ಬಿಳಿಯ ಬಣ್ಣ ಬಿಳಿಯ ಬಟ್ಟೆ ಬರೆ ಇತ್ಯಾದಿಗಳಿಂದ ಕೆಲ ಸೋಂಕುಗಳು ಬರುತ್ತಿವೆಯೆಂದು ಬೆಂಗಳೂರಿನ ಖಾಸಗಿ ವೈದ್ಯ ಕಾಲೇಜಿನ ಎಡ್ಮಂಡ್ ಫರ್‍ನಾಂಡಿಸ್ ಅವರು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.

ಶ್ರೀಯುತರು ತಮ್ಮ ವರದಿಯನ್ನು ಕೇಂದ್ರ ಸರ್‍ಕಾರದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶೀಘ್ರ ನಿರ್‍ಧಾರ ಕೈಗೊಳ್ಳಬೇಕೆಂದು ಎಡ್ಮಂಡ್ ಫರ್‍ನಾಂಡಿಸ್ ಅಗ್ರಹಿಸಿದ್ದಾನೆ.

ಬಿಳಿ ಬಟ್ಟೆ ಬರೆ ಧರಿಸುವವರಿಗೊಂದು ಶಾಕ್ ನೀಡಿದ್ದಾನೆ ! ಬರೀ ಬಿಳಿ ಬಟ್ಟೆ ಧರಿಸುವುದರಿಂದ ವೃತ್ತಿಪರ ವೈದ್ಯರಾಗಲು ಮದರ್ ಥೇರಿಸಾ ಆಗಲು ಸಾಧ್ಯವಿಲ್ಲ. ರೋಗಿಗಳಿಗೆ ಭರವಸೆಯ ಉತ್ತಮ ಶೂಶ್ರೂಷೆ ನೀಡುವವರಾಗಿರಬೇಕು ಎಂದು ಶಿಫಾರಸ್ಸು ಕೂಡಾ ಮಾಡಿದ್ದಾನೆ.

ಶತ ಶತಮಾನಗಳಿಂದಲೂ ಬಿಳಿ ಬಟ್ಟೆ ಧರಿಸುವುದು ವಾಡಿಕೆ ಸಂಪ್ರದಾಯವಾಗಿ ಬಂದಿದೆ. ಈ ಬಿಳಿಯ ಬಟ್ಟೆಗಳೇ ವೈರಸ್‌ಗಳನ್ನು ಹರಡುತ್ತಿದೆಯೆಂಬುದು ಹಲವರಿಗೆ ತಿಳಿದಿರುವುದಿಲ್ಲ.

ವೈದ್ಯರು- ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ, ಬರೀಯ ಬಿಳಿ ಬಟ್ಟೆ ಧರಿಸಿ ಎಲ್ಲ ಕಡೆ, ಹೊರ ಒಳಗೆ ಅಡ್ಡಾಡುವರು. ಇದರಿಂದಾಗಿ ಸೊಂಕುಗಳು ಹರಡಲು ರೋಗ ಉಲ್ಬಣಗೊಳ್ಳಲು ಕಾರಣವಾಗಿದೆಯೆಂದು ದೃಢ ಪಡಿಸಿರುವರು.

೨೦೦೭ ರಲ್ಲಿ ಯುನೈಟೆಡ್ ಕಿಂಗ್ ಡಮ್‌ನಲ್ಲಿ ನೀಳ ತೋಳಿನ ಕೋಟ್ ಧರಿಸುವುದನ್ನು ನಿಲ್ಲಿಸುವ ಬಗ್ಗೆ ನಿಷೇಧ ಹೇರುವ ನಿರ್ಧಾರ ಕೈ ಗೊಂಡಿರುವರು.

೨೦೦೯ ರಲ್ಲಿ ಅಮೇರಿಕ ವೈದ್ಯಕೀಯ ಸಂಸ್ಥೆ ಅದನ್ನು ಅನುಸರಿಸಲು ಮುಂದಾಯಿತು. ಆದರೆ ಪ್ರತಿರೋಧದ ಹಿನ್ನಲೆಯಲ್ಲಿ ಅಂಥ ನಿರ್‍ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಎಡ್ಮಂಡ್ ಫರ್‍ನಾಂಡಿಸ್ ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದಾರೆ.

ಹೀಗೆ ಸಂಶೋಧನೆ ಕೈಗೊಳ್ಳುತ್ತಾ ಹೋದಂತೆಲ್ಲ ಹೊಸ ಹೊಸ ವಿಚಾರಗಳು ಹೊರ ಹೊಮ್ಮುತ್ತವೆ!

ನಾವು-ನೀವು ಎಲ್ಲರೂ ಸೇರಿ-ಎಡ್ಮಂಡ್ ಫರ್‍ನಾಂಡಿಸ್ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ?
*****