ನಿತ್ಯ ನೆನೆನೆನೆ ಸತ್ಯ ಶಿವನನು
ಶರಣ ಗಾನವು ಸುರಿಯಲಿ
ನಿತ್ಯ ವಚನದ ಗಂಧ ಹರಡಲಿ
ವಿಶ್ವ ಸುಂದರವಾಗಲಿ
ಯುಗದ ಕೊನೆಯಲಿ ಕೂಗಿ ಬರುವನು
ಶಿವನು ಸಂಗಮನಾಥನು
ಇಗೋ ಸಂಗಮ ವಿಶ್ವ ಗಮಗಮ
ಜಗವ ಜಂಗಮ ಗೈವನು
ಸರಳ ಜೀವನ ಸಹಜ ಭಾವನ
ಬೆಳ್ಳಿ ಬೆಳಕನು ಕೊಡುವನು
ಜೀವ ಶಿಕ್ಷಣ ಆತ್ಮ ಶಿಕ್ಷಣ
ನೀಡಿ ರಕ್ಷಣೆಗೈವನು
ವಿಮಲ ಬದುಕಿನ ಕಮಲ ಜೀವನ
ಶಾಂತಿ ಶೀತಲ ಗೈವನು
ನಾವು ನವಿಲಿನ ನಾಟ್ಯ ಗೈಯಲು
ಜ್ಞಾನ ಮಂಚವ ಕೊಡುವನು
ಮನದ ಕನ್ನಡಿ ಮಿನುಗಿ ಹೊಳೆಯಲಿ
ಚಂದ್ರ ತಾರೆಯು ಸುರಿಯಲಿ
ಹಾಲು ಹರಿಯಲಿ ಜೇನು ಸುರಿಯಲಿ
ಭೂಮಿ ಸ್ವರ್‍ಗವ ತೂಗಲಿ
*****