ಕೈಯಲ್ಲಿರುವ
ಐದೂ ಬೆರಳು
ಒಂದೇ ಸಮನಾಗಿಲ್ಲ
ಅವು ಒಂದೇ ಸಮನಾಗಿಲ್ಲ
ಮನೆಯಲ್ಲಿರುವ
ಐದೂ ಮಂದಿ
ಒಂದೇ ತರನಾಗಿಲ್ಲ
ನಾವ್ ಒಂದೇ ತರನಾಗಿಲ್ಲ
ಅಪ್ಪ ನೋಡಿದ್ರೆ ಸಿಡಿ ಮಿಡಿ
ಅಮ್ಮ ಯಾವಾಗ್ಲೋ ಗಡಿಬಿಡಿ
ಅಜ್ಜ ತುಂಬಾ ಕಾಮಿಡಿ
ಅಜ್ಜಿ ಅಯ್ಯೋ ಮಡಿ ಮಡಿ
ಶಾಲೆಲಿರೋ
ಟೀಚರ್ಸ್ ಎಲ್ಲಾ
ಒಂದೇ ಸಮನಾಗಿಲ್ಲ
ಅವರು ಒಂದೇ ಸಮನಾಗಿಲ್ಲ
ಹೆಚ್.ಎಂ ಪಾಪ ವೀಕು
ಜಿ.ಕೆ. ಮಾಸ್ತರ್ ಜೋಕು
ಬಿ.ಕೆ.ಮಾಡ್ತಾರೆ ಸ್ಮೋಕು
ಎಲ್.ಕೆ.ನಂಗೆ ಲೈಕು
ನಮ್ ಬೆಂಚಲಿ ಕೂರೋ
ಐದೂ ಮಂದಿಗೆ
ಒಂದೇ ರೂಪವಿಲ್ಲ
ನಮ್ಗೆ ಒಂದೇ ರೂಪವಿಲ್ಲ
ಸುನಿ ತುಂಬಾ ಕುಳ್ಳ
ಗುರು ಕಣ್ಣು ಮೆಳ್ಳ
ನಾನು ತುಂಬಾ ಕಪ್ಪು
ದೀಪ ತುಂಬಾ ಬಿಳುಪು
ಕೈಯಲ್ಲಿರೋ ಐದೂ ಬೆರಳು
ಬೇರೆ ಆದ್ರೆ ಏನು…?
ಮುಟ್ಟಲೆಷ್ಟೊಂದ್ ಶಕ್ತಿಯಿದೆ
ಬಲ್ಲೆ ಏನು ನೀನು…….!
ಬಣ್ಣ ಬೇರೆ, ರೂಪ ಬೇರೆ
ಆದ್ರೂ ತಾನೆ ಏನು?
ಒಟ್ಟಿಗೆ ಬಾಳೋ ಬದುಕಿನ ಪ್ರೀತಿ
ನಮ್ಮಲ್ಲಿಲ್ಲವೇನು….?
*****