೆದುಕೊಂಡರೆ ಒಳ್ಳೆಯದೆಂದು ಅವರು ಬಯಸಿದ್ದರು. ಅದು ನನಗೆ ಖುಷಿಯಾಯಿತು. ಎಲ್ಲಿಯಾದರೂ ಮನೆ ಶೋಧಿಸಲ್ಪಟ್ಟರೆ ಎಂದು ಗೌಡ್ಸ್ಮಿತ್ ಹೆದರಿದ್ದರು. ಹಾಗಾಗಿ ನಾವು ಎಲ್ಲ ಕೋಣೆಗಳನ್ನು ಅಲ್ಪಸ್ವಲ್ಪ ಅಚ್ಚುಕಟ್ಟುಗೊಳಿಸಿದೆವು, ಬ್ರೆಕ್‌ಫಾಸ್ಟ್‌ನ ಚೂರುಪಾರುಗಳನ್ನೆಲ್ಲಾ ಸ್ವಚ್ಛಗೊಳಿಸಿದೆವು. ಅಷ್ಟರಲ್ಲೆ ನನಗೆ ಫ್ರಾಂಕ್‌ನ ಡೆಸ್ಕ್ ಮೇಲೆ ಮಾಸ್ಟ್ರಿಚ್‌ನ ವಿಳಾಸ ಹೊಂದಿದ ರೈಟಿಂಗ್ ಪ್ಯಾಡ ಒಂದು ಸಿಕ್ಕಿತು. ಇದ್ಯಾವುದೋ ಉದ್ದೇಶ ಹೊಂದಿದ್ದೆ ಎಂಬುದು ನನಗೆ ತಿಳಿದಿತ್ತು. ನಾನು ನನಗೇನೂ ಗೊತ್ತಿಲ್ಲದಂತೆ ಆಶ್ಚರ್ಯ ಮತ್ತು ಗೊಂದಲಕ್ಕೊಳಗಾದಂತೆ ನಟಿಸಿದೆ. ಮತ್ತು ಗೌಡ್ಸ್ಮಿತ್ ಆ ಕಾಗದದ ಚೂರುಗಳನ್ನು ತಡಮಾಡದೇ ಹರಿದು ಬಿಸಾಕುವಂತೆ ಒತ್ತಾಯಿಸಿದೆ.

“ನಿಮ್ಮೆಲ್ಲರ ಕಣ್ಮರೆಯ ಬಗ್ಗೆ ನನಗೇನೂ ಗೊತ್ತಿಲ್ಲದಂತೆ ನಾನು ನಟಿಸುತ್ತಲೇ ಇದ್ದೆ. ಆದರೆ ಆ ಕಾಗದ ಸಿಕ್ಕ ಮೇಲೆ ನನಗೊಂದು ವಿಚಾರ ಹೊಳೆಯಿತು. ಗೌಡ್ಸ್ಮಿತ ,ಈ ವಿಳಾಸ ಏನನ್ನು ಸೂಚಿಸುತ್ತಿದೆ ಎಂಬುದು ನನಗೀಗ ಹೊಳೆಯುತ್ತಿದೆ. ಈಗ ನನಗೆಲ್ಲ ನೆನಪಾಯಿತು. ಆರು ತಿಂಗಳ ಹಿಂದೆ ಉನ್ನತ ಅಧಿಕಾರಿಯೊಬ್ಬರು ಈ ಆಫೀಸಿನಲ್ಲಿದ್ದರು, ಅವರಿಗೆ ಫ್ರಾಂಕ್‌ರೊಂದಿಗೆ ಒಳ್ಳೆಯ ಸ್ನೇಹವಿತ್ತು. ಅಗತ್ಯ ಬಿದ್ದಿರಬೇಕು ಹಾಗಾಗಿ ಸಹಾಯ ಮಾಡಿದರು. ಅವರು ಮಾಸ್ಟ್ರೀಚ್‌ನಲ್ಲಿ ಇದ್ದರು. ಅವರಿಗೆ ತಮ್ಮ ಮಾತು ಉಳಿಸಿಕೊಳ್ಳಬೇಕಿತ್ತು ಎಂದು ನನಗೆ ಅನ್ನಿಸುತ್ತಿದೆ. ಅದಕ್ಕಾಗಿ ಫ್ರಾಂಕ್‌ರನ್ನು ಬೆಲ್ಜಿಯಂಗೆ ಕಳುಹಿಸಿ ಅಲ್ಲಿಂದ ಸ್ವಿಜರ್ರ್‍ಅಲ್ಯಾಂಡ್‌ಗೆ ಮುಟ್ಟಿಸುವ ವ್ಯವಸ್ಥೆ ಮಾಡಿದರು. ಇದನ್ನು ನನ್ನ ಸ್ನೇಹಿತರಿಗೆ ಹೇಳಿದರೆ ಅವರು ಅದನ್ನು ವಿಚಾರಿಸುವರು. ಆದರೆ ಖಂಡಿತವಾಗಿ ಮಾಸ್ಟ್ರೀಚ್‌ನ್ನು ಉಲ್ಲೇಖಿಸಬಾರದು.

“ಹೀಗೆ ಹೇಳಿ ನಾನು ಅಲ್ಲಿಂದ ಬಿಟ್ಟೆ, ನಿಮ್ಮ ಸ್ನೇಹಿತರಿಗೆಲ್ಲ ಈ ವಿಚಾರ ಗೊತ್ತು. ಯಾಕೆಂದರೆ ಇದನ್ನೆ ಹಲವರು ನನಗೂ ಹೇಳಿದ್ದಾರೆ.”

ಈ ಕಥೆ ಕೇಳಿ ನಾವೆಲ್ಲ ಬಹಳೇ ಆನಂದಿಸಿದೆವು. ವ್ಯಾನ್ಡ್ಯಾನ್ ಇನ್ನೂ ಹೆಚ್ಚಿನ ಸಂಗತಿಗಳನ್ನು ಹೇಳುತ್ತಲೇ ಜನರು ತಮ್ಮ ಕಲ್ಪನೆಗಳನ್ನು ಹೇಗೆಲ್ಲ ಹರಿಬಿಡಬಲ್ಲರು ಎಂಬುದರ ಕುರಿತಾಗಿ ತಿಳಿದು ನಾವು ಬಿದ್ದು ಬಿದ್ದು ನಕ್ಕೆವು. ಬೆಳ್ಳಂಬೆಳಿಗ್ಗೆ ನಾವಿಬ್ಬರೂ ಸೈಕಲ್ಲಿನಲ್ಲಿ ಹೋಗುತ್ತಿರುವುದನ್ನು ಕುಟುಂಬವೊಂದು ನೋಡಿತ್ತು. ಮತ್ತು ಇನ್ನೊಬ್ಬಳು ಹೆಂಗಸು ಮಧ್ಯರಾತ್ರಿಯಲ್ಲಿ ಮಿಲಿಟರಿ ಕಾರಲ್ಲಿ ನಾವು ಕರೆದುಕೊಂಡು ಬಂದವರೆಂಬ ಸಂಗತಿಯನ್ನು ಸ್ವಲ್ಪ ಸ್ಪಷ್ಟವಾಗಿಯೇ ತಿಳಿದಿದ್ದಳು.

ನಿನ್ನ
ಆನ್

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...