ತಪಸ್ವಿ

ತೋಟದ ಗಿಡದಲ್ಲಿ ಒಂದು ಜೇಡ ಬಲೆ ಕಟ್ಟಿತ್ತು. ಕವಿ ನೋಡುತ್ತಾ ನಿಂತ. ನವಿರಾದ ಎಳೆಗಳು ಬಿಸಿಲು ಕಿರಣದಲ್ಲಿ, ಬಂಗಾರದ ನೇಯ್ಗೆಯಂತೆ ಅತ್ಯಂತ ಚೆಲುವಾಗಿತ್ತು. ವರ್ತುಲ ವರ್ತುಲವಾಗಿ ಎಳೆಗಳು ಹಾದುಹಾದು ಸುಂದರ ಜಾಲ ರಚಿಸಿತ್ತು. ಕಲಾರಾಧಕನಂತಿದ್ದ ಜೇಡ, ಮಧ್ಯದಲ್ಲಿ ಕಲಾತಪಸ್ವಿಯಂತೆ ಎಂಟುಕಾಲಿನ ಪದ್ಮಾಸನದಲ್ಲಿ ಕುಳಿತಿತ್ತು. ಪೂಜೆ, ಧ್ಯಾನ ತಪದಲ್ಲಿ ಉದರಿದ ಹೂವಿನ ದಳಗಳು, ಜೇಡದ ತೊಟ್ಟಿಲಲ್ಲಿ ಮಲಗಿತ್ತು. ಪುಟ್ಟ ಹಸಿರು ಎಲೆಗಳು ಜಾಲಕ್ಕೆ ತೋರಣ ಕಟ್ಟಿದಂತಿತ್ತು. ಹುಳು ಬಂದಾಗ ಅದನ್ನು ಮೆಲ್ಲಗೆ ಆಹ್ವಾನಿಸಿತು. ಪೂಜೆ ಅರ್ಚನೆ ಮಾಡಿತು. ಕೊನೆಗೆ ತನ್ನಲ್ಲಿ ಸ್ಥಿತ ದೈವಕ್ಕೆ ನೈವೇದ್ಯ ಮಾಡಿ ನಲಿಯಿತು.

ಇದು ಪೂಜೆಯ ಪರಮಾರ್ಥವೋ ಅಥವಾ ಇದು ಸ್ವಾರ್ಥದ ಪರಮಾವಧಿಯೋ ಒಂದು ಅರ್ಥವಾಗದೆ ಕವಿಯ ಕಣ್ಣು ಮನಗಳು ಜೇಡ ಬಲೆಯಲ್ಲಿ ಸೆರೆಯಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಸು ಬರಿಸಿದ ಮರೆವಿನ ರೋಗಕ್ಕೆ ಮದ್ದುಂಟೇ?
Next post ಹಾಡ-ಹುರುಳು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…